ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ CBI ಫೇಸ್‌ಬುಕ್-ಗೂಗಲ್‌ ಸಹಾಯ ಕೇಳಿದ್ದು ಏಕೆ?

Sushant Singh Rajput: ಮೂರು ವರ್ಷಗಳಿಂದ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ತನಿಖೆ ನಡೆಯುತ್ತಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಹೆಚ್ಚಿನ ತನಿಖೆ ನಡೆಸುತ್ತಿದೆ. ನಟನ ಸಾವಿಗೆ ನಿಖರವಾಗಿ ಕಾರಣವೇನು ಎಂದು ತಿಳಿಯಲು ಸುಳಿವುಗಳಿಗಾಗಿ ವಿದೇಶಕ್ಕೆ ಹೋಗುತ್ತಿದೆ.  

Written by - Chetana Devarmani | Last Updated : Jul 3, 2023, 08:32 PM IST
  • ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ತನಿಖೆ
  • CBI ಫೇಸ್‌ಬುಕ್-ಗೂಗಲ್‌ ಸಹಾಯ ಕೇಳಿದ್ದು ಏಕೆ?
  • ಮೂರು ವರ್ಷಗಳಿಂದ ತನಿಖೆ ನಡೆಸುತ್ತಿರುವ CBI
ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ CBI ಫೇಸ್‌ಬುಕ್-ಗೂಗಲ್‌ ಸಹಾಯ ಕೇಳಿದ್ದು ಏಕೆ? title=
Sushant Singh

Sushant Singh Rajput death Case: ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವು ಮೂರು ವರ್ಷಗಳಿಂದ ತನಿಖೆಯಲ್ಲಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಹೆಚ್ಚಿನ ತನಿಖೆ ನಡೆಸುತ್ತಿದೆ. ನಟನ ಸಾವಿಗೆ ನಿಖರವಾಗಿ ಕಾರಣವೇನು ಎಂದು ತಿಳಿಯಲು ಸುಳಿವುಗಳಿಗಾಗಿ ವಿದೇಶಕ್ಕೆ ಹೋಗುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿರುವುದು ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿತ್ತು. ಸಾಯುವ ಕೆಲವೇ ತಿಂಗಳುಗಳ ಮೊದಲು ಹಿಟ್ ಚಿತ್ರ ನೀಡಿದ್ದರು. ಅವರ ಸಾವಿನ ಪ್ರಕರಣದ ತನಿಖೆಯಲ್ಲಿ, ಅವರ ಗೆಳತಿ ರಿಯಾ ಚಕ್ರವರ್ತಿ ಕಡೆಗೆ ಆರೋಪ ಮಾಡಲಾಯಿತು.

ಇದಲ್ಲದೆ, ಸುಶಾಂತ್ ಸಿಂಗ್ ಅವರ ತಂದೆ ಕೂಡ ತಮ್ಮ ಮಗನ ಸಾವಿನಲ್ಲಿ ರಿಯಾ ಚಕ್ರವರ್ತಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿದ್ದರು. ಇದರೊಂದಿಗೆ ಸುಶಾಂತ್ ಸಿಂಗ್ ತಂದೆ ರಿಯಾ ವಿರುದ್ಧ ಹಣಕಾಸು ವಂಚನೆ ಆರೋಪ ಸಹ ಮಾಡಿದ್ದಾರೆ. ಆದಾಗ್ಯೂ, ಈ ಯಾವುದೇ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಲಿಲ್ಲ ಮತ್ತು ಸುಶಾಂತ್ ಅವರ ಗೆಳತಿ ಎಲ್ಲಾ ಆರೋಪಗಳಿಂದ ಖುಲಾಸೆಗೊಂಡರು.

ಇದನ್ನೂ ಓದಿ: ಜಿಮ್‌ನಲ್ಲಿ ಮಹೇಶ್ ಬಾಬು ವರ್ಕೌಟ್ ನೋಡಿ ಬೆರಗಾದ ಫ್ಯಾನ್ಸ್‌

ಸುಶಾಂತ್ ಸಿಂಗ್ ರಜಪೂತ್ ಸಾವಿನ ಮೂರು ವರ್ಷಗಳ ನಂತರ, ಸಿಬಿಐ ಈ ವಿಷಯಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ತಲುಪಿದೆ. ಸಿಬಿಐ ತನಿಖೆಗೆ ಸಹಕರಿಸಲು ಗೂಗಲ್ ಮತ್ತು ಫೇಸ್‌ಬುಕ್‌ನಿಂದ ಸಹಾಯ ಕೇಳಿದೆ. ಈ ಎರಡೂ ಕಂಪನಿಗಳ ಕಚೇರಿಗಳು ಅಮೆರಿಕದಲ್ಲಿವೆ. ಅಮೆರಿಕದಲ್ಲಿ ಪ್ರಧಾನ ಕಚೇರಿ ಹೊಂದಿರುವ ಫೇಸ್‌ಬುಕ್‌ ಮತ್ತು ಗೂಗಲ್ ಎರಡಕ್ಕೂ ಸಿಬಿಐ ಪತ್ರಗಳನ್ನು ಕಳುಹಿಸಿದೆ.

ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಕಾರಣವಾದ ಘಟನೆಗಳ ಬಗ್ಗೆ ಸ್ಪಷ್ಟತೆ ಪಡೆಯಲು ಅವರ ಡಿಲೀಟ್‌ ಮಾಡಲಾದ ಇಮೇಲ್‌ಗಳು ಮತ್ತು ಚಾಟ್‌ಗಳಿಗೆ ಪ್ರವೇಶ ಕೋರಿ ಕೇಂದ್ರೀಯ ತನಿಖಾ ದಳವು ಗೂಗಲ್ ಮತ್ತು ಫೇಸ್‌ಬುಕ್ ಎರಡಕ್ಕೂ ನೋಟಿಸ್ ಕಳುಹಿಸಿದೆ.

ಪ್ರಕರಣವನ್ನು ಅಂತಿಮ ತೀರ್ಮಾನಕ್ಕೆ ಕೊಂಡೊಯ್ಯಲು ಸಿಬಿಐ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಲು ಯೋಜಿಸುತ್ತಿದೆ. ಇಲ್ಲಿಯವರೆಗೆ, ಪ್ರಕರಣದಲ್ಲಿ ಸಂಗ್ರಹಿಸಲಾದ ಎಲ್ಲಾ ಪುರಾವೆಗಳು ಅವರ ಸಾವು ಆತ್ಮಹತ್ಯೆ ಎಂದು ಸೂಚಿಸುತ್ತವೆ. ಜೂನ್ 14, 2020 ರಂದು ತಮ್ಮ ಮುಂಬೈ ಅಪಾರ್ಟ್ಮೆಂಟ್‌ನ ಬೆಡ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರು ಮೃತದೇಹ ಪತ್ತೆಯಾಯಿತು.

ಇದನ್ನೂ ಓದಿ: TRP ರೇಸ್‌ನಲ್ಲಿ ʻಅಮೃತಧಾರೆʼಗೆ 3ನೇ ಸ್ಥಾನ.. ʻಭಾಗ್ಯಲಕ್ಷ್ಮೀʼ ವೀವರ್ಸ್‌ ಕುಸಿತ, No.1 ಯಾರು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News