Katrina Kaif: ಬಾಲಿವುಡ್ ನಟಿ 'ಕತ್ರಿನಾ ಕೈಫ್' ಗೂ ಕೊರೋನಾ ಪಾಸಿಟಿವ್..!

"ನಾನು ಕೋವಿಡ್ 19 ಪಾಸಿಟಿವ್ ಆಗಿದೆ. ನಾನು ತಕ್ಷಣ ಹೋಂ ಕ್ವಾರಂಟೈನ್ ಆಗಿದ್ದೇನೆ. ನಾನು ವೈದ್ಯರ ಸಲಹೆಯ ಮೇರೆಗೆ ಕೋವಿಡ್ ಗೆ ಸಂಬಂಧಿಸಿದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದೇನೆ. ನನ್ನ  ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರು ಕೂಡಲೇ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ವಿನಂತಿಸುತ್ತಿದ್ದೇನೆ."

Written by - Channabasava A Kashinakunti | Last Updated : Apr 6, 2021, 06:10 PM IST
  • ಕೊರೋನಾ ಎರಡನೇ ಏಲ್ ಜೋರಾಗಿದೆ.
  • ಬಾಲಿವುಡ್ ನಟಿ ಕತ್ರಿನಾ ಕೈಫ್ ಕೊರೋನಾ ಪಾಸಿಟಿವ್
  • "ನಿಮ್ಮೆಲ್ಲರ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಕೃತಜ್ಞನಾಗಿದ್ದೇನೆ"
Katrina Kaif: ಬಾಲಿವುಡ್ ನಟಿ 'ಕತ್ರಿನಾ ಕೈಫ್' ಗೂ ಕೊರೋನಾ ಪಾಸಿಟಿವ್..! title=
DNA news

ಮುಂಬೈ: ಕೊರೋನಾ ಎರಡನೇ ಏಲ್ ಜೋರಾಗಿದೆ. ಪ್ರಸ್ತುತ ಕೆಲ ದಿನಗಳಿಂದ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ಕೊರೋನಾ ಕಳೆದ ಮೂರೂ ನಾಲ್ಕು ದಿನಗಳಲ್ಲಿ, ಅಕ್ಷಯ ಕುಮಾರ್, ವಿಕಿ ಕೌಶಲ್, ಭೂಮಿ ಪಡ್ನೆಕರ್, ಗೋವಿಂದ ಕಾರ್ತಿಕ್ ಆರ್ಯನ್ ಗೆ ಕೊರೋನಾ ಪಾಸಿಟಿವ್ ಆಗಿದೆ.  ಇಂದು ಮತ್ತೊಬ್ಬ ಬಾಲಿವುಡ್ ನಟಿಗೆ ಕೊರೋನಾ ಪಾಸಿಟಿವ್ ಆಗಿದೆ. ಅದು ಬೇರೆ ಯಾರು ಅಲ್ಲ ಕತ್ರಿನಾ ಕೈಫ್. 

ಹೌದು, ಬಾಲಿವುಡ್ ನಟಿ ಕತ್ರಿನಾ ಕೈಫ್(Katrina Kaif) ಕೊರೋನಾ ಪಾಸಿಟಿವ್ ಆಗಿದೆ. ಈ ಕುರಿತು ನಟಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ : Kareena Kapoor Baby Boy: ಕರೀನಾ ಕಪೂರ್ ಎರಡನೇ ಮಗು ಎಷ್ಟು 'ಕ್ಯೂಟ್' ಇದೆ ಗೊತ್ತಾ?

ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದು ಕೊಂಡಿರುವ ಕತ್ರಿನಾ ಕೈಫ್',  "ನಾನು ಕೋವಿಡ್ 19(COVID-19) ಪಾಸಿಟಿವ್ ಆಗಿದೆ. ನಾನು ತಕ್ಷಣ ಹೋಂ ಕ್ವಾರಂಟೈನ್ ಆಗಿದ್ದೇನೆ. ನಾನು ವೈದ್ಯರ ಸಲಹೆಯ ಮೇರೆಗೆ ಕೋವಿಡ್ ಗೆ ಸಂಬಂಧಿಸಿದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದೇನೆ. ನನ್ನ  ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರು ಕೂಡಲೇ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ವಿನಂತಿಸುತ್ತಿದ್ದೇನೆ." ಬರೆದು ಕೊಂಡಿದ್ದಾರೆ.  

ಇದನ್ನೂ ಓದಿ : Deepika Padukone:'ಪಿಕು' ನಂತರ ಮತ್ತೆ ಅಮಿತಾಬ್ ಬಚ್ಚನ್ ಜೊತೆ ದೀಪಿಕಾ ಪಡುಕೋಣೆ

"ನಿಮ್ಮೆಲ್ಲರ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಕೃತಜ್ಞನಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ನಡುರಾತ್ರಿ Aishwarya Rai ಮನೆಗೆ Salman Khan ಭೇಟಿ ನೀಡಿದ್ದಾಗ ನಡೆದಿದ್ದೇನು?

ಸೋಮವಾರ, ಮುಂಬೈನಲ್ಲಿ(Mumbai) ಕಳೆದ 24 ಗಂಟೆಗಳಲ್ಲಿ 9,857 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ, ದೇಶದಲ್ಲಿ ಒಟ್ಟು 103,558 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ : Vicky Kaushal : 'ಉರಿ ಸಿನಿಮಾ' ನಾಯಕ 'ವಿಕಿ ಕೌಶಲ್ ಗೆ ಕೊರೋನಾ ಪಾಸಿಟಿವ್'!

ಸಧ್ಯ ಕತ್ರಿನಾ ಕೈಫ್ ಹಲವಾರು ಸಿನಿಮಾಗಲ್ಲಿ ನಟಿಸುತ್ತಿದ್ದಾರೆ. ಫೋನ್ ಬೂತ್(Phone Booth) ಎಂಬ ಚಿತ್ರದಲ್ಲಿ  ಇಶಾನ್ ಖಟ್ಟರ್ ಮತ್ತು ಸಿದ್ಧನಾತ್ ಚತುರ್ವೇದಿ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಗುರ್ಮೆತ್ ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ಇದಲ್ಲದೆ, ಅವರು ಟೈಗರ್ ಫ್ರ್ಯಾಂಚೈಸ್ ನಲ್ಲಿ  ಸಲ್ಮಾನ್ ಸಲ್ಮಾನ್ ಖಾನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಮನೀಶ್ ಶರ್ಮಾ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  
 

Trending News