Aryan Khan get Bail : ಆರ್ಯನ್ ಖಾನ್ ಗೆ ಜಾಮೀನು ಕೊಡಿಸಿದ ವಕೀಲ ಮುಕುಲ್ ರೋಹಟಗಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ
ಆರ್ಯನ್ ಪರ ವಾದ ಮಂಡಿಸಿದ ಭಾರತದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಆರ್ಯನ್ ಗೆ 20 ದಿನಗಳಿಗಿಂತ ಹೆಚ್ಚು ಕಾಲ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಜೈಲಿನಲ್ಲಿ ಇರಿಸಲಾಗಿದೆ ಎಂದು ವಾದಿಸಿದರು.
ಮುಂಬೈ : ಮಾದಕ ದ್ರವ್ಯ ಸೇವನೆ ಪ್ರಕರಣದಲ್ಲಿ 20 ದಿನಗಳ ಕಾಲ ಆರ್ಥರ್ ರೋಡ್ ಜೈಲಿನಲ್ಲಿದ್ದ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.
ಆರ್ಯನ್ ಪರ ವಾದ ಮಂಡಿಸಿದ ಭಾರತದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ(Mukul Rohatgi) ಅವರು ಆರ್ಯನ್ ಗೆ 20 ದಿನಗಳಿಗಿಂತ ಹೆಚ್ಚು ಕಾಲ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಜೈಲಿನಲ್ಲಿ ಇರಿಸಲಾಗಿದೆ ಎಂದು ವಾದಿಸಿದರು.
ಇದನ್ನೂ ಓದಿ : Aryan Drugs Case : ಆರ್ಯನ್ ಖಾನ್‌ಗೆ ಕೊನೆಗೂ ಸಿಕ್ಕಿತು ಜಾಮೀನು : ಇಂದಿಗೆ ಅಂತ್ಯೆ 25 ದಿನಗಳ ಜೈಲು ವಾಸ!
ರೋಹಟಗಿ ಅವರು ಸೋಮವಾರ ಮುಂಬೈಗೆ ಆಗಮಿಸಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್(Shah Rukh Khan) ಅವರ ಪುತ್ರ ಆರ್ಯನ್ ಅವರ ಕಾನೂನು ತಂಡಕ್ಕೆ ಮುಕುಲ್ ರೋಹಟಗಿ ಡ್ರಗ್ಸ್ ಪ್ರಕರಣದಲ್ಲಿ ಸತೀಶ್ ಮನೇಶಿಂದೆ ಮತ್ತು ಅಮಿತ್ ದೇಸಾಯಿ ಅವರಂತಹ ದೊಡ್ಡ ಹೆಸರುಗಳೊಂದಿಗೆ ಹೊಸ ಸೇರ್ಪಡೆಯಾಗಿದ್ದಾರೆ. ಅಕ್ಟೋಬರ್ 3 ರಂದು ಮುಂಬೈನಲ್ಲಿ ಪಾರ್ಟಿಯೊಂದರಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಆರ್ಯನ್ ಖಾನ್ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಬಂಧಿಸಿತ್ತು. ಆರ್ಯನ್ ಖಾನ್ ಪ್ರಸ್ತುತ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದರು.
ಮುಕುಲ್ ರೋಹಟಗಿ ಯಾರು?
ಮುಕುಲ್ ರೋಹಟಗಿ ಅವರು ಭಾರತದ 14 ನೇ ಅಟಾರ್ನಿ ಜನರಲ್(14th Attorney General of India) ಆಗಿದ್ದು, ಅವರು ಕೆಕೆ ವೇಣುಗೋಪಾಲ್ ಅವರ ನಂತರ ಇವರು ಆ ಹುದ್ದೆಗೆ ಏರಿದ್ದರು. ಅವರು ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿದ್ದಾರೆ ಮತ್ತು ಈ ಹಿಂದೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಮಾಜಿ ದೆಹಲಿ ಹೈಕೋರ್ಟ್ ನ್ಯಾಯಾಧೀಶರು, ನ್ಯಾಯಮೂರ್ತಿ ಅವಧ್ ಬಿಹಾರಿ ರೋಹಟಗಿ ಅವರ ಮನಾಗಿದ್ದಾರೆ.
