ನವದೆಹಲಿ: ಹೆಂಗಸರೇ ಮನೆಯ ಎಲ್ಲಾ ಕೆಲಸಗಳನ್ನು ಮಾಡಬೇಕು ಎಂದು ಏಕೆ ನಿರೀಕ್ಷಿಸಬೇಕು? ಎಂದು ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ಪತ್ನಿ ಟ್ವಿಂಕಲ್ ಖನ್ನಾ ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಸುದ್ದಿ ಸಂಸ್ಥೆ  ಐಎಎನ್‌ಎಸ್‌ನೊಂದಿಗಿನ ಸಂವಾದದಲ್ಲಿ ಮಾತನಾಡಿದ ನಟಿ, ಲೇಖಕಿ ಟ್ವಿಂಕಲ್ ಖನ್ನಾ (Twinkle Khanna) ಮನೆಯ ಕೆಲಸಗಳನ್ನು ಕುಟುಂಬದ ಎಲ್ಲಾ ಸದಸ್ಯರು ಹಂಚಿಕೊಳ್ಳಬೇಕು ಎಂದು ಒತ್ತಿ ಹೇಳಿದರು. ಜೊತೆಗೆ ಲಾಕ್‌ಡೌನ್ (Lockdown) ಸಮಯದಲ್ಲಿ ತನ್ನ ಪತಿ ನಟ ಅಕ್ಷಯ್ ಕುಮಾರ್ ಅಡಿಗೆ ಕರ್ತವ್ಯದ ಉಸ್ತುವಾರಿಯನ್ನು ಹೇಗೆ ವಹಿಸಿಕೊಂಡಿದ್ದರು ಎಂಬುದರ ಬಗ್ಗೆ ಗಮನ ಸೆಳೆದರು.


ಜವಾಬ್ದಾರಿಯನ್ನು ಲಿಂಗಕ್ಕೆ ಅನುಗುಣವಾಗಿ ಹಂಚಿಕೊಳ್ಳಬಾರದು ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ ಟ್ವಿಂಕಲ್ ಪುರುಷರು ಮತ್ತು ಮಹಿಳೆಯರು ಜವಾಬ್ದಾರಿಗಳನ್ನು ಸಮಾನವಾಗಿ ಹಂಚಿಕೊಳ್ಳಬೇಕು. ಕೌಶಲ್ಯ ಸೆಟ್‌ಗಳ ಪ್ರಕಾರ ಅವುಗಳನ್ನು ಹಂಚಿಕೊಳ್ಳಬೇಕು. ನೀವು ನನ್ನಂತಹ ವ್ಯಕ್ತಿಯನ್ನು ಅಡುಗೆಮನೆಯಲ್ಲಿ ಇರಿಸಿದರೆ, ನಾನು ಶೋಚನೀಯಳಾಗಿರುತ್ತೇನೆ. ಅಡುಗೆ ಒತ್ತಡದಿಂದ ಕೂಡಿದೆ ಮತ್ತು ಅದು ನನಗೆ ನಿಜವಾದ ಸಮಸ್ಯೆ ಎಂದವರು ತಮ್ಮ ಬಗ್ಗೆ ಹೇಳಿಕೊಂಡರು.


ತನ್ನ ಗಂಡ ಮತ್ತು ಮಗ ಚೆನ್ನಾಗಿ ಅಡುಗೆ ಮಾಡುತ್ತಾರೆ. ಮತ್ತವರು ಅದನ್ನು ಅನಂದಿಸುತ್ತಾರೆ. ಅವರು ಮಧುರವಾದ ಗೀತೆಗಳನ್ನು ಕೇಳುತ್ತಾ ಅಸಾಧಾರಣ ಭಕ್ಷ್ಯಗಳನ್ನೂ ತಯಾರಿಸುತ್ತಾರೆ ಎಂದು ತಿಳಿಸಿದ ಟ್ವಿಂಕಲ್ ತಾವು ಮಾಡುವ ಅಡುಗೆ ಭೀಕರವಾಗಿರುತ್ತದೆ ಎಂದರು.


