Alia Bhatt: ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ತಮ್ಮ ಹೊಸ ಚಿತ್ರ 'RRR' ಬಗ್ಗೆ ಚರ್ಚೆಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಈ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿಗೆ ಆಲಿಯಾ 'ಆರ್‌ಆರ್‌ಆರ್' ಸ್ಟಾರ್‌ಕಾಸ್ಟ್‌ನೊಂದಿಗೆ 'ದಿ ಕಪಿಲ್ ಶರ್ಮಾ ಶೋ'ನಲ್ಲಿ (The Kapil Sharma Show) ಕಾಣಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ, ಕಪಿಲ್ ಶರ್ಮಾ ಅವರು ಆಲಿಯಾ ಗೆಳೆಯ ರಣಬೀರ್ ಕಪೂರ್‌ಗೆ ಸಂಬಂಧಿಸಿದ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಅದನ್ನು ಕೇಳಿದ ನಂತರ ನಟಿ ಆಲಿಯಾ ಭಟ್ ಅವರು ನಾಚಿಕೆಯಿಂದ ಕೆಂಪಾಗಿದ್ದಾರೆ. ಕಾರ್ಯಕ್ರಮದ ಪ್ರೋಮೋ ವಿಡಿಯೋ ಹೊರಬಿದ್ದಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.


COMMERCIAL BREAK
SCROLL TO CONTINUE READING

ಕಪಿಲ್‌ನ ಪ್ರಶ್ನೆಯನ್ನು ಕೇಳಿ ನಾಚಿ ನೀರಾದ ಆಲಿಯಾ: 
‘ಆರ್‌ಆರ್‌ಆರ್‌’ಗೆ (RRR) ಸಹಿ ಹಾಕುವ ಮೊದಲು ಚಿತ್ರದ ಕಥೆಯನ್ನು ಕೇಳಿದ್ದೀರಾ ಅಥವಾ ‘ಆರ್‌’ ಎಂದು ಕೇಳಿದೊಡನೆಯೇ ಹೌದು ಎಂದು ಚಿತ್ರಕ್ಕೆ ಸಹಿ ಮಾಡಿದ್ರಾ ಎಂದು ಕಪಿಲ್ ಶರ್ಮಾ (Kapil Sharma) ನಟಿ ಆಲಿಯಾ ಭಟ್  (Alia Bhatt) ಅವರನ್ನು ಪ್ರಶ್ನಿಸುತ್ತಿರುವುದನ್ನು ಹಾಗೂ ಈ ಪ್ರಶ್ನೆ ಕೇಳಿದೊಡನೆಯೇ ಆಲಿಯಾ ನಾಚಿ ನೀರಾಗುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಜೊತೆಗಿದ್ದ ಸಹ-ನಟರಾದ ರಾಮ್ ಚರಣ್ (Ram Charan) ಮತ್ತು ಜೂನಿಯರ್ ಎನ್ಟಿಆರ್ (Jr NTR) ಜೋರಾಗಿ ಚಪ್ಪಾಳೆ ತಟ್ಟುತ್ತಾ ನಗಲು ಪ್ರಾರಂಭಿಸಿದರು.


ಇದನ್ನೂ ಓದಿ-  Aditi Prabhudeva: ಗುಟ್ಟಾಗಿ ಎಂಗೇಜ್​ಮೆಂಟ್ ಮಾಡಿಕೊಂಡ್ರಾ ನಟಿ ಅದಿತಿ ಪ್ರಭುದೇವ..?


ಆಲಿಯಾಳನ್ನು ಕಪೂರ್ ಹೆಸರಿನಲ್ಲಿ ಕೀಟಲೆ ಮಾಡಿದ ಕೃಷ್ಣ:
ಇದಾದ ನಂತರ ವೀಡಿಯೋದಲ್ಲಿ ಕೃಷ್ಣಾ ಅಭಿಷೇಕ್ (Krushna Abhishek)  ಎಂಟ್ರಿಯಾಗಿದ್ದು, ಅವರು ಭಾರತೀಯ ಶೈಲಿಯ ಮಹಿಳೆಯ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಕೃಷ್ಣಾ ಆಲಿಯಾ ಭಟ್  (Alia Bhatt) ಬಳಿ ನಿಮ್ಮ 'ಕಪೂರ್ ಅಂಡ್ ಸನ್ಸ್' ಚಿತ್ರ ನನಗೆ ತುಂಬಾ ಇಷ್ಟವಾಯಿತು ಎಂದು ಆಲಿಯಾರಿಗೆ ಹೇಳಿದ್ದಾರೆ. 


ಇದೇ ವಿಡಿಯೋದಲ್ಲಿ ಖ್ಯಾತ ನಿರ್ದೇಶಕ ರಾಜಮೌಳಿ (Rajmouly) ಅವರಿಗೂ ತಮಾಷೆ ಮಾಡಿರುವ ಕೃಷ್ಣ, ಇವರು ಬಾಹುಬಲಿ ನಿರ್ದೇಶಕರು ಇವರಿಗೆ ಸಾಮಾನ್ಯ ಇಡ್ಲಿ ನೀಡಲು ಸಾಧ್ಯವೇ ಎನ್ನುತ್ತಾರೆ. ಹಿಂಬದಿಯಿಂದ ಬಾಹುಬಲಿ ಚಿತ್ರದ ಗಾನ ಆರಂಭವಾಗುತ್ತಿದ್ದಂತೆ ವ್ಯಕ್ತಿಯೋರ್ವ ಗಾತ್ರದಲ್ಲಿ ದೊಡ್ಡದಾದ ಇಡ್ಲಿಯನ್ನು ರಾಜಮೌಳಿ ಅವರಿಗಾಗಿ ತರುವುದನ್ನು ಕಾಣಬಹುದು. ಇದನ್ನು ನೋಡುತ್ತಿದ್ದಂತೆ ಎಲ್ಲರೂ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾರೆ.



ಇದನ್ನೂ ಓದಿ- 56ನೇ ವಯಸ್ಸಿನಲ್ಲೂ ಕಟ್ಟುಮಸ್ತಾದ ದೇಹ ಹೊಂದಿರುವ ಸಲ್ಮಾನ್ ಖಾನ್.. ಇದೇ ಅವರ Fitness secret.!


ಜನವರಿ ಮೊದಲ ವಾರದಲ್ಲಿ ತೆರೆಕಾಣಲಿದೆ ಚಿತ್ರ:
ಆಲಿಯಾ ಭಟ್ ಅವರ ಚಿತ್ರ 'RRR' ಜನವರಿ 7, 2022 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಜಯ್ ದೇವಗನ್ ಕೂಡ ಈ ಚಿತ್ರದ ಪ್ರಮುಖ ಭಾಗವಾಗಿದ್ದಾರೆ. ಇತ್ತೀಚೆಗಷ್ಟೇ 'RRR' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರದ ಮೂಲಕ ಆಲಿಯಾ ಭಟ್ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಇದಲ್ಲದೆ, ಅವರು ರಣಬೀರ್ ಕಪೂರ್ ಅವರೊಂದಿಗೆ 'ಬ್ರಹ್ಮಾಸ್ತ್ರ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು ಸೆಪ್ಟೆಂಬರ್ 9, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.