Rishabh Pant: ರಿಷಭ್ ಪಂತ್‌ನಿಂದ ಈ ಮೂವರು ಆಟಗಾರರ ವೃತ್ತಿಜೀವನಕ್ಕೆ ಕಂಟಕ..!

ರಿಷಭ್ ಪಂತ್ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರುವುದರಿಂದ ಅನೇಕ ವಿಕೆಟ್ ಕೀಪರ್‌ಗಳ ವೃತ್ತಿಜೀವನಕ್ಕೆ ಮಾರಕವಾಗಿದೆ.

Written by - Puttaraj K Alur | Last Updated : Jan 30, 2022, 07:39 AM IST
  • ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ ಅತ್ಯುತ್ತಮ ಪ್ರದರ್ಶನ
  • ರಿಷಭ್ ಪಂತ್ ಉತ್ತಮ ಪ್ರದರ್ಶನ ಮುಂದುವರಿಸಿದರೆ ಅನೇಕರ ವೃತ್ತಿಜೀವನಕ್ಕೆ ಕಂಟಕ
  • ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಮತ್ತು ಕೆ.ಎಸ್.ಭರತ್ ಗೆ ಸಿಗುತ್ತಿಲ್ಲ ಹೆಚ್ಚಿನ ಅವಕಾಶ
Rishabh Pant: ರಿಷಭ್ ಪಂತ್‌ನಿಂದ ಈ ಮೂವರು ಆಟಗಾರರ ವೃತ್ತಿಜೀವನಕ್ಕೆ ಕಂಟಕ..!   title=
ರಿಷಭ್ ಪಂತ್ ಸದ್ಯ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ

ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್(Rishabh Pant) ಪ್ರಸ್ತುತ ವಿಶ್ವದ ಅತ್ಯುತ್ತಮ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರು. ಪಂತ್ ವಿಕೆಟ್‌ಕೀಪರ್ ಆಗಿ ತಂಡ ಸೇರಿಕೊಂಡಾಗಿನಿಂದ ಇನ್ನುಳಿದ ವಿಕೆಟ್‌ಕೀಪರ್‌ಗೆ ತಂಡದಲ್ಲಿ ಸ್ಥಾನ ಪಡೆಯುವುದು ತುಂಬಾ ಕಷ್ಟಕರವಾಗಿದೆ. ಮಾಜಿ ನಾಯಕ ಎಂ.ಎಸ್.ಧೋನಿ ನಿವೃತ್ತಿಯ ನಂತರ ಟೀಂ ಇಂಡಿಯಾದಲ್ಲಿ ಪಂತ್‌ಗಿಂತ ಮತ್ತೊಬ್ಬ ಉತ್ತಮ ವಿಕೆಟ್ ಕೀಪರ್ ಆಟಗಾರನಿಲ್ಲ. ಪಂತ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರುವುದರಿಂದ ಅನೇಕ ವಿಕೆಟ್ ಕೀಪರ್‌ಗಳ ವೃತ್ತಿಜೀವನಕ್ಕೆ ಮಾರಕವಾಗಿದೆ. ಇವರು ಯಾರು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿರಿ.

ಇಶಾನ್ ಕಿಶನ್

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಪ್ರತಿವರ್ಷ ಉತ್ತಮ ಪ್ರದರ್ಶನ ನೀಡುತ್ತಿರುವ ಇಶಾನ್ ಕಿಶನ್(Ishan Kishan) ಶ್ರೇಷ್ಠ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ ಮನ್. ಐಪಿಎಲ್ 2020ರಲ್ಲಿ ಅವರು ಕೇವಲ 14 ಪಂದ್ಯಗಳಲ್ಲಿ 57ರ ಸರಾಸರಿಯಲ್ಲಿ 516 ರನ್ ಗಳಿಸಿದ್ದರು. ಕಿಶನ್ 2021ರ ಸೀಸನ್‌ನಲ್ಲಿಯೂ ಇದೇ ರೀತಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದರ ನಂತರ ಅವರಿಗೆ ಟಿ-20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಅವಕಾಶ ನೀಡಲಾಯಿತು. ಆದರೆ ಅಂದಿನಿಂದ ಅವರಿಗೆ ಹೆಚ್ಚು ಅವಕಾಶಗಳು ಸಿಕ್ಕಿಲ್ಲ. ಈ ಆಟಗಾರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ತಂಡದಲ್ಲಿದ್ದರೂ ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ. ಈಗ ವೆಸ್ಟ್ ಇಂಡೀಸ್(India Vs West Indies) ವಿರುದ್ಧ ಇಶಾನ್ ಅವರನ್ನು ಕೈಬಿಡಲಾಗಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ ಇಶಾನ್ ವಿಕೆಟ್ ಕೀಪರ್ ಬ್ಯಾಟ್ಸ್‌ ಮನ್ ಕೂಡ ಆಗಿದ್ದು, ಪಂತ್ ತಂಡದಲ್ಲಿರುವಾಗ ಹೆಚ್ಚಿನ ಅವಕಾಶ ಪಡೆಯುವುದು ಅವರಿಗೆ ತುಂಬಾ ಕಷ್ಟ. ಅವರಿಗೆ ಓಪನರ್ ಆಗಿ ಖಂಡಿತವಾಗಿಯೂ ಅವಕಾಶ ನೀಡಲಾಗುತ್ತದೆ, ಆದರೆ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಅವರಂತಹ ಆಟಗಾರರೊಂದಿಗೆ ಹೆಚ್ಚಿನ ಅವಕಾಶಗಳನ್ನು ಪಡೆಯುವುದು ಕಷ್ಟವೆಂದು ಹೇಳಲಾಗುತ್ತಿದೆ.

