ಮಾರ್ಚ್‌ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೊಂದು ಸಂಕಷ್ಟ!

ಐಪಿಎಲ್‌ ಟೂರ್ನಿ ಆರಂಭ ಆಗುವ ಡೇಟ್ ಅನೌನ್ಸ್ ಆಗುತ್ತಿದ್ದಂತೆ ಬಿಡುಗಡೆಗೆ ಸಜ್ಜಾಗಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಸಂಕಷ್ಟ ಎದುರಾಗಿದೆ. 

Written by - Chetana Devarmani | Last Updated : Feb 27, 2022, 10:37 AM IST
  • ಬಿಡುಗಡೆಗೆ ಕಾದು ಕುಳಿತಿರುವ ಸಿನಿಮಾಗಳಿಗೆ ಇದೀಗ ಮತ್ತೊಂದು ಸಂಕಷ್ಟ
  • ಕೊರೊನಾ ನಿಯಮಗಳ ಹಿನ್ನೆಲೆ ರಿಲೀಸ್ ಆಗದೇ ಉಳಿದಿದ್ದ ಚಿತ್ರಗಳು
  • ಬಿಗ್ ಬಜೆಟ್ ಸಿನಿಮಾಗಳಿಗೆ ಸಂಕಷ್ಟ ಎದುರಾಗಿದೆ
ಮಾರ್ಚ್‌ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೊಂದು ಸಂಕಷ್ಟ!  title=
ಸಿನಿಮಾ

ಬೆಂಗಳೂರು: ಕೊರೊನಾ (Corona)ಹಿನ್ನೆಲೆ ಬಿಡುಗಡೆ ದಿನಾಂಕಗಳನ್ನು ಮುಂದೂಡಿ ಕಾದು ಕುಳಿತಿರುವ ಸಿನಿಮಾಗಳಿಗೆ ಇದೀಗ ಮತ್ತೊಂದು ಸಂಕಷ್ಟ ಶುರುವಾಗಿದೆ.

ಇದನ್ನೂ ಓದಿ:  ಕಮಾಲ್ ಮಾಡಿದ Akshay Kumar ಡೆವಿಲ್ ಲುಕ್, 5 ಕೋಟಿಗೂ ಅಧಿಕ ವೀಕ್ಷಣೆ ಪಡೆದ Maar Khayegaa ಹಾಡಿನ ವಿಡಿಯೋ

ಹೌದು, ಈಗಾಗಲೆ ಬಿಡುಗಡೆಗೆ ಸಿದ್ಧವಾಗಿದ್ದ ಅನೇಕ ಸಿನಿಮಾಗಳು ಕೊರೊನಾ ನಿಯಮಗಳ ಹಿನ್ನೆಲೆ ರಿಲೀಸ್ ಆಗದೇ ಉಳಿದಿವೆ. ಕೊರೊನಾ, ಒಮಿಕ್ರಾನ್ (Omicron) ಕಾಟದ ಬಳಿಕ ಮಾರ್ಚ್ ನಲ್ಲಿ ಚಿತ್ರ ಬಿಡುಗಡೆ ಮಾಡಬೇಕೆಂದಿದ್ದ ನಿರ್ಮಾಪಕರಿಗೆ ಇದೀಗ ಮತ್ತೊಂದು ಟೆನ್ಶನ್ ಶುರುವಾಗಿದೆ.  

ಭಾರತದ ಹೆಸರಾಂತ ಐಪಿಎಲ್ ಪಂದ್ಯಾವಳಿ (IPL) ಮಾರ್ಚ್‌ನಿಂದ ಆರಂಭವಾಗಲಿದೆ. ಮಾರ್ಚ್ 27 ರಿಂದ ಮೇ 28ರ ವರೆಗೆ ನಿರಂತರವಾಗಿ ಐಪಿಎಲ್ ಟೂರ್ನಿ ನಡೆಯಲಿದೆ. 

ಈ ಒಂದು ತಿಂಗಳು ಜನರು ಟಿವಿ ಬಿಟ್ಟು ಮೇಲೆ ಏಳುವುದು ಅನುಮಾನ. ಇದೆ ಕಾರಣಕ್ಕೆ ಈಗಾಗಲೇ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ದೊಡ್ಡ ದೊಡ್ಡ ಸಿನಿಮಾಗಳಿಗೆ ಸಂಕಷ್ಟ ಶುರುವಾಗಿದೆ. ಅಲ್ಲದೆ, ಇತ್ತ ಜನರಿಗೆ ಸಿನಿಮಾ ನೋಡಬೇಕಾ? ಐಪಿಎಲ್ ನೋಡಬೇಕಾ ಎಂಬ ಗೊಂದಲ ಸೃಷ್ಟಿಯಾಗಿದೆ. 

ಇದನ್ನೂ ಓದಿ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ‘ಜೇಮ್ಸ್’ ಸಿನಿಮಾ ಮೇಕಿಂಗ್ ಹೇಗಿತ್ತು ಗೊತ್ತಾ..?

ಐಪಿಎಲ್‌ ಟೂರ್ನಿ ಆರಂಭ ಆಗುವ ಡೇಟ್ ಅನೌನ್ಸ್ ಆಗುತ್ತಿದ್ದಂತೆ ಬಿಡುಗಡೆಗೆ ಸಜ್ಜಾಗಿರುವ ಬಿಗ್ ಬಜೆಟ್ ಸಿನಿಮಾಗಳಿಗೆ (Big Budget Cinema) ಸಂಕಷ್ಟ ಎದುರಾಗಿದೆ. 

ರಾಜಮೌಳಿ ಅವರ RRR, ಯಶ್ ಅಭಿನಯದ 'KGF 2', ದಳಪತಿ ವಿಜಯ್ ಅಭಿನಯದ 'ಬೀಸ್ಟ್', ಮೆಗಾಸ್ಟಾರ್ ಚಿರಂಜೀವಿ ಅವರ 'ಆಚಾರ್ಯ' ಸಿನಿಮಾಗಳು ಮಾರ್ಚ್ ನಲ್ಲಿ ರಿಲೀಸ್ ಆಗಲಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News