Yalakunni first look Released For Komal Kumar Birthday: ಸೌಭಾಗ್ಯ ಸಿನಿಮಾಸ್ ಲಾಂಛನದಲ್ಲಿ ಮಹೇಶ್ ಗೌಡ್ರು ನಿರ್ಮಿಸುತ್ತಿರುವ ಹಾಗೂ ಎನ್ ಆರ್ ಪ್ರದೀಪ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ  "ಯಲಾ ಕುನ್ನಿ" ಚಿತ್ರದ  ಫಸ್ಟ್ ಲುಕ್  ನಾಯಕ ಕೋಮಲ್ ಕುಮಾರ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ.


COMMERCIAL BREAK
SCROLL TO CONTINUE READING

"ಯಲಾ ಕುನ್ನಿ" ಚಿತ್ರದ  ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಕೋಮಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಕೋಮಲ್ ಅವರ ವಜ್ರಮುನಿ ಗೆಟಪ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 


ಇದನ್ನೂ ಓದಿ- Bollywood Actress: ಈ ಫೋಟೋದಲ್ಲಿ ಕಾಣುವ ನಟಿಯರು ಯಾರೆಂದು ಗುರುತಿಸಬಲ್ಲಿರಾ..!


"ಯಲಾ ಕುನ್ನಿ" ಚಿತ್ರದ ಫಸ್ಟ್ ಲುಕ್ ನಲ್ಲಿ ಕೋಮಲ್ ಅವರು ಹಿರಿಯ ನಟ ವಜ್ರಮುನಿ ಅವರ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಲುಕ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಫಸ್ಟ್ ಲುಕ್ ಗೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರರಂಗದ ಗಣ್ಯರು ಈ ಫಸ್ಟ್ ಲುಕನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.


ಇದನ್ನೂ ಓದಿ- ಜುಲೈ 28ಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಣದ 'Achar And Co' ರಿಲೀಸ್


"ಯಲಾಕುನ್ನಿ" ಚಿತ್ರದಲ್ಲಿ ಕೋಮಲ್ ಅವರು ಬಹುಭಾಗ ವಜ್ರಮುನಿ ಅವರ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ಮೇರಾ ನಾಮ್ ವಜ್ರಮುನಿ " ಎಂಬ ಅಡಿಬರಹ ಹಾಗೂ "ನರಕ ತುಂಬಿ ಮರಳಿ ಬಂದ ರಾಮನ ಗುಣದ ರಾವಣ" ಎಂಬ ಬರಹದೊಂದಿಗೆ "ಯಲಾಕುನ್ನಿ" ಚಿತ್ರ ಬರಲಿದೆ. ನವರಸ ನಾಯಕ ಜಗ್ಗೇಶ್ ರವರ ಮಗ "ಯತಿರಾಜ್" ಮತ್ತು ವಜ್ರಮುನಿ ಅವರ ಮೊಮ್ಮಗ ಆಕರ್ಶ್ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ವಿಶೇಷ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.