Viral Video: ರಣವೀರ್ ಸಿಂಗ್ ಕಾಲು ಹಿಡಿದ ರಾಖಿ ಸಾವಂತ್ ಮಾಡಿದ್ದೇನು..?
ITA ಅವಾರ್ಡ್ಸ್ 2022ರ ಕಾರ್ಯಕ್ರಮದಲ್ಲಿ ಅನೇಕ ತಾರೆಯರು ಭಾಗವಹಿಸಿದ್ದರು. ಇದರಲ್ಲಿ ಭಾಗಿಯಾಗಿದ್ದ ರಾಖಿ ಸಾವಂತ್ ಮತ್ತು ರಣವೀರ್ ಸಿಂಗ್ ಅವರ ವಿಡಿಯೋ ವೈರಲ್ ಆಗುತ್ತಿದೆ. ಈ ಇಬ್ಬರು ತಾರೆಗಳು ಸಾಕಷ್ಟು ಮೋಜು-ಮಸ್ತಿ ಮಾಡಿದ್ದಾರೆ.
ನವದೆಹಲಿ: ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ ಮತ್ತು ರಾಖಿ ಸಾವಂತ್(Ranveer Singh & Rakhi Sawant) ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಈ ಇಬ್ಬರೂ ಸ್ಟಾರ್‌ಗಳು ಮೋಜು ಮಸ್ತಿ ಮಾಡುತ್ತಿರುವುದು ಕಂಡುಬಂದಿದೆ. ಇದಾದ ಬಳಿಕ ಇಬ್ಬರೂ ಕ್ಯಾಮೆರಾ ಮುಂದೆ ನಿಂತು ಜನ ಬೆಚ್ಚಿ ಬೀಳುವ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ.
ಪ್ರಶಸ್ತಿ ಕಾರ್ಯಕ್ರಮದ ವಿಡಿಯೋ ವೈರಲ್
ವಾಸ್ತವವಾಗಿ ITA 2022 ಪ್ರಶಸ್ತಿ ಪ್ರದಾನ ಸಮಾರಂಭ(ITA Awards 2022)ವನ್ನು ಇತ್ತೀಚೆಗೆ ಮುಂಬೈನಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬಾಲಿವುಡ್‌ನಿಂದ ಕಿರುತೆರೆ ಜಗತ್ತಿನ ಅನೇಕ ತಾರೆಯರು ಭಾಗವಹಿಸಿದ್ದರು. ಈ ವೇಳೆ ರಾಖಿ ಸಾವಂತ್ ಮತ್ತು ರಣವೀರ್ ಸಿಂಗ್ ರೆಡ್ ಕಾರ್ಪೆಟ್ ಮೇಲೆ ಭೇಟಿಯಾದರು.
ಇದನ್ನೂ ಓದಿ: ವಿಶ್ವದಾದ್ಯಂತ 4500 ಪರದೆಗಳಲ್ಲಿ ಅಪ್ಪು ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆ
ಒಟ್ಟಿಗೆ ನೃತ್ಯ ಮಾಡಿದ ಸ್ಟಾರ್ಸ್
ನಟ ರಣವೀರ್ ಸಿಂಗ್(Ranveer Singh) ಅವರನ್ನು ನೋಡಿದ ಕೂಡಲೇ ರಾಖಿ ಸಾವಂತ್ ತುಂಬಾ ಖುಷಿಯಾದರು. ಇದಾದ ನಂತರ ಇಬ್ಬರೂ ‘ರಾಮ್-ಲೀಲಾ’ ಚಿತ್ರದ ‘ಟಾಟರ್-ಟಾಟರ್' ಹಾಡಿಗೆ ಸಖತ್ ಆಗಿ ನೃತ್ಯ ಮಾಡಿ ನೆರೆದಿದ್ದವರ ಗಮನ ಸೆಳೆದರು.
