ಕ್ಷಣಕ್ಷಣಕ್ಕೂ ಕುತೂಹಲ.. ಕೌತುಕ.. ಹೀಗೆ ಕೆಜಿಎಫ್‌ ಸಿನಿಮಾ ಎಬ್ಬಿಸಿರುವ ಇಡೀ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ. ನೂರಾರು ಕೋಟಿ ಅಭಿಮಾನಿಗಳು 'ಕೆಜಿಎಫ್‌-2'ಗಾಗಿ (KGF2) ಕಾಯುತ್ತಿದ್ದಾರೆ. ಈ ಹೊತ್ತಲ್ಲೇ ಸಿನಿಮಾ ನಿರ್ಮಿಸಿರುವ ಹೊಂಬಾಳೆ ಬ್ಯಾನರ್ಸ್‌ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಅಭಿಮಾನಿಗಳಿಗೆ ಹೊಂಬಾಳೆ (Hombale Films) ಬ್ಯಾನರ್ಸ್‌ ಕೇಳಿದ ಪ್ರಶ್ನೆ ಎಲ್ಲೆಲ್ಲೂ ಹವಾ ಎಬ್ಬಿಸಿದೆ. 'ಕೆಜಿಎಫ್‌-2' ಟ್ರೈಲರ್‌ ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮಾರ್ಚ್‌ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೊಂದು ಸಂಕಷ್ಟ!


ಏನೇ ಹೇಳಿ ಕನ್ನಡ ಸಿನಿಮಾ 'ಕೆಜಿಎಫ್‌' (KGF) ಎದುರು ಯಾವ ಸಿನಿಮಾ ಕೂಡ ನಿಲ್ಲಲು ಸಾಧ್ಯವಿಲ್ಲ ಅಂತಾ ಕಾಣುತ್ತೆ. ಇದೇ ಕಾರಣಕ್ಕೆ ಈಗಾಗಲೇ ಪರಭಾಷೆ ಸಿನಿಮಾಗಳು ತಮ್ಮ ರಿಲೀಸ್‌ ಡೇಟ್‌ನ ಕೂಡ ಮುಂದಕ್ಕೆ ಹಾಕಿಕೊಂಡಿವೆ. ಈ ಹೊತ್ತಲ್ಲೇ ಮಹತ್ವದ ಮಾಹಿತಿಯೊಂದನ್ನ ನೀಡಿದೆ ಹೊಂಬಾಳೆ ಬ್ಯಾನರ್ಸ್‌.


ಕೋಟಿ ಕೋಟಿ ಫ್ಯಾನ್ಸ್: 'ಕೆಜಿಎಫ್‌' ಚಿತ್ರ ಆಧುನಿಕ ಕಾಲದಲ್ಲಿ ಕನ್ನಡ ಚಿತ್ರರಂಗವನ್ನ ಇಡೀ ಜಗತ್ತಿಗೇ ಪರಿಚಯಿಸಿದ ಸಿನಿಮಾ. ಊಹೆಗೂ ನಿಲುಕದಷ್ಟು ಎತ್ತರಕ್ಕೆ 'ಕೆಜಿಎಫ್‌ 1' ಹಿಟ್‌ ಆಗಿತ್ತು. ಹೀಗಾಗಿ ವರ್ಲ್ಡ್‌ ವೈಡ್ ನೂರಾರು ಕೋಟಿ ಅಭಿಮಾನಿಗಳು ಕೆಜಿಎಫ್‌ ಸೀಕ್ವೆಲ್‌ಗೆ ಕಾಯ್ತಿದ್ದಾರೆ. ಈ ಹೊತ್ತಲ್ಲೇ 'ಕೆಜಿಎಫ್‌-2' ಕುರಿತು ಒಂದು ಬಿಗ್‌ ಅಪ್ಡೇಟ್‌ ಸಿಕ್ಕಿದೆ.


ನಿರೀಕ್ಷೆಗಳ ಭಾರ: 'ಕೆಜಿಎಫ್‌ 1' ಭರ್ಜರಿ ಹಿಟ್‌ ಕಂಡಿದ್ದೇ ತಡ ಈ ಸಿನಿಮಾಗೆ ನೂರಾರು ಕೋಟಿ ಅಭಿಮಾನಿಗಳು ಹುಟ್ಟಿಕೊಂಡರು. ಕಥೆ, ಸ್ಕ್ರೀನ್‌ ಪ್ಲೇ, ಡೈರೆಕ್ಷನ್‌, ಕ್ಯಾಮರಾ ವರ್ಕ್‌ ಎಲ್ಲದಕ್ಕಿಂತ ಹೆಚ್ಚಾಗಿ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಹೀಗಾಗಿ  'ಕೆಜಿಎಫ್‌ 2' ಮೇಲಿನ ನಿರೀಕ್ಷೆಗಳು ಬೆಟ್ಟದಷ್ಟಿವಿ. ಈಗಾಗಲೇ ಟೀಸರ್‌ (KGF 2 Teaser) ನಿರೀಕ್ಷೆಗಳ ಮಟ್ಟ ಎಷ್ಟಿದೆ ಅನ್ನೋದರ ಝಲಕ್‌ ತೋರಿಸಿದೆ. ಈ ಹೊತ್ತಲ್ಲೇ ಟ್ರೈಲರ್‌ ರಿಲೀಸ್‌ಗೂ ಸಿದ್ಧತೆ ನಡೆದಿದೆ. 


ಇದನ್ನೂ ಓದಿ:Madhuri Dixit: ಮಾಧುರಿ ದೀಕ್ಷಿತ್ ಜೀವನಾಧರಿತ American series ರದ್ದು!


ಅಂದಹಾಗೆ ಹೊಂಬಾಳೆ ಬ್ಯಾನರ್ಸ್‌ 'ಕೆಜಿಎಫ್‌' ಫ್ಯಾನ್ಸ್‌ಗೆ  ಟ್ವಿಟ್ಟರ್‌ನಲ್ಲಿ ಪ್ರಶ್ನೆಯೊಂದನ್ನ ಕೇಳಿತ್ತು. ಅದೇನೆಂದರೆ ನಿಮಗೆ ಕೆಜಿಎಫ್‌ ಭಾಗ 2ರಲ್ಲಿ ಮೊದಲು ಏನನ್ನು ನೋಡಬೇಕು ಅಂದುಕೊಂಡಿದ್ದೀರಿ ಎಂದು ಪ್ರಶ್ನೆ ಕೇಳಿತ್ತು. ಈ ಪೈಕಿ ಆಯ್ಕೆಗಳನ್ನು ಕೂಡ ಹೊಂಬಾಳೆ ಬ್ಯಾನರ್ಸ್‌ ನೀಡಿತ್ತು. ಅದರಲ್ಲಿ ಹಾಡು, ಟ್ರೈಲರ್‌ ಮತ್ತು ಸರ್ಪ್ರೈಸ್‌ ಬೇಕಾ ಎಂದು ಕೇಳಲಾಗಿತ್ತು. ಇದರಲ್ಲಿ ಶೇಕಡಾ 85ಕ್ಕಿಂತ ಹೆಚ್ಚು ಅಭಿಮಾನಿಗಳು ಟ್ರೈಲರ್‌ ಬೇಕು ಎಂದು ಉತ್ತರಿಸಿದ್ದಾರೆ. ಹೀಗಾಗಿ ಸದ್ಯದಲ್ಲೇ ಕೆಜಿಎಫ್‌ 2 ಟ್ರೈಲರ್‌ ರಿಲೀಸ್‌ ಆಗುವುದು ಪಕ್ಕಾ ಆಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.