ʻಕನ್ನಡ ಕೋಟ್ಯಧಿಪತಿ ʼರಿಯಾಲಿಟಿ ಶೋ ಅಂದ್ರೆ ಥಟ್ ಅಂತ ನೆನಪಾಗೋದೇ ನಮ್ಮೆಲ್ಲರ ಅಚ್ಚುಮೆಚ್ಚಿನ ಕರ್ನಾಟಕದ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್.ಕನ್ನಡ ಕೋಟ್ಯಧಿಪತಿ ಶೋ ಸೂಪರ್ ಡೂಪರ್ ಹಿಟ್ ಆಗಲು ಮೂಲ ಕಾರಣವೇ ಅಪ್ಪು ಅನ್ನೋದ್ರಲ್ಲಿ ನೋಡೌಟ್.


COMMERCIAL BREAK
SCROLL TO CONTINUE READING

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಟ್ ಆದ ಸೋನಿ ಪಿಕ್ಚರ್ಸ್‌ನ ಗೇಮ್ ಶೋ ʻಹು ವಾಂಟ್ಸ್ ಟು ಬಿ ಅ ಮಿಲೇನಿಯರ್'ನ ಕನ್ನಡ ರೂಪಾಂತರ ಕಾರ್ಯಕ್ರಮವೇ ಈ ಕನ್ನಡದ ಕೋಟ್ಯಧಿಪತಿ.


ಹು ವಾಂಟ್ಸ್ ಟುಬಿ ಅ ಮಿಲೇನಿಯರ್‌ನಿಂದ ಪ್ರೇರಣೆಗೊಂಡು ಹಿಂದಿಯಲ್ಲಿ ಮೂಡಿಬಂದ ಕೌನ್ ಬನೇಗಾ ಕರೋಡ್ ಪತಿ ಕನ್ನಡದಲ್ಲಿ ಕನ್ನಡ ಕೋಟ್ಯಧಿಪತಿಯಾಗಿ ಜನಪ್ರಿಯತೆಯನ್ನು ಪಡೆದಿತ್ತು. 2012ರಲ್ಲಿ ಸ್ಟಾರ್ ಸುವರ್ಣ ವಾಹಿನಿ ಈ ಕಾರ್ಯಕ್ರಮವನ್ನು ಆರಂಭಿಸುವ ಮೂಲಕ ಮೂರು ಆವೃತ್ತಿಗಳನ್ನು ನಡೆಸಿತ್ತು. ಇದಾದ ನಂತರ 2019ರಲ್ಲಿ 4ನೇ ಸೀಸನ್ ಕಲರ್ಸ್ ಕನ್ನಡದಲ್ಲಿ ನಡೆಸಿತು.


ಇದನ್ನೂ ಓದಿ: ತೂಫಾನ್‌ ಬಳಿಕ ಈಗ ಸುಲ್ತಾನ್‌ ಹವಾ.. ಬಿಡುಗಡೆಯಾದ ಒಂದೇ ಗಂಟೆಯಲ್ಲಿ ದಾಖಲೆ!!


1 ಮತ್ತು 2ನೇ ಸೀಸನ್ ಅನ್ನು ಪುನೀತ್‌ ರಾಜ್‌ಕುಮಾರ್ ನಡೆಸಿಕೊಟ್ಟಿದ್ದರು. ಆದರೆ 3ನೇ ಸೀಸನ್ ನ್ನು ಕಾರಣಾಂತರಗಳಿಂದಾಗಿ ಪುನೀತ್ ಅವರು ನಡೆಸಿಕೊಡಲು ಆಗಿರಲಿಲ್ಲ, ಇವರ ಬದಲಾಗಿ ಎವರ್ ಗ್ರೀನ್ ಹೀರೋ ರಮೇಶ್ ಅರವಿಂದ್ 3ನೇ ಸೀಸನ್ ಅನ್ನು ನಡೆಸಿಕೊಟ್ಟಿದ್ದರು.‌ ರಮೇಶ್ ಅಚ್ಚುಕಟ್ಟಾಗಿ ಶೋ ನಡೆಸಿಕೊಟ್ಟಿದ್ದರೂ ಕೋಟ್ಯಧಿಪತಿ ಕಾರ್ಯಕ್ರಮ ಪುನೀತ್ ನಡೆಸಿಕೊಟ್ಟಷ್ಟು ಜನಪ್ರಿಯತೆಯನ್ನು ತಂದುಕೊಡಲಿಲ್ಲ, ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ರೀತಿಯಲ್ಲಿಯೂ ಇದು ರಮೇಶ್ ಅವರ ನೇತೃತ್ವದಲ್ಲಿ ಹಿಟ್ ಆಗುತ್ತೆ ಎಂದು ಭಾವಿಸಲಾಗಿತ್ತು, ಆದರೆ ಅದಾಗಲಿಲ್ಲ.