ವಿಚಿತ್ರ ಉಡುಗೆಯಲ್ಲಿ ಬಂದಿದ್ದ ರಣವೀರ್-ರಾಖಿ
ಕಾರ್ಯಕ್ರಮಕ್ಕೆ ರಣವೀರ್ ಸಿಂಗ್ ಮತ್ತು ರಾಖಿ ಸಾವಂತ್(Rakhi Sawant) ಎಂದಿನಂತೆ ವಿಚಿತ್ರ ಉಡುಗೆಯಲ್ಲಿ ಆಗಮಿಸಿದ್ದರು. ರಣವೀರ್ ಸಿಂಗ್ ಕಪ್ಪು ಬಣ್ಣದ ಕೋಟ್ ಮತ್ತು ಪ್ಯಾಂಟ್ ಧರಿಸಿ ಕಾಣಿಸಿಕೊಂಡಿದ್ದರು. ಅವರ ಕೋಟ್ ಒಂದು ಬದಿಯಲ್ಲಿ ಬಿಳಿ ತೋಳು ಹೊಂದಿತ್ತು. ಮತ್ತೊಂದೆಡೆ ರಾಖಿ ಸಾವಂತ್ ಕೂಚ ವಿಚಿತ್ರ ವೇಷದಲ್ಲಿ ಕಾಣಿಸಿಕೊಂಡಿದ್ದರು. ಕಪ್ಪು ಬಿಗಿಯುಡುಪುಗಳೊಂದಿಗೆ ಫಳ ಫಳ ಹೊಳೆಯುವ ಜಾಕೆಟ್ ಧರಿಸಿದ್ದರು. ವಿಶೇಷವೆಂದರೆ ರಾಖಿಯವರ ಡ್ರೆಸ್ ಗಿಂತಲೂ ಹೆಚ್ಚಾಗಿ ಅವರ ಮುಖದ ಗಾತ್ರಕ್ಕಿಂತತೂ ದೊಡ್ಡದಾದ ಗುಲಾಬಿ ಹೂ ಎಲ್ಲರ ಗಮನ ಸೆಳೆದಿತ್ತು.
ಇದನ್ನೂ ಓದಿ: ರಾಧಿಕಾ ಪಂಡಿತ್ ಗೆ ಜನ್ಮದಿನದ ಸಂಭ್ರಮ: ಮುಂದಿನ ಸಿನಿಮಾ ಯಾವುದು..?
ಕ್ಯಾಮೆರಾಗೆ ವಿಚಿತ್ರ ಪೋಸ್ ನೀಡಿದ ಸ್ಟಾರ್ಸ್
ನೃತ್ಯದ ಬಳಿಕ ಈ ಇಬ್ಬರೂ ಸ್ಟಾರ್‌ಗಳು ಕ್ಯಾಮೆರಾ ಮುಂದೆ ವಿಚಿತ್ರವಾಗಿ ಪೋಸ್ ನೀಡಲು ಪ್ರಾರಂಭಿಸಿದರು. ಪೋಸ್ ನೀಡುತ್ತಿರುವ ವೇಳೆ ರಣವೀರ್ ಸಿಂಗ್ ಇದ್ದಕ್ಕಿದ್ದಂತೆ ತಮ್ಮ ಒಂದು ಕಾಲನ್ನು ಮೇಲಕ್ಕೆತ್ತಿದರು, ಅದನ್ನು ಹಿಡಿದುಕೊಂಡ ರಾಖಿ ಸಾವಂತ್(Rakhi Sawant) ಕ್ಯಾಮೆರಾ ಮುಂದೆ ವಿಚಿತ್ರವಾಗಿ ಪೋಸ್ ನೀಡಿದರು. ಇವರಿಬ್ಬರ ಈ ವಿಚಿತ್ರ ವರ್ತನೆಯಿಂದ ನೆರೆದಿದ್ದವರಿಗೆ ಭರ್ಜರಿ ಮನರಂಜನೆ ಸಿಕ್ಕಂತಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.