'ಕಾಲು ಮುರಿದುಕೊಂಡ' ಅಮೆರಿಕ ಅಧ್ಯಕ್ಷ ಬೈಡನ್!

ಜೋ ಬೈಡನ್ ಅವರು ತಮ್ಮ ಮುದ್ದಿನ ನಾಯಿ ಜಿತೆ ಆಟವಾಡುವಾಗ ಜಾರಿ ಬಿದ್ದು, ಕಾಲಿಗೆ ಫ್ರಾಕ್ಚರ್

Last Updated : Nov 30, 2020, 02:40 PM IST
  • ಜೋ ಬೈಡನ್ ಅವರು ತಮ್ಮ ಮುದ್ದಿನ ನಾಯಿ ಜಿತೆ ಆಟವಾಡುವಾಗ ಜಾರಿ ಬಿದ್ದು, ಕಾಲಿಗೆ ಫ್ರಾಕ್ಚರ್
  • ನಾಯಿ ಜತೆ ಆಟವಾಡುವಾಗ ಎಚ್ಚರ ತಪ್ಪಿ ಪಾದದ ಬಳಿ ತಿರುಚಿದ್ದರಿಂದ ವಿಪರೀತ ನೋವು
  • ಬೈಡನ್ ಅವರ ಬಳಿ ಮೇಜರ್ ಮತ್ತು ಚಾಂಪ್ ಎಂಬ ಎರಡು ಜರ್ಮನ್ ಶೆಫರ್ಡ್ ನಾಯಿಗಳಿವೆ
'ಕಾಲು ಮುರಿದುಕೊಂಡ' ಅಮೆರಿಕ ಅಧ್ಯಕ್ಷ ಬೈಡನ್! title=

ವಾಷಿಂಗ್ಟನ್: ಅಮೆರಿಕ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಮುದ್ದಿನ ನಾಯಿ ಜಿತೆ ಆಟವಾಡುವಾಗ ಜಾರಿ ಬಿದ್ದು, ಕಾಲಿಗೆ ಫ್ರಾಕ್ಚರ್ ಮಾಡಿಕೊಂಡಿದ್ದಾರೆ. ಅವರ ಪಾದದ ಮಧ್ಯಭಾಗದಲ್ಲಿ ತೆಳವಾದ ಫ್ರ್ಯಾಕ್ಚರ್ ಆಗಿದೆ. ಹೀಗಾಗಿ ಅವರು ಕೆಲವು ವಾರಗಳ ಮಟ್ಟಿಗೆ ವಾಕಿಂಗ್ ಬೂಟ್ ಧರಿಸುವುದು ಅನಿವಾರ್ಯವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಭಾನುವಾರ ಜೋ ಬೈಡನ್(Joe Biden) ತಮ್ಮ ನಾಯಿ ಮೇಜರ್ ಜತೆ ಆಟವಾಡುವಾಗ ಅವರು ಕಾಲು ಉಳಿಸಿಕೊಂಡಿದ್ದಾರೆ. 'ಆರಂಭದ ಎಕ್ಸ್‌ ರೇಗಳಲ್ಲಿ ಯಾವುದೇ ನಿಖರ ಮುರಿತ ಕಂಡುಬಂದಿರಲಿಲ್ಲ. ಆದರೆ ಅವರ ಕ್ಲಿನಿಕಲ್ ತಪಾಸಣೆಯಿಂದ ಹೆಚ್ಚಿನ ವಿವರವಾದ ಚಿತ್ರಣ ದೊರಕಿದೆ' ಎಂದು ಡಾ. ಕೆವಿನ್ ಒ ಕಾನರ್ ಭಾನುವಾರ ತಿಳಿಸಿದ್ದಾರೆ.