ನಾನೂ ಮನೆಯಲ್ಲಿ ವಸ್ತುಗಳನ್ನು ಸಂಘಟಿಸಲು ಇಷ್ಟಪಡುತ್ತೇನೆ. ದಿನಸಿ ವಸ್ತುಗಳನ್ನು ತರಿಸುವುದು, ಪಾತ್ರೆ ತೊಳೆಯುವುದು ಹೀಗೆ ಅಡುಗೆ ಮಾತ್ರವಲ್ಲ ಪ್ರತಿಯೊಬ್ಬರಿಗೂ ಅವರವರ ಕೌಶಲ್ಯಗಳಿಗೆ ಅನುಗುಣವಾಗಿ ಮನೆ ಕೆಲಸಗಳನ್ನು ವಿಂಗಡಿಸಬೇಕು. ಲಿಂಗಕ್ಕೂ ಕೆಲಸಕ್ಕೂ ಯಾವುದೇ ಸಂಬಂಧವಿಲ್ಲ ಎಂದವರು ಗಮನ ಸೆಳೆದರು.


ತಮ್ಮ ಕುಟುಂಬದ ಸದಸ್ಯರ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ ಟ್ವಿಂಕಲ್ ಅಕ್ಷಯ್ ಮತ್ತು ಮಗ ಆರವ್ ಅವರ ಅಡುಗೆ ಕೌಶಲ್ಯಕ್ಕೆ ಧನ್ಯವಾದಗಳು, ಕೋವಿಡ್ -19 (Covid-19) ಕತ್ತಲೆಯ ಮಧ್ಯೆ ಬೆಳ್ಳಿ ಪದರವನ್ನು ಕಂಡುಕೊಂಡಿದ್ದೇವೆ. ನನ್ನ ಮಗ ಅಡುಗೆ ಮಾಡಬಲ್ಲ ಎಂದು ತಿಳಿದಿತ್ತು. ಆದರೆ ಅವನು ವೆರೈಟಿ ಆಗಿ ಅಡುಗೆ ಮಾಡುತ್ತಾನೆ ಎಂಬುದು ನನಗೆ ತಿಳಿದಿರಲಿಲ್ಲ. ಅವನಿಗೆ ರಾಜ್ಮಾ ಮತ್ತು ಪಿಜ್ಜಾವನ್ನು ಹೇಗೆ ಮಾಡಬೇಕು ಎಂಬುದು ತಿಳಿದಿದೆ. ಈ ವಿಷಯ ನನಗೆ ಗೊತ್ತಾಗಿದ್ದು ಲಾಕ್‌ಡೌನ್ ಸಮಯದಲ್ಲಿ. ಅವರು 'ತಿರಮಿಸು' ಎಂಬ ಸಿಹಿ ತಿನಿಸನ್ನೂ ಅದ್ಬುತವಾಗಿ ಮಾಡುತ್ತಾನೆ. ಅಡುಗೆಮನೆಯಲ್ಲಿ ನಮ್ಮದೇ ಇಬ್ಬರು ಬಾಣಸಿಗರು ಇರುವುದರಿಂದ ಒಂದು ದಿನವೂ ನಾವು ಹೊರಗಿನಿಂದ ಊಟಕ್ಕೆ ಆರ್ಡರ್ ಮಾಡಲಿಲ್ಲ. ಹಾಗಾಗಿ ಅದೊಂದು ಬೆಳ್ಳಿಯ ಪದರ ಎಂದು ನಾನು ಭಾವಿಸುತ್ತೇನೆ ಎಂದ ಟ್ವಿಂಕಲ್ ಇದು ಒಂದು ಆಶೀರ್ವಾದ ಎಂದರು.


ಲಾಕ್‌ಡೌನ್ ಸಮಯದಲ್ಲಿ ಮನೆ ನಿಭಾಯಿಸಲು ಮನೆಯ ಪುರುಷರು ಪಾಲುದಾರರಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಟ್ವಿಂಕಲ್ ಮುಂದೆಯೂ ಇದು ಹೀಗೆಯೇ ಮುಂದುವರೆಯಲಿದೆಯೇ ಎಂಬುದನ್ನು ಕಾದುನೋಡಬೇಕಿದೆ ಎಂದರು.