RRR Star Cast Fees: RRR ಚಿತ್ರದ ತಾರಾಗಣದ ಮೇಲೆ ಹಣದ ಸುರಿಮಳೆ, ಯಾರಿಗೆ ಎಷ್ಟು ಸಂಭಾವನೆ ಸಿಕ್ಕಿದೆ, ವಿವರ ಇಲ್ಲಿದೆ

RRR Star Cast Fees: 'ಬಾಹುಬಲಿ'ಯಂತಹ ಅದ್ಬುತ ಸಿನಿಮಾ ಮಾಡಿದ ಎಸ್ ಎಸ್ ರಾಜಮೌಳಿ ಮತ್ತೊಮ್ಮೆ ಬೆಳ್ಳಿ ತೆರೆಯಲ್ಲಿ ತಮ್ಮ ಮ್ಯಾಜಿಕ್ ಮಾಡಲು ರೆಡಿಯಾಗಿದ್ದಾರೆ. ಅವರ ಚಿತ್ರ RRR ಹೊಸ ವರ್ಷದಲ್ಲಿ ಜನವರಿ 7 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಟ್ರೇಲರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಚಿತ್ರ ಬಿಡುಗಡೆಗಾಗಿ ಜನರು ದೀರ್ಘಕಾಲದಿಂದ ತುದಿಗಾಲಲ್ಲಿ ಕಾಯುತ್ತಿದ್ದಾರೆ. 

Written by - Nitin Tabib | Last Updated : Dec 25, 2021, 04:32 PM IST
  • 'ಬಾಹುಬಲಿ'ಯಂತಹ ಅದ್ಬುತ ಸಿನಿಮಾ ಮಾಡಿದ ಎಸ್ ಎಸ್ ರಾಜಮೌಳಿ ಮತ್ತೊಮ್ಮೆ ಬೆಳ್ಳಿ ತೆರೆಯಲ್ಲಿ ತಮ್ಮ ಮ್ಯಾಜಿಕ್ ಮಾಡಲು ರೆಡಿಯಾಗಿದ್ದಾರೆ.
  • ಅವರ ಚಿತ್ರ RRR ಹೊಸ ವರ್ಷದಲ್ಲಿ ಜನವರಿ 7 ರಂದು ಬಿಡುಗಡೆಯಾಗುತ್ತಿದೆ.
  • ಈ ಚಿತ್ರದ ಟ್ರೇಲರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.
RRR Star Cast Fees: RRR ಚಿತ್ರದ ತಾರಾಗಣದ ಮೇಲೆ ಹಣದ ಸುರಿಮಳೆ, ಯಾರಿಗೆ ಎಷ್ಟು ಸಂಭಾವನೆ ಸಿಕ್ಕಿದೆ, ವಿವರ ಇಲ್ಲಿದೆ title=
RRR Star Cast Fees (File Photo)

RRR Star Cast Fees: 'ಬಾಹುಬಲಿ'ಯಂತಹ ಅದ್ಬುತ ಸಿನಿಮಾ ಮಾಡಿದ ಎಸ್ ಎಸ್ ರಾಜಮೌಳಿ ಮತ್ತೊಮ್ಮೆ ಬೆಳ್ಳಿ ತೆರೆಯಲ್ಲಿ ತಮ್ಮ ಮ್ಯಾಜಿಕ್ ಮಾಡಲು ರೆಡಿಯಾಗಿದ್ದಾರೆ. ಅವರ ಚಿತ್ರ RRR ಹೊಸ ವರ್ಷದಲ್ಲಿ ಜನವರಿ 7 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಟ್ರೇಲರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಚಿತ್ರ ಬಿಡುಗಡೆಗಾಗಿ ಜನರು ದೀರ್ಘಕಾಲದಿಂದ ತುದಿಗಾಲಲ್ಲಿ ಕಾಯುತ್ತಿದ್ದಾರೆ. 

ರಾಜಮೌಳಿಯವರ ಚಿತ್ರ RRR (RRR Film) ಒಂದು ಬಿಗ್ ಬಜೆಟ್ ಚಿತ್ರವಾಗಿದೆ. ಹೀಗಾಗಿ ಚಿತ್ರದ ತಾರಾಗಣವು ಕೂಡ ಅಷ್ಟೇ ಉತ್ತಮವಾಗಿದೆ. ಈ ಚಿತ್ರದಲ್ಲಿ ದಕ್ಷಿಣದ ಸೂಪರ್‌ಸ್ಟಾರ್ ನಟ ರಾಮ್ ಚರಣ್, ಜೂನಿಯರ್ ಎನ್‌ಟಿಆರ್, ನಟಿ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಪ್ರಮುಖ  ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಈ ಸ್ಟಾರ್‌ಗಳು ಪಡೆದ ಸಂಭಾವನೆ ಎಷ್ಟು ಗೊತ್ತಾ?

