Garadi Movie : ಗರಡಿ ಯೋಗರಾಜ್ ಭಟ್‌ ನಿರ್ದೇಶನದ ಈ ಮಣ್ಣಿನ ಸೊಗಡಿನ ಸಿನಿಮಾ. ಇಂದು ತೆರೆಕಂಡ ಚಿತ್ರಕ್ಕೆ ಪ್ರೇಕ್ಷಕ ಮಹಾಶಯ ಫಿದಾ ಆಗುವುದಂತೂ ನೂರಕ್ಕು ನೂರು ಸತ್ಯ. ಅಲ್ಲದೆ ಹಲವು ವರ್ಷಗಳ ನಂತರ ತೆರೆ ಮೇಲೆ ಕೌರವ ಬಿ.ಸಿ. ಪಾಟೀಲ್ ಕುಸ್ತಿ ಉಸ್ತಾದ್ ಆಗಿ ಅಬ್ಬರಿಸಿದ್ದು, ನಾಯಕ ನಟನಾಗಿ ಯಶಸ್ ಸೂರ್ಯ ಬಿಗ್ ಸ್ಕ್ರೀನ್ ಮೇಲೆ ರಗಡ್‌ ಲುಕ್‌ನಲ್ಲಿ ಮಿಂಚಿದಾರೆ..


COMMERCIAL BREAK
SCROLL TO CONTINUE READING

ಹೌದು, ದೇಸಿ ಕಲೆ ಕುಸ್ತಿ ಹಿನ್ನೆಲೆ ಹೊತ್ತ ಗರಡಿ ಸಿನಿಮಾ ನೋಡಿದ್ರೆ ನಮ್ಮೂರಲ್ಲೆ ನಡೆದ ಘಟನೆ ಬಿಡ್ರಪ್ಪಾ ಇದು ಅನಿಸುವಂತಿದೆ. ಅಷ್ಟು ಅಚ್ಚುಕಟ್ಟಾಗಿ ಭಟ್ರು ತೆರೆ ಮೇಲೆ ಚಿತ್ರವನ್ನು ತಂದಿದ್ದಾರೆ. ಇನ್ನು ಬಿ.ಸಿ. ಪಾಟೀಲ್‌ ಅವರ ಅಭಿನಯದ ಬಗ್ಗೆ ಒಂದು ಮಾತು ಕೂಡ ಮಾತನಾಡುವ ಹಾಗಿಲ್ಲ, ಕೌರವ ತಮ್ಮ ನಟನೆಯ ಮೂಲಕ ಸಿನಿಮಾದ ಸೆಂಟರ್‌ ಅಟ್ರ್ಯಾಕ್ಷನ್‌ ಆಗಿದ್ದಾರೆ.


ಇದನ್ನೂ ಓದಿ:"ಮೋಸ ಆಗ್ತಿದೆ".. ಡ್ರೋನ್‌ ಪ್ರತಾಪ್‌ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ವೈರಲ್‌..!


ತಂದೆ ಮೇಲೆ ಬರುವ ಕ್ರಿಮಿನಲ್‌ ಕಳಂಕದಿಂದ ಗರಡಿ ಮನೆಯಿಂದ ದೂರ ಉಳಿಯುವ ಸಹೋದರರಾದ ಶಂಕರ್‌ ಮತ್ತು ಸೂರ್ಯನನ್ನು ಸಾಕುವ ಹೊಣೆ ಹೊರುವ ಕುಸ್ತಿ ಉಸ್ತಾದ್‌ ಬಿಸಿ ಪಾಟೀಲ್‌ ಅವರ ಪಾತ್ರ ಬಹಳ ಅರ್ಥ ಗರ್ಭಿತವಾಗಿದೆ. ರಟ್ಟೆಹಳ್ಳಿಯ ಕುಸ್ತಿ ಕಪ್‌ ಎತ್ತುವ ಕನಸು ಕಾಣುತ್ತಿದ್ದ ಗರಡಿ ಮಾಸ್ತರ ಬಿಸಿ ಪಾಟೀಲ್‌ಗೆ ತನ್ನ ಸ್ನೇಹಿತನ ಸಾವು ಆತನ ಮಕ್ಕಳನ್ನು ಗರಡಿಯಿಂದ ದೂರ ವಿಡುವಂತೆ ಮಾಡುತ್ತದೆ.


