Watch: ಹಿಂದಿ ಮಾತನಾಡಲು ಬರದಿದ್ದಕ್ಕೆ ಪುತ್ರಿಯನ್ನೇ ಟ್ರೋಲ್ ಮಾಡಿದ್ದ ಶ್ರೀದೇವಿ...!

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಈಗ ಈ ದಿನವನ್ನು ಸ್ಮರಣಿಯವಾಗಿಸಲು ತಿರುಪತಿಗೆ ಭೇಟಿ ನೀಡಿರುವ ಫೋಟೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

Last Updated : Mar 6, 2022, 06:20 PM IST
  • 2018 ರಲ್ಲಿ ಇಶಾನ್ ಖತ್ತರ್ ಜೊತೆಗೆ ದಡಕ್ ಮೂಲಕ ಬಾಲಿವುಡ್ ಗೆ ಜಾಹ್ನವಿ ಪಾದಾರ್ಪಣೆ ಮಾಡಿದರು.
 Watch: ಹಿಂದಿ ಮಾತನಾಡಲು ಬರದಿದ್ದಕ್ಕೆ ಪುತ್ರಿಯನ್ನೇ ಟ್ರೋಲ್ ಮಾಡಿದ್ದ ಶ್ರೀದೇವಿ...!  title=

ಮುಂಬೈ: ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಈಗ ಈ ದಿನವನ್ನು ಸ್ಮರಣಿಯವಾಗಿಸಲು ತಿರುಪತಿಗೆ ಭೇಟಿ ನೀಡಿರುವ ಫೋಟೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಇನ್ನೊಂದೆಡೆಗೆ ದಡಕ್ ನಟಿಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ, ಇಂತಹ ಸಂದರ್ಭದಲ್ಲಿ ಈಗ ಮಾಧ್ಯಮಗಳ ಮುಂದೆ ಸ್ಪಷ್ಟವಾಗಿ ಹಿಂದಿ ಮಾತನಾಡಲು ತಡವರಿಸುತ್ತಿರುವುದಕ್ಕೆ ಸ್ವತಃ ತಾಯಿ ಶ್ರೀದೇವಿಯಿಂದ ಟ್ರೋಲ್ ಆಗಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ಘಟನೆ 2012 ರಲ್ಲಿ ಜರುಗಿದ್ದ ಆಗ ಜಾಹ್ನವಿ (Janhvi Kapoor) ಕೇವಲ 15 ವರ್ಷದ ಬಾಲಕಿ, ಆಗ ಹಿಂದಿಯಲ್ಲಿ ಮಾತನಾಡಲು ಆಕೆಯನ್ನು ಒತ್ತಾಯಿಸಿದಾಗ ಆಕೆಗೆ ಸ್ಪಷ್ಟವಾದ ಹಿಂದಿ ಮಾತನಾಡಲು ಬರದಿರುವುದಕ್ಕೆ ಸ್ವತಃ ತಾಯಿ ಶ್ರೀದೇವಿ ಪುತ್ರಿಯನ್ನು ಟ್ರೋಲ್ ಮಾಡಿದ್ದಾರೆ. ಈಗ ಈ ವಿಡಿಯೋವನ್ನು ಹಲವಾರು ಫ್ಯಾನ್  ಗ್ರೂಪ್ಸ್ ಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಳ್ಳುತ್ತಿವೆ.

ಇದನ್ನೂ ಓದಿ: Janhvi Kapoor: ನಟನೆ ಬಿಟ್ಟು ಕ್ರಿಕೆಟರ್ ಆದ ಬಾಲಿವುಡ್ ನಟಿ ಜಾಹ್ನವಿ ಕಪೂರ್..! 

2018 ರಲ್ಲಿ ಇಶಾನ್ ಖತ್ತರ್ ಜೊತೆಗೆ ದಡಕ್ ಮೂಲಕ ಬಾಲಿವುಡ್ ಗೆ ಜಾಹ್ನವಿ ಪಾದಾರ್ಪಣೆ ಮಾಡಿದರು, ಆದರೆ ದುರಾದೃಷ್ಟ ಸಂಗತಿ ಎಂದರೆ ಈ ಚಿತ್ರದ  ಬಿಡುಗಡೆಗೂ ಮುನ್ನ ನಟಿ ಶ್ರೀದೇವಿ (Sridevi) ಕಪೂರ್ ಅವರು ಸಾವನ್ನಪ್ಪಿದ್ದರಿಂದಾಗಿ ಈ ಸಿನಿಮಾ ಬಿಡುಗಡೆಯನ್ನು ನೋಡಲು ಸಾಧ್ಯವಾಗಲಿಲ್ಲ. ಆದರೆ ಈ ಸಿನಿಮಾ ಆಕೆಗೆ ಅಷ್ಟಾಗಿ ಹೆಸರು ತಂದುಕೊಡದೇ ಇದ್ದರೂ ಸಹಿತ ನಂತರ ಹಲವಾರು ಪ್ರಮುಖ ಚಿತ್ರಗಳಲ್ಲಿ ನಟಿಸುವ ಮೂಲಕ ತಾವೊಬ್ಬ ಪ್ರಬುದ್ಧ ನಟಿ ಎನ್ನುವುದನ್ನು ಜಾಹ್ನವಿ ಸಾಬೀತುಪಡಿಸಿದರು.

ಇದನ್ನೂ ಓದಿ: Janhvi Kapoor:ಗುಲಾಬಿ ಸೀರೆಯುಟ್ಟು ಮಿಂಚಿದ ಜಾನ್ವಿ ಕಪೂರ್.. ನೆಟ್ಟಿಗರು ಕ್ಲೀನ್​ ಬೋಲ್ಡ್

ಇದರಲ್ಲಿ ಪ್ರಮುಖವಾಗಿ ಜಾನ್ವಿ 'ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್' ಮತ್ತು 'ರೂಹಿ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆನಂದ್ ಎಲ್ ರೈ ಅವರ 'ಗುಡ್ ಲಕ್ ಜೆರ್ರಿ', ಕರಣ್ ಜೋಹರ್ ಅವರ 'ದೋಸ್ತಾನಾ 2' ಮತ್ತು 'ತಖ್ತ್' ಸೇರಿದಂತೆ ಇತರ ಆಸಕ್ತಿದಾಯಕ ಸಿನಿಮಾಗಳಲ್ಲಿ ಅವರು ಮುಂಬರುವ ದಿನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News