ಆರ್ ಆರ್ ಆರ್ ಚಿತ್ರದಲ್ಲಿ ನಟ ಅಜಯ್ ದೇವಗನ್ (Ajay Devgan) ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸೌತ್ ಸಿನಿಮಾ ಅಜಯ್ ಕಾಣಿಸಿಕೊಳ್ಳುತ್ತಿರುವುದು ಇಲ್ಲಿ ವಿಶೇಷ. ಮಾಧ್ಯಮಗಳ ವರದಿ ಪ್ರಕಾರ ಈ ಚಿತ್ರಕ್ಕಾಗಿ ಅವರಿಗೆ 25 ಕೋಟಿ ರೂ. ಸಂಭಾವನೆ ನೀಡಲಾಗಿದೆ. 

ರಾಜಮೌಲಿ ಅವರ ಚಿತ್ರ RRRನಲ್ಲಿ ಖ್ಯಾತ ಬಾಲಿವುಡ್ ನಟಿ ಅಲಿಯಾ ಭಟ್ (Alia Bhatt) ಕೂಡ ನಟಿಸುತ್ತಿದ್ದಾಳೆ. ಚಿತ್ರದಲ್ಲಿ ಆಕೆ ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಈ ಚಿತ್ರಕ್ಕಾಗಿ ಆಕೆಗೆ 9 ಕೋಟಿ ರೂ.ಗಳನ್ನು ಸಂಭಾವನೆ ರೂಪದಲ್ಲಿ ನೀಡಲಾಗಿದೆ. 

ಇದನ್ನೂ ಓದಿ-ಚಿತ್ರ ರಸಿಕರಿಗೆ ರಸದೌತಣ , 2022 ರಲ್ಲಿ ತೆರೆ ಕಾಣಲಿದೆ ಹತ್ತು ಅಮೋಘ ಚಿತ್ರಗಳು

ಈ ಚಿತ್ರದಲ್ಲಿ ತೆಲುಗಿನ ಸೂಪರ್ ಸ್ಟಾರ್ ನಟ ಜ್ಯೂನಿಯರ್ NTR (Junior NTR) ಕೊಮಾರಾಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ಈ ಪಾತ್ರಕ್ಕಾಗಿ 45 ಕೋಟಿ ರೂ. ಸಂಭಾವನೆ ನೀಡಲಾಗಿದೆ.

ಇದನ್ನೂ ಓದಿ-ರಾಜಾಮೌಳಿ ಮತ್ತು ಅನುಷ್ಕಾ- ಪ್ರಭಾಸ್ ಮಧ್ಯೆ ಹೊಗೆಯಾಡುತ್ತಿದೆಯೇ ಮನಸ್ಥಾಪ? RRR ಟ್ರೈಲರ್ ರಿಲೀಸ್ ನಂತರ ಆಗಿದ್ದೇನು?

ನಟ ರಾಮ್ ಚರಣ್ (Ram Charan) ತೇಜಾ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಈ ಚಿತ್ರದಲ್ಲಿ ಅಲ್ಲೂರೀ ಸೀತಾರಾಂ ರಾಜು ಪಾತ್ರದಲ್ಲಿ ಕಾನಿಸಿಕೊಳ್ಳಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಅವರಿಗೂ ಕೂಡ ಈ ಚಿತ್ರದಲ್ಲಿನ ಪಾತ್ರಕ್ಕಾಗಿ 45 ಕೋಟಿ ರೂ.ಸಂಭಾವನೆ ನೀಡಲಾಗಿದೆ. 

ಇದನ್ನೂ ಓದಿ-RRR Glimpse Teaser OUT: ಮತ್ತೆ ನೆತ್ತರು ಹರಿಯಲಿದೆ, ಆಕ್ಷನ್-ಇಮೊಶನ್ ನ ಡಬಲ್ ಡೋಸ್, Bahubali ಹಿಂದೆ ಬೀಳಲಿದೆಯಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News