KGF Chapter 2: ಕೆಜಿಎಫ್2 ಸಿನಿಮಾಗೆ ಯಶ್ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಕೆಜಿಎಫ್, ಕೆಜಿಎಫ್ (KGF). ನಿಂತ್ರೂ ಕುಂತ್ರೂ ಬರೀ ಕೆಜಿಎಫ್ ಜಪ ಜೋರಾಗಿ ಕೇಳಿಬರುತ್ತಿದೆ. ನಿದ್ದೆಯಲ್ಲೂ ಪ್ರತಿಯೊಬ್ಬ ಅಭಿಮಾನಿಯೂ ಕನವರಿಸುಔಂತಾಗಿದೆ. ಯಾಕಂದ್ರೆ ಕೆಜಿಎಫ್ ಮೊದಲ ಭಾಗವೇ ನೋಡಿ ಥ್ರಿಲ್ ಆಗಿರೋ ಜನ ಕೆಜಿಎಫ್2 ಸಿನಿಮಾ ನೋಡಿ ಡಂಕುಣಕ ಅಂತ ಕುಣಿಬೇಕು ಅಂತ ಕಾಯುತ್ತಿದ್ದಾರೆ.
ಎಲ್ಹೋದ್ರು ಈಗ ಬರೀ ಕೆಜಿಎಫ್ ಚಾಪ್ಟರ್ 2 ನದ್ದೇ ಮಾತು. ಕೆಜಿಎಫ್2 (KGF Chapter 2) ಸಿನಿಮಾವನ್ನ ಕಣ್ತುಂಬಿಕೊಂಬಿಕೊಂಡ ಮೇಲಷ್ಟೇ ನಿದ್ದೆ ಮಾಡೋದು ಅನ್ನುವಷ್ಟರ ಮಟ್ಟಿಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈಗ ಒಂದು ಟಾಕ್ ಜೋರಾಗಿ ನಡೆಯುತ್ತಿದೆ. ಕೆಜಿಎಫ್2 ಸಿನಿಮಾದಲ್ಲಿರುವ ಎಲ್ಲಾ ನಟರಿಗಿರುವ ಸಂಭಾವನೆ ಎಷ್ಟಿರಬಹುದು ಅನ್ನೋದೆ ಚರ್ಚೆ ಶುರುವಾಗಿದೆ.
ಕೆಜಿಎಫ್, ಕೆಜಿಎಫ್ (KGF). ನಿಂತ್ರೂ ಕುಂತ್ರೂ ಬರೀ ಕೆಜಿಎಫ್ ಜಪ ಜೋರಾಗಿ ಕೇಳಿಬರುತ್ತಿದೆ. ನಿದ್ದೆಯಲ್ಲೂ ಪ್ರತಿಯೊಬ್ಬ ಅಭಿಮಾನಿಯೂ ಕನವರಿಸುವಂತಾಗಿದೆ. ಯಾಕಂದ್ರೆ ಕೆಜಿಎಫ್ ಮೊದಲ ಭಾಗ ನೋಡಿ ಥ್ರಿಲ್ ಆಗಿರುವ ಜನ ಕೆಜಿಎಫ್2 ಸಿನಿಮಾ ನೋಡಿ ಕುಣಿಯಬೇಕು ಅಂತ ಕಾಯುತ್ತಿದ್ದಾರೆ.
ಇದನ್ನೂ ಓದಿ: Puneet Rajkumar: 102 ಕವಿಗಳು ಬರೆದರು ಅಪ್ಪು ಮೇಲೆ ಕವನ!
ಇನ್ನೇನು ಕೆಲವೇ ದಿನಗಳು ಮಾತ್ರ ಕೆಜಿಎಫ್ ಚಾಪ್ಟರ್2 ರಿಲೀಸ್‌ಗೆ ಉಳಿದಿದೆ. ಈಗಾಗಲೇ ಇಂದಷ್ಟು ಪೋಸ್ಟರ್, ಟೀಸರ್ ಮತ್ತು ಟ್ರೈಲರ್‌ನಿಂದ ಧೂಳೆಬ್ಬಿಸಿರುವ ಕೆಜಿಎಫ್ ಸಿನಿಮಾ ಅಭಿಮಾನಿಗಳ ನಿರೀಕ್ಷೆಯನ್ನ ದಿನದಿಂದ ದಿನಕ್ಕೆ ದುಪ್ಪಟ್ಟು ಮಾಡಿದೆ.
ಏಪ್ರಿಲ್ 14 ರಂದು ರಿಲೀಸ್ ಆಗುವ ಕೆಜಿಎಫ್2 (KGF2 Trailer) ಸಿನಿಮಾ ನೋಡಲು ಜಗತ್ತಿನ ಜನರೇ ಕಾಯುತ್ತಿದ್ದಾರೆ. ಹಾಗಾದ್ರೆ ಸಿನಿಮಾದಲ್ಲಿ ನಟಿಸಿರುವ ಯಶ್ ಸೇರಿದಂತೆ ಸಂಜಯ್ ದತ್ (Sanjay Dutt) ವರೆಗೆ ಎಲ್ಲರೂ ತೆಗೆದುಕೊಂಡಿರುವ ಸಂಭಾವನೆ ಬಗ್ಗೆ ಹೇಳ್ತೀವಿ ಕೇಳಿ.