ಆದ್ರೆ ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ವಿಚಾರ ಅಂದ್ರೆ ಗರಡಿ ಮಣ್ಣನ್ನೂ ತುಳಿಯದ ಸೂರ್ಯ ಕೊನೆಗೆ ರಟ್ಟೆಹಳ್ಳಿಗೆ ಕಸ್ತಿ ಕಪ್ಪು ತಂದು ಕೊಡುತ್ತಾನೆ. ಆದ್ರೆ ಅದು ಹೇಗೆ ಅಂತ ನೀವು ಸಿನಿಮಾ ನೋಡಿ ತಿಳ್ಕೊಂಡ್ರೆ ಸಖತ್‌ ಮಜಾ ಇರುತ್ತದೆ. ಅಲ್ಲದೆ, ಇಲ್ಲಿ ಶಂಕರ್‌ ಏನಾದ ಎನ್ನುವುದೇ ಸಿನಿಮಾದ ರಹಸ್ಯ. ಇನ್ನೂ ರಾಣೆ ವಂಶಸ್ಥರಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ರವಿಶಂಕರ್‌ ತಮ್ಮ ಖಡಕ್‌ ಡೈಲಾಗ್‌ಗಳ ಮೂಲಕ ತೆರೆ ಮೇಲೆ ಮೋಡಿ ಮಾಡಿದ್ದಾರೆ.


ಇದನ್ನೂ ಓದಿ: 'ಥಗ್ ಲೈಫ್' ನಾಯಕಿ ತ್ರಿಶಾ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?


ಸಿನಿಮಾದ ಮೊದಲ ಭಾಗ ಪ್ರೀತಿ, ಗರಡಿ ಮಾಸ್ತರನ ಗುರಿ, ಹಳ್ಳಿಯ ಸೊಗಡು ಎಲ್ಲಿಯೂ ಬೋರ್‌ ತರಿಸಲ್ಲ. ನಟಿ ಸೋನಾಲ್ ಮಾಂಟೆರೊ ಯಶಸ್‌ ಸೂರ್ಯನ ಲವರ್‌ ಆಗಿ ಕಾಣಿಸಿಕೊಂಡಿದ್ದು, ಕಥೆಗೆ ಟ್ವಿಸ್ಟ್‌ ನೀಡುತ್ತಾರೆ. ಧರ್ಮಣ್ಣನ ಹಾಸ್ಯವಂತೂ ಪ್ರೇಕ್ಷರನ್ನು ಹೊಟ್ಟೆ ಹುಣ್ಣಾಗಿಸುವಂತೆ ಮಾಡುತ್ತದೆ. ಧರ್ಮಣ್ಣ ಈ ಸಿನಿಮಾದಲ್ಲಿ ಸೂರ್ಯನ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡು ಪಾತ್ರಕ್ಕೆ ಜೀವ ತುಂಬಿದ್ದಾರೆ. ಕಾಮಿಡಿ ಕಿಲಾಡಿ ನಯನಾ ಸಹ ತುಂಬಾ ಉತ್ತಮವಾಗಿ ನಟಿಸಿದ್ದಾರೆ.


ಕುಸ್ತಿ ಅಖಾಡ, ಜಗಜಟ್ಟಿಗಳ ಕಾಳಗ ಅದ್ಭುತವಾಗಿ ಮೂಡಿ ಬಂದಿದೆ. ಕುಸ್ತಿ ನೋಡುತ್ತಿದ್ದರೆ ಅಖಾಡದಲ್ಲೇ ಕುಳಿತು ನೋಡುವ ಭಾವನೆ ಪ್ರತಿಯೊಬ್ಬ ಪ್ರೇಕ್ಷರಲ್ಲಿ ಮೂಡುತ್ತದೆ. ಅಲ್ಲದೆ, ಯಾರ್‌ ಗೆಲ್ತಾರೆ ಎನ್ನುವ ಕ್ಯೂರಿಯಾಸಿಟಿ ಹುಟ್ಟಿಸಿ ಪ್ರೇಕ್ಷಕರನ್ನು ಸೀಟಿನ ತುಂದಿಗೆ ತಂದು ಬಿಡುತ್ತದೆ.


