Why Deepika Padukone Married Ranaveer Singh? - ಮುಂಬೈ: ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಬಿ-ಟೌನ್ ನ ಯಶಸ್ವಿ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ. ಈ ಇಬ್ಬರನ್ನು ನೋಡಿ ಹಲವು ಜನ ತಮ್ಮ ಬಾಳಸಂಗಾತಿ ದೀಪಿಕಾ ಅಥವಾ ರಣವೀರ್ ಹಾಗೆ ಇರಬೇಕೆಂದುಕೊಳ್ಳುತ್ತಾರೆ. ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ  ಸಂದರ್ಶನವೊಂದರ ವೇಳೆ ತಮ್ಮ ಹಾಗೂ ರಣವೀರ್ ಸಿಂಗ್ ಅವರ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ತಾವಿಬ್ಬರು ಹೇಗೆ ವಿವಾಹದ ನಿರ್ಣಯ ಕೈಗೊಂಡೆವು ಎಂಬುದರ ಜೊತೆಗೆ ರಣವೀರ್ ಸಿಂಗ್ ಅವರಲ್ಲಿ ತಮಗೆ ನೆಚ್ಚಿದ್ದೇನು ಎಂಬುದರ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ-Bollywood Most Expensive Film: ಬಾಲಿವುಡ್ ನ ಅತ್ಯಂತ ದುಬಾರಿ ಚಿತ್ರ ಇದಾಗಲಿದೆ


Deepika Padukone), 'ಮದುವೆಯ ಬಳಿಕವೂ ಕೂಡ ತಾವಿಬ್ಬರು ಪರಸ್ಪರ ಸ್ನೇಹಿತರಂತೆ ವರ್ತಿಸುತ್ತೇವೆ. ನಾವಿಬ್ಬರು ಕಳೆದ 8 ವರ್ಷಗಳಿಂದ ಜೋತೆಯಾಗಿದ್ದೇವೆ ಮತ್ತು ಇದೇ ನಮ್ಮಿಬ್ಬರ ನಡುವಿನ ಸಂಬಂಧದ ಸುಂದರತೆಯಾಗಿದೆ. ರಣವೀರ್ ತಮ್ಮ ಮುಂದೆ ಓರ್ವ ಸ್ನೇಹಿತನ ಪ್ರಸ್ತಾವನೆ ಇಟ್ಟಿದ್ದರು. ಆಗ ನಾವಿಬ್ಬರು ಪರಸ್ಪರ ಸ್ನೇಹಿತರಾಗುವುದಾಗಿ ಒಪ್ಪಿಕೊಂಡೆವು ಮತ್ತು ಇದೆ ಕಾರಣದಿಂದ ನಾವಿಬ್ಬರು ಪ್ರತ್ಯೇಕ ವ್ಯಕ್ತಿಗಳಾಗಿದ್ದರು ಕೂಡ ಪರಸ್ಪರ ಹೊಂದಿಕೊಂಡಿದ್ದೇವೆ' ಎಂದು ಹೇಳಿದ್ದಾರೆ.


ಇದನ್ನು ಓದಿ-Deepika Padukone ಫೇಸ್ ಬುಕ್, ಇನ್ ಸ್ಟಾ, ಟ್ವಿಟರ್ ನ ಎಲ್ಲಾ ಪೋಸ್ಟ್ ಡಿಲೀಟ್



ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ ದೀಪಿಕಾ ಪಡುಕೋಣೆ ಅಂದರೆ ಬಾಲಿವುಡ್ ನಲ್ಲಿ ಮಸ್ತಾನಿ ಎಂದೇ ಖ್ಯಾತ ಈ ನಟಿ 2021 ರಲ್ಲಿ ಬಾಲಿವುಡ್ ನಲ್ಲಿ ಧಮಾಲ್ ಸೃಷ್ಟಿಸಲು ರೆಡಿಯಾಗಿದ್ದಾರೆ. ಒಂದಾದ ಮೇಲೊಂದರಂತೆ ಹಿಟ್ ಚಿತ್ರಗಳನ್ನು ನೀಡಿರುವ ದೀಪಿಕಾ ಶೀಘ್ರದಲ್ಲಿಯೇ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ದೀಪಿಕಾ ತಮ್ಮ ಪತಿ ರಣವೀರ್ ಸಿಂಗ್ ಅವರ ಚಿತ್ರ '83'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಮದುವೆಯ ಬಳಿಕ ಮೊದಲಬಾರಿಗೆ ಈ ಇಬ್ಬರು ಬೆಳ್ಳಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರ 2020ರಲ್ಲಿ ತೆರೆ ಕಾಣಬೇಕಿತ್ತು ಆದರೆ, ಕೊರೊನಾ ಕಾಲದ ಹಿನ್ನೆಲೆ ಈ ಚಿತ್ರ ಬಿಡುಗಡೆಯಾಗಿರಲಿಲ್ಲ.


ಇದನ್ನು ಓದಿ-Drugs Case: ಕರೀಷ್ಮಾ ಜೊತೆಗೆ ಡ್ರಗ್ಸ್ ಚಾಟ್ ನಡೆಸಿರುವುದಾಗಿ ಒಪ್ಪಿಕೊಂಡ Deepika Padukone


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.