ಇದನ್ನೂ ಓದಿ: AUS Open 2022: ಆಸ್ಟ್ರೇಲಿಯನ್ ಓಪನ್ 2022 ಪ್ರಶಸ್ತಿ ಗೆದ್ದು ಇತಿಹಾಸ ಬರೆದ Ashleigh Barty

ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್ ಉತ್ತಮ ಬ್ಯಾಟ್ಸ್‌ ಮನ್(Sanju Samson). ಸಾಕಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅವರು ಐಪಿಎಲ್‌ನಲ್ಲಿ ಇದುವರೆಗೆ 3 ಶತಕಗಳನ್ನು ಗಳಿಸಿದ್ದಾರೆ. ಆದರೆ ಪಂತ್ ಫಾರ್ಮ್‌ನಲ್ಲಿ ಓಡುತ್ತಿರುವ ರೀತಿಗೆ ಕೆಲವೊಮ್ಮೆ ಸ್ಯಾಮ್ಸನ್ ಅನ್ನು ನಿರ್ಲಕ್ಷಿಸಲಾಗುತ್ತದೆ. ಸ್ಯಾಮ್ಸನ್ ಭಾರತದ ಪರ ಇದುವರೆಗೆ 10 ಟಿ-20 ಪಂದ್ಯಗಳನ್ನು ಆಡಿದ್ದಾರೆ ಮತ್ತು ಒಂದು ಏಕದಿನ ಪಂದ್ಯವನ್ನು ಆಡಿದ್ದಾರೆ. ಆದರೆ ಇದುವರೆಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಪಂತ್ ಇದೇ ರೀತಿ ಫಾರ್ಮ್‌ನಲ್ಲಿ ಮುಂದುವರಿದರೆ ಸ್ಯಾಮ್ಸನ್ ವಿಕೆಟ್ ಕೀಪರ್ ಬ್ಯಾಟ್ಸ್‌ ಮನ್ ಆಗಿ ವೃತ್ತಿಜೀವನ ನಡೆಸಲು ಸಾಧ್ಯವಿಲ್ಲ.

ಕೆ.ಎಸ್.ಭರತ್

ಆಂಧ್ರಪ್ರದೇಶದ ವಿಕೆಟ್ ಕೀಪರ್ ಬ್ಯಾಟ್ಸ್‌ ಮನ್ ಕೆ.ಎಸ್.ಭರತ್(KS Bharat) 69 ಪ್ರಥಮ ದರ್ಜೆ ಪಂದ್ಯಗಳಲ್ಲಿ 37.58 ಸರಾಸರಿಯಲ್ಲಿ 3000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 8 ಶತಕ ಮತ್ತು 20 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅಷ್ಟೇ ಅಲ್ಲ ತ್ರಿಶತಕವನ್ನೂ ಬಾರಿಸಿದ್ದಾರೆ. IPL 2021ರಲ್ಲಿ ಇವರನ್ನು RCB ತಂಡಕ್ಕೆ ಸೇರಿಸಲಾಯಿಗಿತ್ತು. ಇಲ್ಲಿನ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ ಅವರು ಭಾರತೀಯ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರು. ಆದರೆ ಪಂತ್ ತಂಡದಿಂದ ಹೊರಗುಳಿದಿದ್ದರೂ ಕೂಡ ಭರತ್ ಗೆ ಚೊಚ್ಚಲ ಪಂದ್ಯವನ್ನಾಡಲು ಸಾಧ್ಯವಾಗಲಿಲ್ಲ. ಪಂತ್ ಅತ್ಯುತ್ತಮ ಪ್ರದರ್ಶನವನ್ನು ಮುಂದುವರೆಸಿದರೆ ಟೀಂ ಇಂಡಿಯಾದಲ್ಲಿ ಭರತ್ ಸ್ಥಾನ ಪಡೆಯುವುದು ಕಷ್ಟಸಾಧ್ಯವೆಂದು ಹೇಳಲಾಗುತ್ತಿದೆ.

ಇದನ್ನೂ ಓದಿ: India vs West Indies: ಮೊದಲ ಏಕದಿನ ಪಂದ್ಯಕ್ಕೆ ಉಪನಾಯಕರಾಗಲಿರುವ ರಿಷಬ್ ಪಂತ್ !

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News