ಮತ್ತೊಂದು ದಾಖಲೆ..! KGF 2 ಹಿಂದಿ ರೈಟ್ಸ್ ಎಷ್ಟಕ್ಕೆ ಮಾರಾಟವಾಗಿದೆ ಗೊತ್ತಾ..?

ರಾಕಿ ಭಾಯ್  ಅಭಿನಯದ ಕೆಜಿಎಫ್ 2 ಶೀಘ್ರದಲ್ಲಿಯೇ ತೆರೆ ಕಾಣಲಿದೆ. ಚಿತ್ರದ ಟೀಸರ್ ಸಾಕಷ್ಟು ಕ್ಲಿಕ್ ಆಗಿದ್ದು, 1.30 ಕೋಟಿ ಲೈಕ್ಸ್ ಪಡೆದುಕೊಂಡಿದೆ. ಇದೊಂದು ವಿಶ್ವದಾಖಲೆಯೂ ಹೌದು.  

Written by - Ranjitha R K | Last Updated : Jan 26, 2021, 11:35 AM IST
  • ಎಕ್ಸೆಲ್ ಎಂಟರ್ ಟೈನ್ಮೆಂಟ್ (Excel Entertainment) ಕೆಜಿಎಫ್ 2 ಹಿಂದಿ ಹಕ್ಕುಗಳನ್ನು ಖರೀದಿಸಿದೆ.
  • ಮೂಲ ಸಿನಿಮಾ ನಿರ್ಮಾಣ ವೆಚ್ಚದ 7 ಪಟ್ಟು ಹೆಚ್ಚು ಮೊತ್ತಕ್ಕೆ ಕೇವಲ ಹಿಂದಿ ರೈಟ್ಸ್ ಮಾರಾಟವಾಗಿದೆ.
  • ಕೆಜಿಎಫ್ 2 ನಿರ್ಮಿಸುವಾಗ ಪ್ರೊಡ್ಯೂಸರ್ ಗೆ ಅದನ್ನು ಹಿಂದಿಯಲ್ಲಿ ಬಿಡುಗಡೆ ಮಾಡುವ ಇರಾದೆ ಇರಲಿಲ್ಲ
ಮತ್ತೊಂದು ದಾಖಲೆ..! KGF 2  ಹಿಂದಿ ರೈಟ್ಸ್ ಎಷ್ಟಕ್ಕೆ ಮಾರಾಟವಾಗಿದೆ ಗೊತ್ತಾ..?

ಬೆಂಗಳೂರು : ರಾಕಿ ಭಾಯ್ (Yash) ಅಭಿನಯದ ಕೆಜಿಎಫ್ 2 (KGF 2) ಶೀಘ್ರದಲ್ಲಿಯೇ ತೆರೆ ಕಾಣಲಿದೆ. ಚಿತ್ರದ ಟೀಸರ್ ಸಾಕಷ್ಟು ಕ್ಲಿಕ್ ಆಗಿದ್ದು, 1.30 ಕೋಟಿ ಲೈಕ್ಸ್ ಪಡೆದುಕೊಂಡಿದೆ. ಇದೊಂದು ವಿಶ್ವದಾಖಲೆಯೂ ಹೌದು.  ಇದುವರೆಗೆ ಯಾವ ಚಿತ್ರದ ಟೀಸರ್ ಕೂಡ ಇಷ್ಟೊಂದು ದೊಡ್ಡ ಮಟ್ಟದ ಲೈಕ್ಸ್ ಪಡೆದಿರಲಿಲ್ಲ. ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ಸಂಜಯ್ ದತ್ (Sanjay Dutt), ರವೀನಾ ಟಂಡನ್ (Raveena Tandon)  ಕೂಡಾ ನಟಿಸುತ್ತಿದ್ದಾರೆ.  ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಅಪಾರ ಕುತೂಹಲ ಸೃಷ್ಟಿಯಾಗಿದೆ.

ಕೆಜಿಎಫ್ 2 ಸಾಕಷ್ಟುಕುತೂಹಲ ಮೂಡಿಸಿರುವಂತೆ ಆದರ ಹಿಂದಿ ರೈಟ್ಸ್ ಯಾರಿಗೆ ಮಾರಾಟವಾಗಿದೆ? ಎಷ್ಟಕ್ಕೆ ಮಾರಾಟವಾಗಿದೆ ಎಂಬುದರ ಬಗ್ಗೆಯೂ ಸಾಕಷ್ಟು ಸುದ್ದಿಗಳು ಬರುತ್ತಿವೆ.  ಎಕ್ಸೆಲ್ ಎಂಟರ್ ಟೈನ್ಮೆಂಟ್  (Excel Entertainment) ಈ ಚಿತ್ರದ ಹಿಂದಿ ಹಕ್ಕುಗಳನ್ನು ಖರೀದಿಸಿದೆ. ರಿತೇಶ್ ಸಿಧ್ವಾನಿ (Ritesh Sidhwani) ಮತ್ತು ಫರ್ಹಾನ್ ಆಖ್ತರ್ (Farhan Akhtar)  ಈ ಎಕ್ಸೆಲ್ ಎಂಟರಟೈನ್ಮೆಂಟ್ ಮಾಲೀಕರಾಗಿದ್ದಾರೆ. 

