ಪುರುಷರ ಟಾಯ್ಲೆಟ್​ಗೆ ನುಗ್ಗಿದ್ದ ದೀಪಿಕಾ, ಆಲಿಯಾ.. ಆ ರಾತ್ರಿ ನಡೆದಿದ್ದಾದರೂ ಏನು?

ಅವರು ಪುರುಷರ ಟಾಯ್ಲೆಟ್​ಗೆ ಹೋಗಿರುವುದಾಗಿ ಎಂದು ನಟಿ ದೀಪಿಕಾ ಹೇಳಿದ್ದಾರೆ. ಈ ವೇಳೆ ಆಲಿಯಾ ಭಟ್ ಕೂಡ ತಮ್ಮ ಜೊತೆಗಿದ್ದರು ಎಂದಿದ್ದಾರೆ.

Edited by - Chetana Devarmani | Last Updated : Jan 30, 2022, 06:57 PM IST
  • ಗೆಹರಾಯಿಯಾ ಚಿತ್ರದ ಪ್ರಚಾರದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
  • ಮಿಸ್ ಮಾಲಿನಿ ಅವರೊಂದಿಗೆ ಸಂಭಾಷಣೆಯನ್ನು ನಡೆಸಿದರು
  • ಪುರುಷರ ಟಾಯ್ಲೆಟ್​ಗೆ ನುಗ್ಗಿದ್ದ ದೀಪಿಕಾ, ಆಲಿಯಾ
ಪುರುಷರ ಟಾಯ್ಲೆಟ್​ಗೆ ನುಗ್ಗಿದ್ದ ದೀಪಿಕಾ, ಆಲಿಯಾ.. ಆ ರಾತ್ರಿ ನಡೆದಿದ್ದಾದರೂ ಏನು?  title=
ದೀಪಿಕಾ, ಆಲಿಯಾ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಅವರ ಚಿತ್ರ ಗೆಹರಾಯಿಯಾ (Gehraiyaan) ಶೀಘ್ರದಲ್ಲೇ OTT ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಉಳಿದ ತಾರಾಗಣಗಳಾದ ಅನನ್ಯ ಪಾಂಡೆ, ಸಿದ್ಧಾಂತ್ ಚತುರ್ವೇದಿ, ಧೈರ್ಯ ಕರ್ವಾ ಮತ್ತು ನಿರ್ದೇಶಕ ಶಕುನ್ ಬಾತ್ರಾ ಅವರೊಂದಿಗೆ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. 

ಇದನ್ನೂ ಓದಿ:  ಟಾಲಿವುಡ್ ನಲ್ಲೂ ಕಿಚ್ಚನ ಹವಾ... ಫೆಬ್ರವರಿ 4ರಂದು ರಿಲೀಸ್ ಆಗುತ್ತಿದೆ ಸುದೀಪ್ ಸಿನಿಮಾ

ಇತ್ತೀಚೆಗೆ, ಧೈರ್ಯ ಅವರನ್ನು ಹೊರತುಪಡಿಸಿ, ಇತರ ನಾಲ್ವರು ತಾರೆಯರು ಮಿಸ್ ಮಾಲಿನಿ (Miss Malini) ಅವರೊಂದಿಗೆ ಸಂಭಾಷಣೆಯನ್ನು ನಡೆಸಿದರು, ಅಲ್ಲಿ ದೀಪಿಕಾ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಒಮ್ಮೆ ಸಂಗೀತ ಕಚೇರಿಯ ಮಧ್ಯದಲ್ಲಿ, ಶೌಚಾಲಯಕ್ಕೆ ಹೋಗಬೇಕಾಗಿತ್ತು ಮತ್ತು ಮಹಿಳೆಯರ ವಾಶ್ ರೂಂನ ಹೊರಗೆ ಬಹಳ ಉದ್ದವಾದ ಸಾಲು ಇತ್ತು. ಆದ್ದರಿಂದ ಅವರು ಪುರುಷರ ಟಾಯ್ಲೆಟ್​ಗೆ ಹೋಗಿರುವುದಾಗಿ ಎಂದು ನಟಿ ದೀಪಿಕಾ ಹೇಳಿದ್ದಾರೆ. ಈ ವೇಳೆ ಆಲಿಯಾ ಭಟ್ (Alia Bhat) ಕೂಡ ತಮ್ಮ ಜೊತೆಗಿದ್ದರು ಎಂದಿದ್ದಾರೆ.

ಸಂದರ್ಶನದ ವೇಳೆ,  ದೀಪಿಕಾಗೆ "ಗರ್ಲ್ಸ್​​ ಟಾಯ್ಲೆಟ್​ ಕ್ಲೋಸ್​ ಆಗಿದ್ದರೆ, ಆಗ ಬಾಯ್ಸ್​ ಟಾಯ್ಲೆಟ್​ ಬಳಸುತ್ತೀರಾ?" ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಮೊದಲು ಉತ್ತರಿಸಿದ ಅನನ್ಯಾ ಪಾಂಡೆ (Ananya Pande), "ಸ್ವಚ್ಛವಾಗಿದ್ದರೆ ನಾನು ಹುಡುಗರ ಶೌಚಾಲಯ​ ಬಳಕೆ ಮಾಡುತ್ತೇನೆ" ಎಂದರು.  ಈ ವೇಳೆ ಸಿದ್ಧಾಂತ್​, "ನೂರಕ್ಕೆ ನೂರು, ದೀಪಿಕಾ ಆ ಕೆಲಸ ಮಾಡುವುದಿಲ್ಲ" ಎಂದರು. 

ಇದಕ್ಕೆ ನಗುತ್ತಲೇ ಉತ್ತರಿಸಿದ ದೀಪಿಕಾ, "ನಾನು ಬಾಯ್ಸ್​ ಟಾಯ್ಲೆಟ್​ ಬಳಸುತ್ತೇನೆ. ಈ ಮೊದಲು ಕೂಡ ಆ ರೀತಿ ಮಾಡಿದ್ದೇನೆ. ನಾನು ಮತ್ತು ಆಲಿಯಾ ಗರ್ಲ್ಸ್​ ಟಾಯ್ಲೆಟ್​ಗೆ ಹೋದೆವು. ಆದರೆ, ಅಲ್ಲಿ ಒಂದು ಉದ್ದನೆಯ ಕ್ಯು ಇತ್ತು. ಆಗ ನಾವು ಪುರುಷರ ಟಾಯ್ಲೆಟ್​ಗೆ ಹೋದೆವು. ನನಗೆ ಶೌಚಾಲಯ ಬಳಸುವ ಸಂದರ್ಭ ಬಂದರೆ, ಎಲ್ಲಾದರೂ ಸರಿ ನಾನು ಅದನ್ನು ಬಳಸುತ್ತೇನೆ" ಎಂಡು ಹೇಳಿದ್ದಾರೆ.

ಇದನ್ನೂ ಓದಿ:  Hrithik Roshan:ಯುವ ನಟಿಯೊಂದಿಗೆ ಹೃತಿಕ್​ ರೋಷನ್​ ಡೇಟಿಂಗ್? ಕೈ-ಕೈ ಹಿಡಿದು ಓಡಾಡುವ ದೃಶ್ಯ ವೈರಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News