KGF2 Trailer: 24 ಗಂಟೆಗಳಲ್ಲಿ 'ಆರ್‌ಆರ್‌ಆರ್‌', 'ರಾಧೆ ಶ್ಯಾಮ್' ದಾಖಲೆಗಳನ್ನು ಪುಡಿ ಪುಡಿ ಮಾಡಿದ ಕೆಜಿಎಫ್‌ 2 ಟ್ರೈಲರ್‌!

KGF2 Trailer: ರಿಲೀಸ್‌ ಆದ ಕೇವಲ 24 ಗಂಟೆಗಳಲ್ಲಿ 'ಆರ್‌ಆರ್‌ಆರ್‌', 'ರಾಧೆ ಶ್ಯಾಮ್' ದಾಖಲೆಗಳನ್ನು ಕೆಜಿಎಫ್‌ ಚಾಪ್ಟರ್‌ 2 ಟ್ರೈಲರ್‌ ಪುಡಿ ಪುಡಿ ಮಾಡಿದೆ. 

Written by - Chetana Devarmani | Last Updated : Mar 29, 2022, 12:04 PM IST
  • ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ
  • ಮಾರ್ಚ್ 27ರಂದು ಬಿಡುಗಡೆಯಾದ ಕೆಜಿಎಫ್ ಚಾಪ್ಟರ್ 2 ಟ್ರೈಲರ್
  • 24 ಗಂಟೆಗಳಲ್ಲಿ ಹೊಸ ದಾಖಲೆಯನ್ನೇ ಬರೆದ ಕೆಜಿಎಫ್ 2 ಟ್ರೈಲರ್
  • ಆರ್‌ಆರ್‌ಆರ್‌, ರಾಧೆ ಶ್ಯಾಮ್ ದಾಖಲೆಗಳು ಪುಡಿ ಪುಡಿ
KGF2 Trailer: 24 ಗಂಟೆಗಳಲ್ಲಿ 'ಆರ್‌ಆರ್‌ಆರ್‌', 'ರಾಧೆ ಶ್ಯಾಮ್' ದಾಖಲೆಗಳನ್ನು ಪುಡಿ ಪುಡಿ ಮಾಡಿದ ಕೆಜಿಎಫ್‌ 2 ಟ್ರೈಲರ್‌!  title=
ಕೆಜಿಎಫ್​ 2 ಟ್ರೈಲರ್‌

'ರಾಕಿಂಗ್ ಸ್ಟಾರ್' ಯಶ್ (Yash) ಅಭಿನಯದ ಕೆಜಿಎಫ್ ಚಾಪ್ಟರ್ 2 (KGF2 Trailer) ಸಿನಿಮಾದ ಟ್ರೈಲರ್ ಮಾರ್ಚ್ 27ರಂದು ಬಿಡುಗಡೆಯಾಗಿದ್ದು ಬೆಂಕಿ ಬಿರುಗಾಳಿ ಸೃಷ್ಟಿಸಿದೆ. ಅಲ್ಲದೇ 24 ಗಂಟೆಗಳಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. 'ಆರ್‌ಆರ್‌ಆರ್‌' (RRR), 'ರಾಧೆ ಶ್ಯಾಮ್' ಎಲ್ಲ ದಾಖಲೆಗಳನ್ನು ಅಳಿಸಿ ಹಾಕಿ ಮುನ್ನುಗಿದೆ. 

ಇದನ್ನೂ ಓದಿ: "ಕೆಜಿಎಫ್‌ನಲ್ಲಿ ಗರುಡನ ಕೊಲೆ ಬಳಿಕ ಮುಂದೇನಾಯ್ತು? ನೀವು ಓದತೀರಾ..?"