ಇದನ್ನೂ ಓದಿ:‘ಅನಾವರಣ’ ಸಿನಿಮಾದ ಮತ್ತೊಂದು ಸಾಂಗ್‌ ರಿಲೀಸ್! ಅರ್ಜುನ್ & ಸಾರಿಕಾ ಜೋಡಿಯ ಗಾನಬಜಾನ


ಈ ಸಿನಿಮಾಗೆ ಮುಖ್ಯ ಆಧಾರ ಸ್ತಂಭವಾಗಿ ದರ್ಶನ್‌ ಕಾಣಿಸಿಕೊಂಡಿದ್ದು, ದಚ್ಚು ಎಂಟ್ರಿಗೆ ಪ್ರೇಕ್ಷಕರಂತೂ ಥಿಯೇಟರ್‌ ಮೇಲ್ಛಾವಣಿ ಹಾರುವಂತೆ ಶಿಳ್ಳೆ ಹೊಡೆಯುವುದಂತೂ ಖಂಡಿತ. ಡಿಬಾಸ್‌ ಪಾತ್ರ ಗರಡಿಯ ಜೀವ ಅಂತ ಅಂದ್ರೆ ತಪ್ಪಾಗಲ್ಲ. ದಾಸನ ಪಾತ್ರದ ಕುರಿತು ಹೆಚ್ಚಾಗಿ ಹೇಳುವುದಕ್ಕಿಂತ ಬಿಗ್‌ ಸ್ಕ್ರೀನ್‌ ಮೇಲೆ ನೋಡಿದ್ರೆ ಅದರ ಮಜಾನೆ ಬೇರೆ..


ಇಷ್ಟೇಲ್ಲಾ ಮಾತನಾಡಿದ ಮೇಲೆ ವಿ. ಹರಿಕೃಷ್ಣ ಅವರ ಸಂಗೀತದ ಕುರಿತು ಹೇಳಲಿಲ್ಲ ಅಂದ್ರೆ ತಪ್ಪಾಗುತ್ತದೆ. ಹರಿಕೃಷ್ಣ ಸಂಗೀತ ಅದ್ಭುತವಾಗಿದ್ದು, ಪ್ರತಿಯೊಂದು ಸೀನ್‌ ಅನ್ನು ಮನಸಾರೆ ಅನುಭವಿಸುವಂತೆ ಮಾಡುತ್ತದೆ. ಅಲ್ಲದೆ, ನಿರಂಜನ್ ಬಾಬು ಛಾಯಾಗ್ರಹಣ ಪ್ರೇಕ್ಷಕನನ್ನು ಸಿನಿಮಾದ ಭಾಗವಾಗಿಸುತ್ತದೆ. ಕೌರವ ವೆಂಕಟೇಶ್ ಸಾಹಸ ನಿರ್ದೇಶನವನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದು, ಮೈಜುಮ್ಮೆನ್ನಿಸುವಂತಿವೆ ಆಕ್ಷನ್‌ ಸೀನ್‌ಗಳು.


ಇದನ್ನೂ ಓದಿ:ಫೋಟೋದಲ್ಲಿರುವ ಈ ಮಗು ಯಾರು ಗೊತ್ತಾ? ಈಕೆ ಈಗ ಸೌತ್‌ನ ಟಾಪ್ ಹೀರೋಯಿನ್!


ಎರಡನೇ ಭಾಗ ಪ್ರಾರಂಭಕ್ಕೆ ಬರುವ ನಿಶ್ವಿಕಾ ನಾಯ್ಡು ಸ್ಪೆಷಲ್ ಹಾಡು ಊಟಕ್ಕೆ ಉಪ್ಪಿನ ಕಾಯಿಯ ಹಾಗೆ ಕುಸ್ತಿ, ಗರಡಿ ನೋಡಿದ್ದ ಜನರನ್ನು ಹಾಗೇ ಬೇರೊಂದು ಲೋಕಕ್ಕೆ ಕರೆದೊಯ್ಯದು ಮತ್ತೆ ರಟ್ಟೆಹಳ್ಳಿಗೆ ತಂದು ಬಿಡುತ್ತದೆ. ಒಟ್ಟಾರೆಯಾಗಿ ಹೇಳ್ಬೇಕು ಅಂದ್ರೆ ಯೋಗರಾಜ್‌ ಭಟ್‌ ಅವರ ಗರಡಿ ನೋಡಿದ್ರೆ ಹೊಡಿರಲೇ ಹಲಗಿ.. ಹೊಡಿರಲೇ ಹಲಗಿ.. ಅಂತ ಕುಣಿದಾಡುತ್ತ ಮನೆಗೆ ಬರಬಹುದು.


ಗರಡಿ ಸಿನಿಮಾವನ್ನು ಸೌಮ್ಯ ಫಿಲಂಸ್ ಹಾಗೂ ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ನಿರ್ಮಿಸಿದ್ದು, ಸೃಷ್ಟಿ ಪಾಟೀಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕಿಯಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.