ಮುಂಬೈ: ಸೆಲೆಬ್ರಿಟಿಗಳು ಮಾಡಿದ ವಿವಾದಾತ್ಮಕ ವೀಡಿಯೊಗಳು ಮತ್ತು ಕಾಮೆಂಟ್‌ಗಳನ್ನು ವೈರಲ್ ಮಾಡುವುದಕ್ಕೆ ಯಾವಾಗಲೂ ನೆಟಿಜನ್‌ಗಳು ಕಾಯ್ದುಕುಳಿತಿರುತ್ತಾರೆ.


COMMERCIAL BREAK
SCROLL TO CONTINUE READING

ಇತ್ತೀಚೆಗೆ, ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಎಸ್‌ಎಸ್ ರಾಜಮೌಳಿ ಅವರ ಹಳೆಯ ಕ್ಲಿಪ್ ಏಕಾಏಕಿ ವೈರಲ್ ಆಗಿತ್ತು, ಇದರಲ್ಲಿ ಅವರು ಪ್ರಭಾಸ್‌ಗೆ ಹೋಲಿಸಿದರೆ ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ 'ಏನೂ ಇಲ್ಲ' ಎಂದು ಹೇಳಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.ಈಗ ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ರಾಜಮೌಳಿ ಇದು ಹಳೆಯ ವಿಡಿಯೋ ಎಂದು ಹೇಳಿದ್ದಾರೆ.


ಅಷ್ಟಕ್ಕೂ ರಾಜಮೌಳಿ ವೈರಲ್ ಆಗಿರುವ ವಿಡಿಯೋದಲ್ಲಿ ಹೇಳಿದ್ದೇನು:


“ಎರಡು ವರ್ಷಗಳ ಹಿಂದೆ ಧೂಮ್ 2 ಬಿಡುಗಡೆಯಾದಾಗ, ಬಾಲಿವುಡ್‌ನಲ್ಲಿ ಮಾತ್ರ ಏಕೆ ಅಂತಹ ಗುಣಮಟ್ಟದ ಚಿತ್ರಗಳನ್ನು ಮಾಡಲು ಸಾಧ್ಯ ಎಂದು ನಾನು ಆಶ್ಚರ್ಯಪಟ್ಟೆ. ಹೃತಿಕ್ ರೋಷನ್‌ನಂತಹ ಹೀರೋಗಳು ನಮ್ಮಲ್ಲಿ ಇಲ್ಲವೇ? ನಾನು ಬಿಲ್ಲಾದ ಹಾಡುಗಳು, ಪೋಸ್ಟರ್ ಮತ್ತು ಟ್ರೇಲರ್ ಅನ್ನು ನೋಡಿದ್ದೇನೆ, ಮತ್ತು ನಾನು ಒಂದು ವಿಷಯವನ್ನು ಮಾತ್ರ ಹೇಳಬಲ್ಲೆ. ಪ್ರಭಾಸ್ ಮುಂದೆ ಹೃತಿಕ್ ರೋಷನ್ ಏನೂ ಅಲ್ಲ.ತೆಲುಗು ಸಿನಿಮಾವನ್ನು ಹಾಲಿವುಡ್ ಮಟ್ಟಕ್ಕೆ ಕೊಂಡೊಯ್ದಿದ್ದಕ್ಕಾಗಿ ಮೆಹರ್ ರಮೇಶ್ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ.” ಎಂದು ಹೇಳುವುದನ್ನು ಕಾಣಬಹುದಾಗಿದೆ.


ಎಎನ್‌ಐ ಮೂಲಕ ರಾಯಿಟರ್ಸ್ ಹಂಚಿಕೊಂಡ ವೀಡಿಯೊದಲ್ಲಿ, ಪ್ರತಿಕ್ರಿಯಿಸಿರುವ ರಾಜಮೌಳಿ “ಇದು ಸುಮಾರು 15-16 ವರ್ಷಗಳ ಹಿಂದೆ ಭಾವಿಸುತ್ತೇನೆ. ಆದರೆ ಹೌದು, ನನ್ನ ಪದಗಳ ಆಯ್ಕೆ ಚೆನ್ನಾಗಿರಲಿಲ್ಲ, ನಾನು ಅದನ್ನು ಒಪ್ಪಿಕೊಳ್ಳಲೇಬೇಕು.ನನ್ನ ಉದ್ದೇಶವು ಅವರನ್ನು ಎಂದಿಗೂ ಕೀಳಾಗಿ ಕಾಣುವುದು ಆಗಿರಲಿಲ್ಲ, ನಾನು ಅವರನ್ನು ತುಂಬಾ ಗೌರವಿಸುತ್ತೇನೆ” ಎಂದು ಅವರು ಹೇಳಿದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.