Immunity Booster : ಬೆಳಗಿನ ಚಹಾದಲ್ಲಿ ಈ ಎರಡನ್ನು ಬೆರೆಸಿ ಸೇವಿಸಿದರೆ ಹೆಚ್ಚುತ್ತದೆ ರೋಗ ನಿರೋಧಕ ಶಕ್ತಿ..!
ಈ ಸೋಂಕಿನಿಂದ ರಕ್ಷಿಸಿಕೊಳ್ಳಲು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರಬೇಕಾಗುತ್ತದೆ.
ಕರೋನಾ ವೈರಸ್‌ನ ಎರಡನೇ ಅಳೆಯುವು ಭಾರತದಲ್ಲಿ ಸುನಾಮಿಯಂತೆ ವೇಗವಾಗಿ ಹರಡುತ್ತಿದೆ. ಕಳೆದ 24 ಗಂಟೆಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಅಲ್ಲದೆ ಈ ವೈರಸ್‌ನಿಂದ ಪ್ರತಿದಿನ ಸಾವಿರಾರು ಜನರು ಸಾಯುತ್ತಿದ್ದಾರೆ. ಆದ ಕಾರಣದಿಂದ ನಮ್ಮನ್ನು ನಾವು ಈ ಸೋಂಕಿನಿಂದ ರಕ್ಷಿಸಿಕೊಳ್ಳಲು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರಬೇಕಾಗುತ್ತದೆ.
ಆಯುರ್ವೇದ ವಿಧಾನದಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಹೇಗೆ?
ರೋಗನಿರೋಧಕ ಶಕ್ತಿ ಎಂದರೆ ರೋಗಗಳ ವಿರುದ್ಧ ಹೋರಾಡುವ ನಮ್ಮ ದೇಹದ ಸಾಮರ್ಥ್ಯ. ಪ್ರಸ್ತುತ, ನಿಮ್ಮ ರೋಗನಿರೋಧಕ ಶಕ್ತಿ(Immunity Power) ಪ್ರಬಲವಾಗಿದ್ದರೆ, ಕರೋನಾ ವೈರಸ್ ಸೋಂಕು ತಗುಲಿದರು ಸಹ, ಮನೆಯಲ್ಲಿ ಪ್ರತ್ಯೇಕವಾಗಿದ್ದುಕೊಂಡು ನೀವು ಸುಲಭವಾಗಿ ಕರೋನಾ ವಿರುದ್ಧದ ಯುದ್ಧವನ್ನು ಗೆಲ್ಲಬಹುದು. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ತುಳಸಿ ಕಷಾಯ, ಹಾಲಿಗೆ ಅರಿಶಿನ ಹಾಕಿಕೊಂಡು ಸೇವಿಸುವುದು ಮತ್ತು ಗಿಲೋಯ್‌ನಿಂದ ಆಮ್ಲಾ ಸೇವಿಸುವ ಸಲಹೆ ನೀಡಲಾಗುತ್ತದೆ. ಆಯುರ್ವೇದದಲ್ಲಿ ಇಂತಹ ಅನೇಕ ನೈಸರ್ಗಿಕ ಗಿಡಮೂಲಿಕೆಗಳನ್ನು ವಿವರಿಸಲಾಗಿದೆ, ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆದರೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಯಾವುದೇ ಶಾರ್ಟ್‌ಕಟ್ ಇಲ್ಲ ಮತ್ತು ಅದು ಒಂದು ದಿನದಲ್ಲಿ ಉತ್ಪತ್ತಿಯಾಗುವುದಿಲ್ಲ. ಇದಕ್ಕಾಗಿ ನೀವು ನಿಯಮಿತವಾಗಿ ಆರೋಗ್ಯಕರ ವಸ್ತುಗಳನ್ನು ಸೇವಿಸಬೇಕು.
ಇದನ್ನೂ ಓದಿ : Corona Vaccine Side Effect : ಕೊರೋನಾ ಲಸಿಕೆಯ ಅಡ್ಡಪರಿಣಾಮಗಳಿಂದ ರಕ್ಷಿಸಿಕೊಳ್ಳಲು ಇಲ್ಲಿದೆ 5 ಆಹಾರಗಳು..!
ಚಹಾದಲ್ಲಿ ಲವಂಗ ಸೇರಿಸಿ ಸೇವಿಸಿ :
ನೀವು ಪ್ರತಿದಿನವೂ ಚಹಾ(Tea) ಕುಡಿಯುವವರು ಅದರಲ್ಲಿ ಎರಡು ಲವಂಗ ಹಾಕಿಕೊಂಡು ಕುಡಿಯುವುದರಿಂದ ನಿಮಗೆ ಪ್ರತ್ಯೇಕ ರೋಗನಿರೋಧಕ ಹೆಚ್ಚಿಸುತ್ತದೆ.
ಇದನ್ನೂ ಓದಿ : Home Remedies: ಕೊರೊನಾ ಸೋಂಕಿನ ನಂತರ ಕಳೆದುಕೊಂಡ ವಾಸನೆ ಗ್ರಹಿಕೆಯ ಶಕ್ತಿ ಮತ್ತು ರುಚಿ ಮರಳಿ ಪಡೆಯುವುದು ಹೇಗೆ?
ಮುಲೇತಿ ಪ್ರಯೋಜನಗಳು :
ಲೈಕೋರೈಸ್ ರೂಟ್ ಎಂದೂ ಕರೆಯಲ್ಪಡುವ ಮುