Anishka Sharma - Virat Kohli : ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಅಡುಗೆಮನೆಯಲ್ಲಿ ತೆಗೆದುಕೊಂಡ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮುದ್ದಾದ ಸ್ಟಾರ್‌ ಜೋಡಿಗಳಲ್ಲಿ ಒಂದಾಗಿದ್ದಾರೆ. ಪ್ರತಿ ಬಾರಿ ಅವರು ತಮ್ಮ ಸ್ನ್ಯಾಪ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ, ಅವರ ಅಭಿಮಾನಿಗಳ ಮನಸೆಳೆಯುತ್ತಾರೆ. ಮುಂದಿನ ತಿಂಗಳು ತಮ್ಮ 5 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಿರುವ ದಂಪತಿಗಳು ಇತ್ತೀಚೆಗೆ ಉತ್ತರಾಖಂಡಕ್ಕೆ ಪ್ರವಾಸಕ್ಕೆ ತೆರಳಿದ್ದರು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Ashika Ranganath Photos : ಪಟಾಕಿ ಪೋರಿ.. ನಾಟಿ ಚೋರಿ.. ಯುವಕರ ಹೃದಯ ಕದ್ದ ಮದನಾರಿ!


ಇದೀಗ ತಮ್ಮ ಥ್ರೋಬ್ಯಾಕ್ ಫೋಟೋದಿಂ ಸುದ್ದಿಯಲ್ಲಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರೇಮ ಪಕ್ಷಿಗಳ ಥ್ರೋಬ್ಯಾಕ್ ಫೋಟೋ ಇಂದು ಇಂಟರ್ನೆಟ್‌ನ ಟ್ರೆಂಡಿಂಗ್‌ ವಿಚಾರಗಳಲ್ಲಿ ಒಂದಾಗಿದೆ. ವಿರಾಟ್‌ ಕೊಹ್ಲಿ ಏನನ್ನೋ ತಯಾರಿಸುತ್ತಿದ್ದು, ಅನುಷ್ಕಾ ಅವರನ್ನು ತಬ್ಬಿಕೊಂಡಿರುವುದನ್ನು ಈ ಫೋಟೋದಲ್ಲಿ ಕಾಣಬಹುದು.


[[{"fid":"267566","view_mode":"default","fields":{"format":"default","field_file_image_alt_text[und][0][value]":"Virat Kohli and Anushka Sharma","field_file_image_title_text[und][0][value]":"ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ"},"type":"media","field_deltas":{"1":{"format":"default","field_file_image_alt_text[und][0][value]":"Virat Kohli and Anushka Sharma","field_file_image_title_text[und][0][value]":"ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ"}},"link_text":false,"attributes":{"alt":"Virat Kohli and Anushka Sharma","title":"ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ","class":"media-element file-default","data-delta":"1"}}]]


ಸೆಲೆಬ್ರಿಟಿ ದಂಪತಿಗಳು ಸ್ನ್ಯಾಪ್‌ನಲ್ಲಿ ಮುದ್ದಾಗಿ ಕಾಣುತ್ತಿದ್ದರೆ, ನೆಟಿಜನ್‌ಗಳು ಅವರ ಅಶುದ್ಧ ಅಡುಗೆಮನೆಯ ಬಗ್ಗೆ ಕಾಮೆಂಟ್‌ ಮಾಡುತ್ತಿದ್ದಾರೆ. ಅನೇಕರು ಈ ಫೋಟೋ ಬಗ್ಗೆ ಒಳ್ಳೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದರೆ, ಇನ್ನೂ ಕೆಲವರು ಅವರ ಅಡುಗೆ ಮನೆಯ ಅಸ್ವಚ್ಛತೆಯ ಬಗ್ಗೆ ಮಾತನಾಡುತ್ತಿದ್ದಾರೆ. ನಿಮ್ಮ ಅಡುಗೆ ಮನೆ ಏಕೆ ಇಷ್ಟೊಂದು ಗಲೀಜಾಗಿದೆ ಎಂದು ಹಲವರು ಪ್ರಶ್ನಿಸಿದ್ದಾರೆ. ಮತ್ತಷ್ಟು ಜನ ಇವರ ಮನೆಗಿಂತ ನಮ್ಮ ಮನೆಯ ಅಡುಗೆ ಮನೆ ತುಂಬಾ ನೀಟ್ ಆಗಿದೆ ಎಂದಿದ್ದಾರೆ. ಹೀಗೆ ವಿರುಷ್ಕಾ ಫೋಟೋಗಿಂತ ಹೆಚ್ಚಾಗಿ ಅವರ ಅಡುಗೆಮನೆಯ ಬಗ್ಗೆ ಅನೇಕರು ಕಾಮೆಂಟ್‌ ಮಾಡುತ್ತಿದ್ದಾರೆ. 


ಇದನ್ನೂ ಓದಿ : ಒಂದೇ ಗುಡಿಯಲ್ಲಿ ಅಪ್ಪು-ಅಂಬಿ ಪುತ್ಥಳಿ : ಸುಮಲತಾ, ಅಶ್ವಿನಿಯವರಿಂದ ನಾಳೆ ಉದ್ಘಾಟನೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.