ನವದೆಹಲಿ: ಹಿಂದಿ ಭಾಷೆಯ ವಿಚಾರವಾಗಿ ನಟ ಅಜಯ್ ದೇವಗನ್ ಮತ್ತು ಕಿಚ್ಚಾ ಸುದೀಪ್ ಅವರ ಹೇಳಿಕೆಗಳ ಬೆನ್ನಲ್ಲೇ ಈಗ ಪ್ರತಿಕ್ರಿಯಿಸಿರುವ ನಟಿ ಕಂಗನಾ ರನೌತ್ ಹಿಂದಿ ಬದಲಾಗಿ ಸಂಸ್ಕೃತವನ್ನು ರಾಷ್ಟ್ರ ಭಾಷೆಯನ್ನಾಗಿ ಘೋಷಿಸಬೇಕು ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಆದರೆ, ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ನಿರಾಕರಿಸುವುದು ಪರೋಕ್ಷವಾಗಿ ಕೇಂದ್ರ ಸರ್ಕಾರಕ್ಕೆ ಮತ್ತು ಭಾರತೀಯ ಸಂವಿಧಾನಕ್ಕೆ ತೋರಿದ ಅಗೌರವ ಎಂದು ಅವರು ತಮ್ಮ ಅಭಿಪ್ರಾಯದಲ್ಲಿ ವಿವರಿಸಿದ್ದಾರೆ.ಅವರು ತಮ್ಮ ಮುಂಬರುವ ಚಿತ್ರ  ಧಕ್ಕಡ್` ನ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಸಂವಾದದ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಹಿಂದಿ ದಾಷ್ಟ್ಯ ಮೆರೆಯುವ ಬಾಲಿವುಡ್ ಗೆ ರಾಮ್ ಗೋಪಾಲ್ ವರ್ಮಾ ಹಾಕಿದ ಸವಾಲೇನು ಗೊತ್ತೇ?


ಇದೆ ವೇಳೆ ಹಿಂದಿ ಭಾಷಾ ವಿವಾದದ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ, "ಮೊದಲು ನಮ್ಮ ಭಾಷೆ, ಬೇರುಗಳು ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುವ ಹಕ್ಕಿದೆ.ಆದರೆ ನಮ್ಮ ದೇಶವು ಸಾಂಸ್ಕೃತಿಕವಾಗಿ ಮತ್ತು ಭಾಷೆಯಲ್ಲಿ ಬಹಳ ವೈವಿಧ್ಯಮಯವಾಗಿದೆ.ಆದ್ದರಿಂದ ಅವುಗಳನ್ನು ಒಗ್ಗೂಡಿಸಲು ನಮಗೆ ಒಂದು ಸಾಮಾನ್ಯ ಭಾಷೆ ಬೇಕು.ಭಾರತೀಯ ಸಂವಿಧಾನ ರಚನೆಯಾದಾಗ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಲಾಗಿತ್ತು. ಈಗ ನೋಡಿ ತಾಂತ್ರಿಕವಾಗಿ ಹೇಳುವುದಾದರೆ ಹಿಂದಿಗಿಂತ ತಮಿಳು ಹಳೆಯ ಭಾಷೆಯಾಗಿದೆ.ಆದರೆ ಅತ್ಯಂತ ಹಳೆಯದು ಸಂಸ್ಕೃತ ಭಾಷೆ.ಹಾಗಾಗಿ ನನ್ನ ಅಭಿಪ್ರಾಯದಲ್ಲಿ ಸಂಸ್ಕೃತವೇ ರಾಷ್ಟ್ರವಾಗಬೇಕು ಹೊರತು ಹಿಂದಿಯಲ್ಲ ಎಂದು ಹೇಳಿದರು.


