ನವದೆಹಲಿ:  ಕ್ರಿಕೆಟ್ ಹಾಗೂ ಬಾಲಿವುಡ್ ಅಭಿಮಾನಿಗಳ ನೆಚ್ಚಿನ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ. ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೋಡಿಯನ್ನು ಅವರ ಬಹುತೇಕ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಆದರೆ ಅನುಷ್ಕಾ ಶರ್ಮಾ ಅವರನ್ನು ಭೇಟಿಯಾಗುವ ಮೊದಲು ವಿರಾಟ್ ಕೊಹ್ಲಿ ಬೇರೊಬ್ಬ  ನಟಿಯ ಅಭಿಮಾನಿಯಾಗಿದ್ದರು ಎಂದು ತಿಳಿದರೆ ಬಹುಶಃ ನಿಮಗೆ ಆಶ್ಚರ್ಯವಾಗಬಹುದು. ಹೌದು, ಇತ್ತೀಚಿಗೆ ವೈರಲ್ ಆಗಿರುವ ವೈರಲ್ ವಿಡಿಯೋದಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.


COMMERCIAL BREAK
SCROLL TO CONTINUE READING

ವಿರಾಟ್ ಅವರ ವಿಡಿಯೋ ವೈರಲ್:
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಜೋಡಿಯನ್ನು ಇಷ್ಟಪಡದವರೇ ಇಲ್ಲ. ಈ ಇಬ್ಬರೊಂದಿಗಿನ ಫೋಟೋಗಳು ಮತ್ತು ವೀಡಿಯೊಗಳು ಹೆಚ್ಚಾಗಿ ಸಾಮಾಜಿಕ ಮಾಧ್ಯಮದ ಮುಖ್ಯಾಂಶಗಳಲ್ಲಿರುತ್ತವೆ. ಆದರೆ ವಿರಾಟ್ ಕೊಹ್ಲಿ ಕತ್ರಿನಾ ಕೈಫ್ ಅವರೊಂದಿಗೆ ಮಾತನಾಡುವುದು ಕೂಡ ಅವರ ಒಂದು ಸಾಧನೆ ಎಂದುಕೊಳ್ಳುತ್ತಿದ್ದ ಒಂದು ಸಮಯವಿತ್ತು. ಈ ಬಗ್ಗೆ ಸ್ವತಃ ತಿಳಿಸಿರುವ ವಿರಾಟ್ ಕೊಹ್ಲಿ, ಬಾಲಿವುದು ನಟಿ ಕತ್ರಿನಾ ಕೈಫ್ ಅವರೊಂದಿಗೆ ಕೇವಲ ಎರಡೇ ಎರಡು ನಿಮಿಷ ಮಾತನಾಡಿದರೂ ಕೂಡ ಮೈದಾನದ ಹೊರಗೆ ಅದು ನನ್ನ ದೊಡ್ಡ ಸಾಧನೆ ಎಂದು ಹೇಳಿಕೊಂಡಿದ್ದ ಹಳೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.


 

 

 

 

 



ಇದನ್ನೂ ಓದಿ - VIDEO : ವಿರಾಟ್ ಕೊಹ್ಲಿಯನ್ನು ಲಿಫ್ಟ್ ಮಾಡಿದ ಅನುಷ್ಕ ; ಫ್ಯಾನ್ಸ್ ನೀಡಿದ ಪ್ರತಿಕ್ರಿಯೆ ಹೀಗಿತ್ತು


ಕತ್ರಿನಾ ಕೈಫ್ ಅವರ ದೊಡ್ಡ ಅಭಿಮಾನಿಯಾಗಿದ್ದ ವಿರಾಟ್ ಕೊಹ್ಲಿ:
ಈ ದಿನಗಳಲ್ಲಿ, ಕ್ರಿಕೆಟಿಗ ವಿರಾಟ್ ಕೊಹ್ಲಿಯ ಹಳೆಯ ವಿಡಿಯೋ ಇದ್ದಕ್ಕಿದ್ದಂತೆ ವೈರಲ್ ಆಗುತ್ತಿದೆ, ಇದರಲ್ಲಿ ಅವರು ಅವರ ದೊಡ್ಡ ಸಾಧನೆಯ ಬಗ್ಗೆ ಮಾತನಾಡುತ್ತಾರೆ. ಇದರೊಂದಿಗೆ ಕತ್ರಿನಾ ಕೈಫ್ (Katrina Kaif) ಅವರೊಂದಿಗೆ 2 ನಿಮಿಷಗಳ ಕಾಲ ಮಾತನಾಡಿದರೂ ಅದು ನನ್ನ ಪ್ರಕಾರ ಮೈದಾನದ ಹೊರಗಿನ ಅತಿದೊಡ್ಡ ಸಾಧನೆ ಎಂದು ವಿರಾಟ್ ಹೇಳಿದ್ದಾರೆ.


ಇದನ್ನೂ ಓದಿ - Virushka : ವೈರಲ್ ಆಯ್ತಾ ವಿರಾಟ್ ಅನುಷ್ಕಾ ಪುತ್ರಿಯ ಫೋಟೋ...?


 


2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರುಷ್ಕಾ:
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಅವರು 11 ಡಿಸೆಂಬರ್ 2017 ರಂದು ಸಪ್ತಪದಿ ತುಳಿದರು. ಈ ದಂಪತಿ ಈ ವರ್ಷ ಆರಂಭದಲ್ಲಿ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ.


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.