ಮುಂಬೈ: ಭಾರತೀಯ ಸಿನಿಮಾರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಹೆಸರು ಪಡೆದುಕೊಂಡಿರುವ ಸಲ್ಮಾನ್ ಖಾನ್ ಜಗತ್ತಿನಲ್ಲೆಡೆ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.


COMMERCIAL BREAK
SCROLL TO CONTINUE READING

ಅವರ ಅಭಿಮಾನಿ ಬಳಗವು ಯಾವುದೇ ಹಾಲಿವುಡ್ ನಟರಿಗಿಂತಲೂ ಕಡಿಮೆ ಏನಿಲ್ಲ, ಆದರೆ ಇತ್ತೀಚಿಗೆ ಅವರು ಜಾಯ್ ಅವಾರ್ಡ್ 2022 ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ತಮ್ಮನ್ನು ಹಾಲಿವುಡ್ ನಟ ಜಾನ್ ತ್ರವೊಲ್ಸ್ ಗೆ ಪರಿಚಯ ಮಾಡಿಸಿಕೊಂಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ.


ಪುರುಷರ ಟಾಯ್ಲೆಟ್​ಗೆ ನುಗ್ಗಿದ್ದ ದೀಪಿಕಾ, ಆಲಿಯಾ.. ಆ ರಾತ್ರಿ ನಡೆದಿದ್ದಾದರೂ ಏನು?


ಹೌದು ಸೌದಿ ಅರೇಬಿಯಾದ ರಿಯಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಈಗ ಹಾಲಿವುಡ್ ನಟ ಎದುರಿಗೆ ಪರಿಚಯಕೊಂಡಿರುವ ರೀತಿ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಲ್ಮಾನ್ ಖಾನ್ ಗೆ ಪರ್ಸನಾಲಿಟಿ ಆಫ್ ದಿ ಇಯರ್ ಪ್ರಶಸ್ತಿ ದೊರೆತಿದೆ.ಇನ್ನೊಂದೆಡೆಗೆ ಹಾಲಿವುಡ್ ನಟ ಜಾನ್ ತ್ರವೊಲ್ಸ್ ಗೆ ಜೀವಮಾನದ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


ಇಂತಹ ಸಂದರ್ಭದಲ್ಲಿ ಸಲ್ಮಾನ್ ಖಾನ್ ನಾನು ಭಾರತೀಯ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಅವರಿಗೆ ಹೇಳುತ್ತಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಸಲ್ಮಾನ್ ಖಾನ್ ಅವರ ವಿನಯತೆಯನ್ನು ಮೆಚ್ಚಿಕೊಂಡಾಡಿದ್ದಾರೆ.ಅಷ್ಟು ದೊಡ್ಡ ಸ್ಟಾರ್ ನಟನಾಗಿದ್ದರೂ ಕೂಡ ಸಲ್ಮಾನ್ ಖಾನ್ ತಮ್ಮನ್ನು ವಿನಯಪೂರ್ವಕವಾಗಿ ಪರಿಚಯಿಸಿಕೊಂಡಿರುವುದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.


ಇದನ್ನೂ ಓದಿ : Rishabh Pant: ರಿಷಭ್ ಪಂತ್‌ನಿಂದ ಈ ಮೂವರು ಆಟಗಾರರ ವೃತ್ತಿಜೀವನಕ್ಕೆ ಕಂಟಕ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.