Bollywood Most Expensive Film: ಬಾಲಿವುಡ್ ನ ಅತ್ಯಂತ ದುಬಾರಿ ಚಿತ್ರ ಇದಾಗಲಿದೆ

Bollywood Most Expensive Film - ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅವರ ಮುಂಬರುವ ಚಿತ್ರ 'ಫೈಟರ್' ಒಂದು  ಹೈ ಅಟ್ರಾಕ್ಷನ್ ಡ್ರಾಮಾ ಚಿತ್ರವಾಗಿದ್ದು, ಈ ಚಿತ್ರ ದೇಶಪ್ರೇಮದ ಜೊತೆಗೆ ಆಕ್ಷನ್ ಮತ್ತು ಪ್ರಣಯ ದೃಶ್ಯಗಳಿಂದ ಕೂಡಿರಲಿದೆ. ಮಾಹಿತಿಯ ಪ್ರಕಾರ, ಸಿದ್ಧಾರ್ಥ್ ಆನಂದ್ ಅವರ 'ಫೈಟರ್' ಚಿತ್ರ ಬಿ-ಟೌನ್ ನ ಅತ್ಯಂತ ದುಬಾರಿ ಚಿತ್ರ ಆಗಿರಲಿದೆ ಎಂದು ಹೇಳಲಾಗುತ್ತಿದೆ.

Written by - Nitin Tabib | Last Updated : Jan 15, 2021, 10:23 PM IST
  • ಬೆಳ್ಳಿ ಪರದೆಯ ಮೇಲೆ ಮೊದಲ ಬಾರಿಗೆ ಹೃತಿಕ್-ದೀಪಿಕಾ ಜೋಡಿ.
  • 'ಫೈಟರ್' ಬಿ-ಟೌನ್ ನ ಅತ್ಯಂತ ದುಬಾರಿ ಚಿತ್ರವಾಗಿರಲಿದೆ.
  • ಈ ಚಿತ್ರ ಒಟ್ಟು 250 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣಗೊಳ್ಳುತ್ತಿದೆ.
Bollywood Most Expensive Film: ಬಾಲಿವುಡ್ ನ ಅತ್ಯಂತ ದುಬಾರಿ ಚಿತ್ರ ಇದಾಗಲಿದೆ

Bollywood Most Expensive Film - ಮುಂಬೈ: ಖ್ಯಾತ ಬಾಲಿವುಡ್ ನಟ ಹೃತಿಕ್ ರೋಶನ್ (Hritik Roshan) ಹಾಗೂ ದೀಪಿಕಾ ಪಡುಕೋಣೆ (Deepika Padukone) ಮತ್ತೊಮ್ಮೆ ಬೆಳ್ಳಿ ಪರದೆಯ ಮೇಲೆ ಧಮಾಲ್ ಮಾಡಲು ಸಿದ್ಧರಾಗಿದ್ದಾರೆ. ಇತ್ತೀಚೆಗಷ್ಟೇ ಹೃತಿಕ್ ರೋಶನ್ ತಮ್ಮ ಮುಂಬರುವ ಚಿತ್ರ 'ಫೈಟರ್' ನ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರು ದೀಪಿಕಾ ಅವರೊಂದಿಗೆ ಮೊಟ್ಟಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಉಭಯ ತಾರೆಯರು ಪರಸ್ಪರ ತೆರೆ ಹಂಚಿಕೊಳ್ಳಲು ಭಾರಿ ಉತ್ಸುಕರಾಗಿದ್ದಾರೆ. ಸದ್ಯ ಈ ಚಿತ್ರದ ಕುರಿತು ಕೆಲ ಆಂತರಿಕ ಮಾಹಿತಿ ಕೂಡ ಬಹಿರಂಗವಾಗಿದೆ. ಹೌದು, 'ಫೈಟರ್' ಬಾಲಿವುಡ್ ನ ಅತ್ಯಂತ ದುಬಾರಿ ಚಿತ್ರವಾಗಿರಲಿದೆ ಎಂದು ಹೇಳಲಾಗುತ್ತಿದೆ.

250 ಕೋಟಿ ರೂ ಬಜೆಟ್
ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅವರ ಮುಂಬರುವ ಚಿತ್ರ 'ಫೈಟರ್' ಒಂದು  ಹೈ ಅಟ್ರಾಕ್ಷನ್ ಡ್ರಾಮಾ ಚಿತ್ರವಾಗಿದ್ದು, ಈ ಚಿತ್ರ ದೇಶಪ್ರೇಮದ ಜೊತೆಗೆ ಆಕ್ಷನ್ ಮತ್ತು ಪ್ರಣಯ ದೃಶ್ಯಗಳಿಂದ ಕೂಡಿರಲಿದೆ. ಮಾಹಿತಿಯ ಪ್ರಕಾರ, ಸಿದ್ಧಾರ್ಥ್ ಆನಂದ್ ಅವರ 'ಫೈಟರ್' ಚಿತ್ರ ಬಿ-ಟೌನ್ ನ ಅತ್ಯಂತ ದುಬಾರಿ ಚಿತ್ರ ಆಗಿರಲಿದೆ ಎಂದು ಹೇಳಲಾಗುತ್ತಿದೆ.

