ಕೆಜಿಎಫ್-2 ಬಿರುಗಾಳಿಗೆ ಬಾಲಿವುಡ್ ಹಳೆ ದಾಖಲೆಗಳೆಲ್ಲ ಉಡೀಸ್!

ಕೆಜಿಎಫ್-2 ಇದುವರೆಗೆ ಹಿಂದಿ ಬೆಲ್ಟ್ ನಲ್ಲಿ 345 ಕೋಟಿ ಕಲೆಕ್ಷನ್ ಮಾಡಿ ಹಳೆಯ ದಾಖಲೆ ಮುರಿದು ಆಲ್ ಟೈಮ್ ರೆಕಾರ್ಡ್ ಗಳನ್ನ ಮುರಿದಿದೆ.

Written by - Channabasava A Kashinakunti | Last Updated : Apr 29, 2022, 03:26 PM IST
  • ಇಂದು 350 ಕೋಟಿ ದಾಟಲಿದೆ
  • ಮೂರು ದಿನದಲ್ಲಿ ಕೋಟಿ ಕೋಟಿ ಬಾಚಿದ ಕೆಜಿಎಫ್-2
  • ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಕೆಜಿಎಫ್-2
ಕೆಜಿಎಫ್-2 ಬಿರುಗಾಳಿಗೆ ಬಾಲಿವುಡ್ ಹಳೆ ದಾಖಲೆಗಳೆಲ್ಲ ಉಡೀಸ್! title=

KGF Chapter 2 Box office Collection : ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಈ ಸಿನಿಮಾ ಪ್ರತಿದಿನ ಹೊಸ ದಾಖಲೆ ಬರೆಯುತ್ತಿದೆ. ಇದರ ಹಿಂದಿ ಬೆಲ್ಟ್ ಬಾಲಿವುಡ್ ನಲ್ಲಿ ಅಬ್ಬರ ಸೃಷ್ಟಿಸಿದೆ. ಕೆಜಿಎಫ್-2 ಇದುವರೆಗೆ ಹಿಂದಿ ಬೆಲ್ಟ್ ನಲ್ಲಿ 345 ಕೋಟಿ ಕಲೆಕ್ಷನ್ ಮಾಡಿ ಹಳೆಯ ದಾಖಲೆ ಮುರಿದು ಆಲ್ ಟೈಮ್ ರೆಕಾರ್ಡ್ ಗಳನ್ನ ಮುರಿದಿದೆ.

ಇಂದು 350 ಕೋಟಿ ದಾಟಲಿದೆ

ಈ ಕುರಿತು ಮಾಹಿತಿ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್, 'ಕೆಜಿಎಫ್ ಚಾಪ್ಟರ್ 2' ನ ಇತ್ತೀಚಿನ ಕಲೆಕ್ಷನ್ ಬಗ್ಗೆ ಮಾಹಿತಿ ನೀಡಿದ್ದಾರೆ. ಚಿತ್ರದ ಹಿಂದಿ ಬೆಲ್ಟ್ ಇಲ್ಲಿಯವರೆಗೆ 348.81 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ. ಎರಡನೇ ವಾರದಲ್ಲಿ 75 ಕೋಟಿಗೂ ಅಧಿಕ ಗಳಿಕೆ ಕಂಡಿರುವ ಚಿತ್ರ ಇಂದು 350 ಕೋಟಿ ಗಡಿ ದಾಟಲಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ : ಕಿಚ್ಚ ಸುದೀಪ್ ಬೆಂಬಲಕ್ಕೆ ಧಾವಿಸಿದ ಬೆಂಗಾಳಿ ನಟಿ ಮೂನ್ ಮೂನ್ ಸೇನ್

ಮೂರು ದಿನದಲ್ಲಿ ಕೋಟಿ ಕೋಟಿ ಬಾಚಿದ ಕೆಜಿಎಫ್-2

'ಕೆಜಿಎಫ್ ಚಾಪ್ಟರ್ 2' ಶುಕ್ರವಾರ 11.56 ಕೋಟಿ, ಶನಿವಾರ 18.25 ಮತ್ತು ಭಾನುವಾರ 22.68, ಸೋಮವಾರ 8.28 ಕೋಟಿ, ಮಂಗಳವಾರ 7.48 ಮತ್ತು ಎರಡನೇ ವಾರದಲ್ಲಿ 6.25 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಹಿಂದಿ ಬೆಲ್ಟ್ ನಲ್ಲಿ 350 ಕೋಟಿ ಗಡಿ ದಾಟಲು ಇನ್ನೇನು ಕೆಲವೇ ಹೆಜ್ಜೆ ಬಾಕಿ ಇದೆ. ಚಿತ್ರದ ಹಿಂದಿ ಬೆಲ್ಟ್ ನ ಮೂರೇ ದಿನಗಳಲ್ಲಿ 143.64 ಕೋಟಿ ರೂ. ಕಲೆಕ್ಷನ್ ಮಾಡಿದೆ.

ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಕೆಜಿಎಫ್-2 

ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ 'ಕೆಜಿಎಫ್ ಚಾಪ್ಟರ್ 2 ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ವರದಿಗಳ ಪ್ರಕಾರ, 'ಕೆಜಿಎಫ್ ಚಾಪ್ಟರ್ 2' ನ ಡಿಜಿಟಲ್ ಹಕ್ಕುಗಳನ್ನು ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ಖರೀದಿಸಿದೆ. ಕೆಜಿಎಫ್-2 ಸಿನಿಮಾವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಹಿಂದಿ, ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಈ ಸಿನಿಮಾ ಸ್ಟ್ರೀಮ್ ಆಗಲಿದೆ. 'ಕೆಜಿಎಫ್ ಚಾಪ್ಟರ್ 2 ಒಟಿಟಿಯಲ್ಲಿ' ಮೇ 27 ರಿಂದ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : 'ವಾಮನ' ಜೊತೆಯಾದ ರಚನಾ ರೈ... ಸಕಲಕಲಾವಲ್ಲಭೆ ಈ ತುಳುನಾಡ ಬೆಡಗಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News