Rashmika Mandanna:ಅಬ್ಬಬ್ಬಾ.. ರಶ್ಮಿಕಾ ಮಂದಣ್ಣ ವರ್ಕ್‌ಔಟ್ ಕಂಡು ದಂಗಾದ ಫ್ಯಾನ್ಸ್‌!

Rashmika Mandanna: ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಸೋಷಿಯಲ್‌ ಮೀಡಿಯಾ ಮೂಲಕ ಒಂದಿಲ್ಲೊಂದು ರೀತಿ ಅಭಿಮಾನಿಗಳನ್ನು ಕನೆಕ್ಟ್‌ ಆಗುತ್ತಲೇ ಇರುತ್ತಾರೆ. ಇದೀಗ ಅವರ ವರ್ಕೌಟ್‌ ವಿಡಿಯೋವೊಂದು ಸಖತ್‌ ವೈರಲ್‌ ಆಗುತ್ತಿದ್ದು, ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ. 

Written by - Chetana Devarmani | Last Updated : Mar 30, 2022, 01:32 PM IST
  • ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ
  • ಇವರ ಸೌಂದರ್ಯಕ್ಕೆ ಫಿದಾ ಆಗದವರಂತೂ ಇಲ್ಲವೇ ಇಲ್ಲ
  • ಈ ಪರಿ ಫಿಟ್‌ ಆಗಿ ಕಾಣವ ಕಿರಿಕ್‌ ಬೆಡಗಿಯ ಫಿಟ್ನೆಸ್‌ ಸೀಕ್ರೆಟ್‌
Rashmika Mandanna:ಅಬ್ಬಬ್ಬಾ.. ರಶ್ಮಿಕಾ ಮಂದಣ್ಣ ವರ್ಕ್‌ಔಟ್ ಕಂಡು ದಂಗಾದ ಫ್ಯಾನ್ಸ್‌! title=
ನಟಿ ರಶ್ಮಿಕಾ ಮಂದಣ್ಣ

Rashmika Mandanna Workout Video: ಕನ್ನಡದ ಕಿರಿಕ್ ಪಾರ್ಟಿ (Kirik Party) ಸಿನಿಮಾ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ (Rashmika Mandanna), ನಾಲ್ಕು ಭಾಷೆಯಲ್ಲಿ ನಟಿಸುವ ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: 'ಕೆಜಿಎಫ್-2' ಟ್ರೇಲರ್ ನೋಡಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಏನಂದ್ರು ಗೊತ್ತಾ..?

ತೆಲುಗು, ತಮಿಳು, ಹಿಂದಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ರಶ್ಮಿಕಾ ಅಭಿನಯಿಸಿದ್ದಾರೆ. ರಶ್ಮಿಕಾ ಮಂದಣ್ಣ ಸದಾ ತಮ್ಮ ಫಿಟ್‌ನೆಸ್ (Rashmika Fitness Secrete) ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕಾಗಿ ಅವರು ಸಾಕಷ್ಟು ವರ್ಕೌಟ್‌ ಸಹ ಮಾಡುತ್ತಾರೆ. 

ಸಮಯ ಸಿಕ್ಕಾಗಲೆಲ್ಲಾ ಜಿಮ್‌ನಲ್ಲಿ ಕಸರತ್ತು ಮಾಡುವ ರಶ್ಮಿಕಾ ಆರೋಗ್ಯಕರ ಲೈಫ್ ಸ್ಟೈಲ್ ಕಾಪಾಡಿಕೊಂಡಿದ್ದಾರೆ. ಇತ್ತೀಚೆಗೆ ಫಿಟ್‌ನೆಸ್ ರಿಲೇಟೆಡ್ ವಿಡಿಯೋವೊಂದನ್ನು ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಂ (Rashmika Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫಿಟ್‌ನೆಸ್‌ಗಾಗಿ ಎಷ್ಟೆಲ್ಲಾ ಕಸರತ್ತು ಮಾಡುತ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಎಂಬಂತಿದೆ.  

 

 

ರಶ್ಮಿಕಾ ಫಿಟ್‌ನೆಸ್ ಗೆ ಮೊದಲ ಆದ್ಯತೆ ನೀಡುತ್ತಾರೆ. ಜಿಮ್‌ನಲ್ಲಿ ರಶ್ಮಿಕಾ ವರ್ಕೌಟ್ ಮಾಡುತ್ತಿರುವ ವಿಡಿಯೋ ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದೆ. ಜಿಮ್‌ನಲ್ಲಿ ವರ್ಕೌಟ್‌ ಮಾಡುವ ವಿಡಿಯೋವನ್ನು ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ರಶ್ಮಿಕಾ ಶೇರ್ ಮಾಡಿದ ವಿಡಿಯೋ (Viral Video) ನೋಡಿ ಅಭಿಮಾನಿಗಳು ನಿಬ್ಬೆರಗಾಗಿದ್ದಾರೆ. ರಶ್ಮಿಕಾ ತಮ್ಮ ಯಾವ ಹೊಸ ಸಿನಿಮಾಕ್ಕಾಗಿ ಎಷ್ಟೆಲ್ಲಾ ಶ್ರಮ ಪಡುತ್ತಿದ್ದಾರೆ ಎನ್ನುವುದು ಮಾತ್ರ ರಿವೀಲ್‌ ಆಗಿಲ್ಲ. ರಶ್ಮಿಕಾ ಶೇರ್ ಮಾಡಿಕೊಂಡಿರುವ ಕೆಲವೇ ಸೆಕೆಂಡುಗಳ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: Vijay Deverakonda : ಪುರಿ ಜಗನ್ನಾಥ್ ಜೊತೆ ವಿಜಯ್ ದೇವರಕೊಂಡ ಮತ್ತೊಂದು ಸಿನಿಮಾ ಫಿಕ್ಸ್.. 2023ಕ್ಕೆ JGM ರಿಲೀಸ್

ಪುಷ್ಪ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ರಶ್ಮಿಕಾ ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ರಶ್ಮಿಕಾ ಮಂದಣ್ಣ ಎಲ್ಲೇ ಇದ್ದರೂ, ಏನೇ ಮಾಡಿದರೂ ಸುದ್ದಿಯಾಗುತ್ತಾರೆ. ರಶ್ಮಿಕಾ ಸಿನಿಮಾ ವಿಷಯಗಳಿಗೆ ಮಾತ್ರವಲ್ಲದೆ ಅವರ ವೈಯಕ್ತಿಕ ಜೀವನದಿಂದ ಸಹ ಆಗಾಗ ಸುದ್ದಿಯಲ್ಲಿರುತ್ತಾರೆ.

ಈ ವಿಡಿಯೋ ಶೇರ್ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಆರು ಸಾವಿರಕ್ಕಿಂತಲೂ ಅಧಿಕ ಜನರು ಕಾಮೆಂಟ್‌ ಮಾಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News