ಹೀಗಾಗಿ 4ನೇ ಸೀಸನ್‌ಗೆ ಪುನಃ ಪುನೀತ್ ರಾಜ್‌ಕುಮಾರ್ ಬರಲೇಬೇಕಾಯಿತು. ಹೀಗೆ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಯಶಸ್ಸಿನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪಾತ್ರ ಹಿರಿಯದಿದೆ. ಪುನೀತ್ ಇಲ್ಲದ ಕೋಟ್ಯಧಿಪತಿಯನ್ನು ನಿಜಕ್ಕೂ ಯಾರೂ ಊಹಿಸಿಕೊಳ್ಳಲು ಆಗಲ್ಲ. ಆದರೆ ಪುನೀತ್ ಇವತ್ತು ಇಲ್ಲದಿರುವುದರಿಂದ ಕಷ್ಟವಾದರೂ 5ನೇ ಸೀಸನ್ ಕೋಟ್ಯಧಿಪತಿಗೆ ಹೊಸಬರನ್ನು ಹುಡುಕಿಕೊಳ್ಳಲೇ ಬೇಕಿದೆ.


ರಮೇಶ್ ಅರವಿಂದ್ ಮತ್ತೆ ಕೋಟ್ಯಧಿಪತಿ ಜವಾಬ್ದಾರಿ ಹೊರುವುದು ಅನುಮಾನ. ಹೀಗಾಗಿ ಕನ್ನಡದಲ್ಲಿ ಯಾವುದೇ ರಿಯಾಲಿಟಿ ಶೋ ನಡೆಸಿಕೊಡಬಲ್ಲ ಸ್ಟಾರ್ ನಟರಲ್ಲಿ ಮುಂಚೂಣಿಯಲ್ಲಿರುವುದು ಕಿಚ್ಚ ಸುದೀಪ್, ಈಗಾಗಲೇ ಬಿಗ್ ಬಾಸ್‌ನ ಸಾರಥಿಯಾಗಿ ಜನಮನ ಗೆದ್ದಿರುವ ಕಿಚ್ಚ ಈಗ ಕೋಟ್ಯಧಿಪತಿಯ ಜವಾಬ್ದಾರಿಯನ್ನು ಹೊರುವ ಸಾಧ್ಯತೆ ಇದೆ.‌


ಇದನ್ನೂ ಓದಿ: ಸೌತ್‌ ಇಂಡಿಯಾದಲ್ಲಿ ಹಿಂದಿ ಚಿತ್ರಗಳ ಹವಾ ಕಡಿಮೆಯಾಗಲು ಇದೇ ಮುಖ್ಯ ಕಾರಣ ಎಂದ ನಟ ಯಶ್‌!


ಪುನೀತ್ ರಾಜ್‌ಕುಮಾರ್ ಮತ್ತು ಸುದೀಪ್ ಬಾಲ್ಯದಿಂದಲೂ ಸ್ನೇಹಿತರು. ಪುನೀತ್ ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಸದಾ ಮುಂದುವರೆಯಬೇಕೆಂಬುದು ಎಲ್ಲರ ಆಸೆ. ಈ ಕಾರ್ಯಕ್ರಮ ಅದ್ಭುತವಾದ ರಿಯಾಲಿಟಿ ಶೋ ಕೂಡ‌ ಅನ್ನೋದ್ರಲ್ಲಿ‌ ನೋ ಡೌಟ್. ಹೀಗಾಗಿ ಸುದೀಪ್ ಅವರು ಕೋಟ್ಯಾಧಿಪತಿ ಕಾರ್ಯಕ್ರಮದ ಸಾರಥ್ಯವನ್ನು ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಈ ಸುದ್ದಿ ಖಚಿತವಾದಲ್ಲಿ ಬಿಗ್ ಬಾಸ್ ನಂತರ ಮತ್ತೊಂದು ರಿಯಾಲಿಟಿ ಶೋ ನಡೆಸಿಕೊಡುವ ಜವಾಬ್ದಾರಿ ಸುದೀಪ್ ಅವರಿಗೆ ಬೀಳಲಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.