ಇದೀಗ 'ಕೆಜಿಎಫ್ 2' ಸಿನಿಮಾ ನಟರ ಸಂಭಾವನೆ ಬಗ್ಗೆ ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಲೇ ಇರುತ್ತೆ. 'ಕೆಜಿಎಫ್ 2'ಗಾಗಿ ಯಶ್ (Yash), ಪ್ರಶಾಂತ್ ನೀಲ್, ಸಂಜಯ್ ದತ್ ಸೇರಿದಂತೆ ಹಲವು ನಟರ ಸಂಭಾವನೆ ಎಷ್ಟೆಷ್ಟು ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ರಾಕಿ ಬಾಯ್ ಯಶ್ ಈ ಸಿನಿಮಾಗಾಗಿ ಎಷ್ಟು ಸಂಭಾವನೆ ಪಡೆದಿರಬಹುದು? ಮೂರು ವರ್ಷದ ಶ್ರಮಕ್ಕಾಗಿ ಯಶ್ ಪಡೆದಿರುವ ಸಂಭಾವನೆ ಎಷ್ಟು ಎಂಬ ಪ್ರಶ್ನೆ ಜನರಿಗೆ ಆಗಾಗ ಕಾಡುತ್ತಲೇ ಇದೆ. ಅದಕ್ಕೆ ಈಗ ಉತ್ತರ ಸಿಕ್ಕಿದ್ದು, 'ಕೆಜಿಎಫ್ 2'ಗಾಗಿ ನಟ ಯಶ್ 25 ರಿಂದ 27 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಪ್ರಶಾಂತ್ ನೀಲ್ (Prashant Neel) 'ಕೆಜಿಎಫ್ 2' ಚಿತ್ರದ ನಿರ್ದೇಶನಕ್ಕಾಗಿ 15 ರಿಂದ 20 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಇನ್ನು ಶ್ರೀನಿಧಿ ಶೆಟ್ಟಿ (Srinidhi Shetty) ಕೂಡ ಈ ಸಿನಿಮಾಗಾಗಿ 3 ರಿಂದ 4 ಕೋಟಿ ಪಡೆದಿದ್ದಾರೆ.
ಇದನ್ನೂ ಓದಿ: Rashmika Mandanna:ಅಬ್ಬಬ್ಬಾ.. ರಶ್ಮಿಕಾ ಮಂದಣ್ಣ ವರ್ಕ್‌ಔಟ್ ಕಂಡು ದಂಗಾದ ಫ್ಯಾನ್ಸ್!
ರವೀನಾ ಟಂಡನ್ 'ಕೆಜಿಎಫ್ 2' ಗಾಗಿ 1 ರಿಂದ 2 ಕೋಟಿ ಪಡೆದಿದ್ದಾರಂತೆ. ಇನ್ನು ಅಧೀರ ಸಂಜಯ್ ದತ್ ಈ ಚಿತ್ರಕ್ಕಾಗಿ 9 ರಿಂದ 10 ಕೋಟಿ ಪಡೆದಿದ್ದಾರೆ ಎನ್ನಲಾಗುತ್ತಿದೆ.ಮಾಳವಿಕ ಮತ್ತು ಪ್ರಕಾಶ್ ರಾಜ್ ಅವರ ಸಂಭಾವನೆ ವಿಚಾರಕ್ಕೆ ಬರೋದಾದ್ರೆ ಮಾಳವಿಕ ಅವಿನಾಶ್ (Malvika Avinash) ಈ ಚಿತ್ರಕ್ಕಾಗಿ 60 ರಿಂದ 62 ಲಕ್ಷ ಪಡೆದುಕೊಂಡಿದ್ದಾರೆ. ನಟ ಪ್ರಕಾಶ್ ರಾಜ್ (Prakash Raj) 'ಕೆಜಿಎಫ್ 2' ಸಿನಿಮಾದ ನಟನೆಗಾಗಿ 80 ರಿಂದ 82 ಲಕ್ಷ ಪಡೆದಿದ್ದಾರೆ ಅನ್ನುವುದು ತಿಳಿದು ಬಂದಿದೆ.
ಇನ್ನು ಮೊದಲ ಭಾಗದಲ್ಲಿ ರಾಕಿ ಬಾಯ್ ಕಥೆಯನ್ನು ಹೇಳಲು ಬಂದಿದ್ದ ಅನಂತ್ ನಾಗ್ (Ananthnag) ಕೂಡ ಮೊದಲ ಭಾಗಕ್ಕಾಗಿ 50 ಲಕ್ಷ ಪಡೆದಿದ್ದರು ಎಂಬ ಸುದ್ದಿ ಇದೆ. 'ಕೆಜಿಎಫ್ 2' ಚಿತ್ರಕ್ಕಾಗಿ ಸ್ಟಾರ್ ನಟ-ನಟಿಯರು ಪಡೆದಿರುವ ಸಂಭಾವನೆ ವಿಚಾರ ಕೇಳಿ ಹಲವರು ಇದೀಗ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.