ಸಿದ್ಧಾರ್ಥ್ ಆನಂದ್ ಅವರ ಚಿತ್ರದ ಬಜೆಟ್ 250 ಕೋಟಿ ಎಂದು ಹೇಳಲಾಗುತ್ತಿದೆ. ವಿಶೇಷವೆಂದರೆ, ಇಲ್ಲಿಯವರೆಗೆ ಬಾಲಿವುಡ್‌ನಲ್ಲಿ ಈ ಗಾತ್ರದ ಬಜೆಟ್‌ನಲ್ಲಿ ಯಾವುದೇ ಚಿತ್ರ ಸಿದ್ಧಗೊಂಡಿಲ್ಲ. ಇದಕ್ಕೂ ಮುನ್ನ 175 ಕೋಟಿ ರೂ.ಗಳ ಬಜೆಟ್‌ನೊಂದಿಗೆ ನಿರ್ಮಿಸಲಾದ ಪ್ರೇಮ್ ರತನ್ ಧನ್ ಪಾಯೋ  (Prem Ratan Dhan Payo) ಹಾಗೂ ಧೂಮ್ 3 (Dhoom 3) ಚಿತ್ರಗಳು  ಹಿಂದಿ ಚಿತ್ರರಂಗದ ಅತ್ಯಂತ ದುಬಾರಿ ಚಿತ್ರಗಳೆಂದು ಹೇಳಲಾಗುತ್ತದೆ. ಇನ್ನೊಂದೆಡೆ 'ಫೈಟರ್' 250 ಕೋಟಿ ರೂ. ಬಿಗ್ ಬಜೆಟ್ ಹೊಂದಿದ ಚಿತ್ರವಾಗಿರಲಿದೆ.

ಇದನ್ನು ಓದಿ- ಕುತೂಹಲ ಕೆರಳಿಸಿದ ದೀಪಿಕಾ ಪಡುಕೋಣೆ, ಹೃತಿಕ್ ರೋಶನ್ ಟ್ವೀಟ್ ವಿನಿಮಯ

ಫೈಟರ್ ಜೆಟ್ ಉಡಾಯಿಸಲಿರುವ ಹೃತಿಕ್ ರೋಶನ್
ಫೈಟರ್ ಚಿತ್ರ ಎದೆಬಡಿತ ಹೆಚ್ಚಿಸುವಂತಹ ಆಕ್ಷನ್ ನಿಂದ ಕೂಡಿರುವ ಚಿತ್ರವಾಗಿದೆ ಎಂಬುದು ಹೃತಿಕ್ ರೋಶನ್ ಬಿಡುಗಡೆಗೊಳಿಸಿರುವ 15 ಸೆಕೆಂಡ್ ಗಳ ಟೀಸರ್ ನಿಂದ ಸಾಬೀತಾಗುತ್ತದೆ. ಈ ಚಿತ್ರದಲ್ಲಿ ಹೃತಿಕ್ ರೋಶನ್ ಓರ್ವ ಏರ್ ಫೋರ್ಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅವರು ಫೈಟರ್ ಜೆಟ್ ಪ್ಲೇನ್ ಹಾರಿಸಲಿದ್ದಾರೆ. ಇದೊಂದು ದೇಶಭಕ್ತಿಯಿಂದ ತುಂಬಿದ ಚಿತ್ರವಾಗಿದೆ. ಈ ಮೊದಲೂ ಕೂಡ ಹೃತಿಕ್ ರೋಶನ್ 'ಲಕ್ಷ್' ಹೆಸರಿನ ದೇಶಭಕ್ತಿ ಪ್ರದಾನ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನು ಓದಿ-Deepika Padukone ಫೇಸ್ ಬುಕ್, ಇನ್ ಸ್ಟಾ, ಟ್ವಿಟರ್ ನ ಎಲ್ಲಾ ಪೋಸ್ಟ್ ಡಿಲೀಟ್

ಚಿತ್ರ ಬಿಡುಗಡೆ ಯಾವಾಗ
ಫೈಟರ್ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ   ಹೃತಿಕ್ ರೋಶನ್, ದೀಪಿಕಾ ಪಡುಕೋಣೆ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ನಿರ್ದೇಶಕ ಸಿದ್ಧಾರ್ಥ್ ಆನಂದ್ ಜೊತೆಗೆ ಅವರ ಮೂರನೇ ಚಿತ್ರ ಇದಾಗಿರಲಿದೆ.  ಇದಕ್ಕೂ ಮೊದಲು ಸಿದ್ಧಾರ್ಥ್ ಆನಂದ್ ನಿರ್ದೇಶಿತ 'ಬ್ಯಾಂಗ್ ಬ್ಯಾಂಗ್' ಹಾಗೂ 'ವಾರ್' ನಲ್ಲಿಯೂ ಕೂಡ ಹೃತಿಕ್ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಡಿಸೆಂಬರ್ 2021ರಲ್ಲಿ ಆರಂಭಗೊಳ್ಳುತ್ತಿದ್ದು, ಸೆಪ್ಟೆಂಬರ್ 30, 2022 ರಂದು ಚಿತ್ರ ಬಿಡುಗಡೆಯಾಗಲಿದೆ.

ಇದನ್ನು ಓದಿ-ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News