ಇದನ್ನೂ ಓದಿ : Prabhas Expensive Things : ಪ್ರಭಾಸ್ ಒಡೆತನದಲ್ಲಿವೆ 'ದುಬಾರಿ ಬಂಗಲೆಯ ಜೊತೆಗೆ 8 ಕೋಟಿಯ ರೋಲ್ಸ್ ರಾಯ್ಸ್ ಕಾರು'!
ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್(Additional Solicitor General of India) ರೋಹಟಗಿ ಅವರು 2014 ರಿಂದ 2017 ರವರೆಗೆ ಮೂರು ವರ್ಷಗಳ ಕಾಲ ಹುದ್ದೆಯಲ್ಲಿದ್ದರು. 66 ವರ್ಷ ವಯಸ್ಸಿನ ಹಿರಿಯ ವಕೀಲರು ನ್ಯಾಯಾಲಯದಲ್ಲಿ ಹಲವಾರು ಉನ್ನತ ಮತ್ತು ನಿರ್ಣಾಯಕ ಪ್ರಕರಣಗಳನ್ನು ಪ್ರತಿನಿಧಿಸಿದ್ದಾರೆ. ರೋಹಟಗಿ ಅವರು 2002 ರ ಗುಜರಾತ್ ಗಲಭೆ ಪ್ರಕರಣವನ್ನು ಪ್ರತಿನಿಧಿಸಿದರು, ಅಲ್ಲಿ ಅವರು ಗುಜರಾತ್ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ರೋಹಟಗಿ(Mukul Rohatgi) ಅವರು ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನ ಪೂರ್ಣಗೊಳಿಸಿದರು ಮತ್ತು ಕಾಲೇಜಿನ ನಂತರ ನೇರವಾಗಿ ಕಾನೂನು ಅಭ್ಯಾಸವನ್ನು ಪ್ರಾರಂಭಿಸಿದರು. ಅವರು ತಮ್ಮದೇ ಆದ ಕಾನೂನು ಅಭ್ಯಾಸವನ್ನು ಪ್ರಾರಂಭಿಸುವ ಮೊದಲು ಹೈಕೋರ್ಟ್‌ನಲ್ಲಿ ಮಾಜಿ ಸಿಜೆಐ ಯೋಗೇಶ್ ಕುಮಾರ್ ಸಬರ್ವಾಲ್ ಅವರ ಅಡಿಯಲ್ಲಿ ಅಭ್ಯಾಸ ಮಾಡಿದರು. ಅವರನ್ನು 1993 ರಲ್ಲಿ ದೆಹಲಿ ಹೈಕೋರ್ಟ್‌ನಿಂದ ಹಿರಿಯ ವಕೀಲರಾಗಿ ನೇಮಿಸಲಾಯಿತು ನಂತರ 1999 ರಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡರು.
ಇದನ್ನೂ ಓದಿ : Alia Bhatt-Ranabir Kapoor Marriage Update:ಬರುವ ಡಿಸೆಂಬರ್ ನಲ್ಲಿ ವಿವಾಹವಂತೆ! ಮುಹೂರ್ತ-ವಿವಾಹ ಸ್ಥಳ ಕೂಡ ಫಿಕ್ಸ್ ಅಂತೆ!
ಗಮನಾರ್ಹವೆಂದರೆ, ಅಕ್ಟೋಬರ್ 3 ರಂದು ಆರ್ಯನ್ ಖಾನ್(Aryan Khan) ಅವರನ್ನು ಬಂಧಿಸಲಾಯಿತು. ಅಕ್ಟೋಬರ್ 2 ರಂದು ಸಮುದ್ರದ ಮಧ್ಯದಲ್ಲಿ ಗೋವಾಕ್ಕೆ ತೆರಳುತ್ತಿದ್ದ ಕ್ರೂಸ್ ಹಡಗಿನಲ್ಲಿ ಎನ್‌ಸಿಬಿ ತಂಡವೊಂದು ಡ್ರಗ್ಸ್ ಪಾರ್ಟಿಯನ್ನು ಭೇದಿಸಿತು. ಇಬ್ಬರು ನೈಜೀರಿಯನ್ ಪ್ರಜೆಗಳು ಸೇರಿದಂತೆ ಒಟ್ಟು 20 ಜನರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇಲ್ಲಿಯವರೆಗೆ ಬಂಧಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