ಇದನ್ನೂ ಓದಿ : ಆಗಸ್ಟ್ 26 ರಿಂದ ಯಶ್ ಅಭಿನಯದ ಕೆಜಿಎಫ್-2 ಚಿತ್ರಿಕರಣ ಪುನರಾರಂಭ

ರಿತೇಶ್ ಮತ್ತು ಫರ್ಹಾನ್ 2018ರಲ್ಲಿ ತೆರೆಗೆ ಬಂದ ಕೆಜಿಎಫ್ ಮೊದಲ ಭಾಗದ ಹಿಂದಿ ಹಕ್ಕುಗಳನ್ನು ಪಡೆದುಕೊಂಡಿದ್ದರು.  ಸಿನಿಮಾ ಅಷ್ಟೊಂದು ಕ್ಲಿಕ್ ಆಗುತ್ತೆ ಅನ್ನುವ ನಿರೀಕ್ಷೆ ಕೂಡಾ ಆಗ ಅವರಿಗಿರಲಿಲ್ಲ. ಅದರ ಹಕ್ಕು ತುಂಬಾ ಕಡಿಮೆ ಮೊತ್ತಕ್ಕೆ ಸಿಕ್ಕಿತ್ತು ಎನ್ನಲಾಗಿದೆ. ಈಗ ಕೆಜಿಎಫ್ 2 ಟೀಸರ್ ಭಾರತದ ಚಿತ್ರರಂಗದಲ್ಲೇ ಧೂಳೆಬ್ಬಿಸಿ ಬಿಟ್ಟಿದೆ.  ಕೆಜಿಎಫ್ ಎರಡನೇ ಭಾಗದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ.  ಹಾಗಾಗಿ ಕೆಜಿಎಫ್ 2 (KGF2) ಚಿತ್ರದ ಹಿಂದಿ ಹಕ್ಕುಗಳಿಗಾಗಿ ಬಹುದೊಡ್ಡ ಮೊತ್ತ ಡಿಮ್ಯಾಂಡ್ ಮಾಡಲಾಗಿತ್ತು.  ಕನ್ನಡದ ಒರಿಜಿನಲ್ ಚಿತ್ರಕ್ಕೆ ತಗಲಿದ ಮೊತ್ತಕ್ಕಿಂತಲೂ ಹತ್ತಾರುಪಟ್ಟು ಹೆಚ್ಚು ಮೊತ್ತವನ್ನು ಹಿಂದಿ ರೈಟ್ಸ್ ಗಾಗಿ ಕೇಳಲಾಗಿತ್ತು. 

ಮೂಲಗಳ ಪ್ರಕಾರ ಕೆಜಿಎಫ್ 2 (KGF Chapter 2) ನಿರ್ಮಿಸುವಾಗ ಪ್ರೊಡ್ಯೂಸರ್ ಗೆ (Producer) ಅದನ್ನು ಹಿಂದಿಯಲ್ಲಿ ಬಿಡುಗಡೆ ಮಾಡುವ  ಇರಾದೆ ಇರಲಿಲ್ಲ. ಹಿಂದಿ ರೈಟ್ಸ್ ಮಾರಾಟ ಮಾಡುವ ನಿರ್ಧಾರ ಕೊನೆಗೆ ಕೈಗೊಳ್ಳಲಾಯಿತು.  ಮೊದಲ ಚಿತ್ರದ (Cinema) ಹಕ್ಕು ತುಂಬಾ ಕಡಿಮೆ ರೇಟ್ ಗೆ ಮಾರಾಟ ಮಾಡಲಾಗಿತ್ತು.ಆದರೆ, 2 ನೇ ಭಾಗದ ಹೊತ್ತಿಗೆ ಚಿತ್ರಣ ಸಂಪೂರ್ಣ ಬದಲಾಗಿದೆ. ಕೆಜಿಎಫ್ (KGF) ಕ್ರೇಜ್ ಹುಟ್ಟಿಸಿದೆ. ಅದರ ಹಿಂದಿ ರೈಟ್ಸ್ ಒರಿಜಿನಲ್ ಕನ್ನಡ  ಕೆಜಿಎಫ್ 2 ಫಿಲ್ಮ್  ನಿರ್ಮಾಣಕ್ಕೆ ತಗುಲಿದ ವಚ್ಚಕ್ಕಿಂತ 7 ಪಟ್ಟು ಹೆಚ್ಚು ಮೊತ್ತ ನೀಡಿ ಹಿಂದಿ ರೈಟ್ಸ್ ಖರೀದಿಸಲಾಗಿದೆ.  ಎಷ್ಟು ಮೊತ್ತ ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ.  ಆದರೆ, ನಿರ್ಮಾಣ ವೆಚ್ಚದ 7 ಪಟ್ಟು ಹೆಚ್ಚು ಮೊತ್ತಕ್ಕೆ ಕೇವಲ ಹಿಂದಿ ರೈಟ್ಸ್ ಮಾರಾಟವಾಗಿದೆ.

ಇದನ್ನೂ ಓದಿ :'KGF Chapter 2' ಟೀಸರ್ ಬಿಡುಗಡೆಯಾಗಿ 24 ಗಂಟೆಗಳಲ್ಲಿ ಹೊಸ ದಾಖಲೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News