ಬಾಕ್ಸ್ ಆಫೀಸ್ ನಲ್ಲಿ ಮುಂದುವರೆದ ರಾಕಿ ಭಾಯ್ ಅಬ್ಬರ


'ಸಂಸ್ಕೃತದ ಬದಲು ಹಿಂದಿಯನ್ನು ಏಕೆ ರಾಷ್ಟ್ರೀಯ ಭಾಷೆಯಾಗಿ ಏಕೆ ಆಯ್ಕೆ ಮಾಡಲಾಗಿದೆ ಎಂಬುದಕ್ಕೆ ನನ್ನ ಬಳಿ ಉತ್ತರವಿಲ್ಲ ಆದರೆ ಈಗ ನಿರ್ಧಾರ ತೆಗೆದುಕೊಂಡ ನಂತರ, ನೀವು ಅದನ್ನು ಪಾಲಿಸದಿದ್ದರೆ, ನೀವು ಸಂವಿಧಾನವನ್ನು ನಿರಾಕರಿಸುತ್ತಿದ್ದೀರಿ ಎಂದರ್ಥ ಎಂದು ಅವರು ಹೇಳಿದರು.


'ಖಾಲಿಸ್ತಾನಿಗಳು ಪ್ರತ್ಯೇಕ ರಾಜ್ಯ ಕೇಳಿದರೆ, ತಮಿಳರು ಮತ್ತು ಬಂಗಾಳದ ಜನರು ಪ್ರತ್ಯೇಕ ರಾಜ್ಯವನ್ನು ಕೇಳುತ್ತಿದ್ದರೆ, ಅವರು ಕೇವಲ ಹಿಂದಿಯನ್ನು ಧಿಕ್ಕರಿಸುತ್ತಿಲ್ಲ, ಅವರು ದೆಹಲಿಯ ಕೇಂದ್ರ ಸರ್ಕಾರವನ್ನು ಧಿಕ್ಕರಿಸುತ್ತಿದ್ದಾರೆ.ಕರಾಳ ವಸಾಹತುಶಾಹಿ ಗತಕಾಲದ ಹೊರತಾಗಿಯೂ, ನಾವು ಇನ್ನೂ ಇಂಗ್ಲಿಷ್ ಅನ್ನು ಲಿಂಕ್ ಭಾಷೆಯಾಗಿ ಆಗಿ ಬಳಸುತ್ತೇವೆ. ದೇಶದೊಳಗೆ ಸಂವಹನ ನಡೆಸಲು ಲಿಂಕ್ ಭಾಷೆಯಾಗಿ ಇಂಗ್ಲಿಷ್ ಆಗಬೇಕೇ ಅಥವಾ ಹಿಂದಿ, ತಮಿಳು ಅಥವಾ ಸಂಸ್ಕೃತ ಭಾಷೆ ಇರಬೇಕೇ? ಎನ್ನುವುದನ್ನು ನಾವು ನಿರ್ಧರಿಸಬೇಕು." ಕಂಗನಾ ಹೇಳಿದರು.


ಇದನ್ನೂ ಓದಿ: ಕೆಜಿಎಫ್-2 ಬಿರುಗಾಳಿಗೆ ಬಾಲಿವುಡ್ ಹಳೆ ದಾಖಲೆಗಳೆಲ್ಲ ಉಡೀಸ್!


ಅಜಯ್ ಮತ್ತು ಸುದೀಪ್ ನಡುವಿನ ವಿವಾದವನ್ನು ಉಲ್ಲೇಖಿಸಿದ ಕಂಗನಾ, ಇಬ್ಬರೂ ನಟರು ತಮ್ಮದೇ ಆದ ರೀತಿಯಲ್ಲಿ ಸರಿ ಎಂದು ನಂಬುತ್ತಾರೆ. "ಹಿಂದಿ ನಮ್ಮ ರಾಷ್ಟ್ರ ಭಾಷೆ, ಹಾಗಾಗಿ ಅಜಯ್ ಸರ್ ಹೇಳಿದ್ದು ಸರಿ. ಆದರೆ ಸುದೀಪ್ ಅವರ ಭಾವನೆ ನನಗೆ ಅರ್ಥವಾಗಿದೆ ಮತ್ತು ಅವರದ್ದು ತಪ್ಪಿಲ್ಲ" ಎಂದು ಅವರು ವಿವರಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.