ಕೆಜಿಎಫ್ 2 ಸಿನಿಮಾ ತೆರೆಗೆ ಬರಲು ಕೆಲವೇ ಕೆಲವು ದಿನಗಳು ಬಾಕಿ ಇವೆ. ಏಪ್ರಿಲ್ 14 ರಂದು ಅದ್ದೂರಿಯಾಗಿ ಬೆಳ್ಳಿ ತೆರೆಗೆ ಬರಲು ಸಜ್ಜಾಗಿದೆ. ತೂಫಾನ್‌ ಲಿರಿಕಲ್‌ ಸಾಂಗ್‌ ನಿಂದಲೇ (Toofan Lyeical Song) ಹವಾ ಕ್ರಿಯೇಟ್‌ ಮಾಡಿದ್ದ 

ಈ ಮಧ್ಯೆ ಚಿತ್ರದ ಟ್ರೈಲರ್ ಎಲ್ಲ ದಾಖಲೆಗಳನ್ನು ಉಡೀಸ್ ಮಾಡಿ, ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಟ್ರೈಲರ್ ಮೂಲಕವೇ ಹೊಸ ಇತಿಹಾಸ ಸೃಷ್ಟಿಸಿರುವ 'ರಾಕಿ ಭಾಯ್' ಅಬ್ಬರವನ್ನು ಚಿತ್ರಮಂದಿರದಲ್ಲಿ ನೋಡಲು ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ.

ಭಾನುವಾರ ಸಂಜೆ 6.40ಕ್ಕೆ ಕೆಜಿಎಫ್ ಚಾಪ್ಟರ್ 2 ಟ್ರೈಲರ್‌ (KGF Chapter 2 Trailer) ಐದು ಭಾಷೆಗಳಲ್ಲಿ ರಿಲೀಸ್‌ ಆಯ್ತು. ಟ್ರೈಲರ್‌ ರಿಲೀಸ್ ಆಗಿ 24 ಗಂಟೆ ಕಳೆಯುವುದರೊಳಗೆ ಎಲ್ಲ ಹಳೆಯ ದಾಖಲೆಗಳನ್ನು ಉಡೀಸ್‌ ಮಾಡಿ, ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಕಳೆದ 24 ಗಂಟೆಗಳಲ್ಲಿ ಕೆಜಿಎಫ್ 2 ಐದು ಭಾಷೆಗಳ ಟ್ರೈಲರ್ ವೀವ್ಸ್ 109 ಮಿಲಿಯನ್ ಗಡಿ ದಾಟಿದೆ. ಕನ್ನಡ 18 ಮಿಲಿಯನ್, ತೆಲುಗು 20 ಮಿಲಿಯನ್, ಹಿಂದಿ 51 ಮಿಲಿಯನ್, ತಮಿಳು 12 ಮಿಲಿಯನ್ ಹಾಗೂ ಮಲಯಾಳಂ 8 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.

ಇದನ್ನೂ ಓದಿ: KGF 2 Trailer: `ರಣ ಬೇಟೆಗಾರ’ನ ರೌದ್ರಾವತಾರಕ್ಕೆ ಯೂಟ್ಯೂಬ್​ ಕ್ರ್ಯಾಶ್​!

ರಾಜಮೌಳಿ ನಿರ್ದೇಶನದ RRR ಐದು ಭಾಷೆಯ ಟ್ರೇಲರ್‌ಗಳಿಗೆ 24 ಗಂಟೆಯಲ್ಲಿ 51 ಮಿಲಿಯನ್ ವೀವ್ಸ್ ಸಿಕ್ಕಿತ್ತು. ಹಾಗೆಯೇ, ರಾಧೆ ಶ್ಯಾಮ್ (Radheshyam) ಸಿನಿಮಾದ ಐದು ಭಾಷೆಯ ಟ್ರೈಲರ್‌ಗಳು 24 ಗಂಟೆಯಲ್ಲಿ 57 ಮಿಲಿಯನ್ ವೀವ್ಸ್ ಸಿಕ್ಕಿತ್ತು. ಕೆಜಿಎಫ್ 2 ಚಿತ್ರದ ಐದು ಭಾಷೆಗಳ ಟ್ರೈಲರ್‌ಗೆ 109 ಮಿಲಿಯನ್ ವೀವ್ಸ್ ಸಿಕ್ಕಿರುವುದು ಹೊಸ ರಿಕಾರ್ಡ್‌ ಸೃಷ್ಟಿಸಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News