Burj Khalifa ಗಾತ್ರದ ಈ Asteroid ಭೂಮಿಗೆ ಡಿಕ್ಕಿ ಹೊಡೆಯಲಿದೆಯೇ? ಇಲ್ಲಿದೆ ವಿವರ

'ಜೋ ಬೈಡನ್ ಅವರ ಪಾದದಲ್ಲಿ ತೆಳುವಾದ ಬಿರುಕು ಉಂಟಾಗಿರುವುದು ಸಿಟಿ ಸ್ಕ್ಯಾನ್ ಮಾಡಿದ ಬಳಿಕ ಪತ್ತೆಯಾಗಿದೆ. ಪಾದದ ಮಧ್ಯಭಾಗದಲ್ಲಿರುವ ಪಾರ್ಶ್ವದ ಅಂಚಿನ ಮೂಳೆಯಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿದೆ. ಹೀಗಾಗಿ ಅವರಿಗೆ ಕೆಲವು ದಿನ ವಾಕಿಂಗ್ ಬೂಟ್ಸ್ ಅಗತ್ಯಬೀಳಬಹುದು' ಎಂದು ಅವರು ಹೇಳಿದ್ದಾರೆ.

Video: ಮದುವೆಯಲ್ಲಿ ಅಳಿಯನಿಗೆ ‘AK 47 ಗನ್’ ಗಿಫ್ಟ್ ಕೊಟ್ಟ ಅತ್ತೆ..!

ನಾಯಿ ಜತೆ ಆಟವಾಡುವಾಗ ಎಚ್ಚರ ತಪ್ಪಿ ಪಾದದ ಬಳಿ ತಿರುಚಿದ್ದರಿಂದ ವಿಪರೀತ ನೋವಾಗಿತ್ತು. ಹೀಗಾಗಿ ಮೂಳೆ ತಜ್ಞರ ಬಳಿ ತಪಾಸಣೆಗೆ ಹೋಗುವುದಾಗಿ ಬೈಡನ್ ಕಚೇರಿ ತಿಳಿಸಿತ್ತು. ಚುನಾವಣಾ ಪ್ರಚಾರಕ್ಕೂ ಮುನ್ನ ಬೈಡನ್ ತಂಡವು ಅವರ ವೈದ್ಯಕೀಯ ಇತಿಹಾಸದ ಸಂಕ್ಷಿಪ್ತ ವಿವರ ಬಿಡುಗಡೆ ಮಾಡಿತ್ತು. ಬೈಡನ್ ಅವರು ಆರೋಗ್ಯಯುತವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಅರ್ಹ ದೈಹಿಕ ಕ್ಷಮತೆ ಹೊಂದಿದ್ದಾರೆ ಎಂದು ಅದು ಹೇಳಿತ್ತು.

ಕೊರೊನಾ​ ಹುಟ್ಟಿದ್ದು ಭಾರತದಲ್ಲೇ! ಚೀನಾ ಕೊಟ್ಟ 'ಶಾಕಿಂಗ್'​ ಕಾರಣ ಹೀಗಿದೆ!

ಬೈಡನ್ ಅವರ ಬಳಿ ಮೇಜರ್ ಮತ್ತು ಚಾಂಪ್ ಎಂಬ ಎರಡು ಜರ್ಮನ್ ಶೆಫರ್ಡ್ ನಾಯಿಗಳಿವೆ. 2018ರ ನವೆಂಬರ್‌ನಲ್ಲಿ ಅವರು ಮೇಜರ್ ನಾಯಿಯನ್ನು ದತ್ತು ತೆಗೆದುಕೊಂಡಿದ್ದರು. 2008ರ ಡಿಸೆಂಬರ್‌ನಲ್ಲಿ ಬೈಡನ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಬೈಡನ್ ಕುಟುಂಬವನ್ನು ಚಾಂಪ್ ಸೇರಿಕೊಂಡಿತ್ತು.

ವಿಶ್ವದ ಈ ನಗರದಲ್ಲಿ ಕತ್ತಲಾಗುತ್ತಿದ್ದಂತೆ ನೇರಳೆ ಬಣ್ಣಕ್ಕೆ ತಿರುಗುವ ಆಕಾಶ

Trending News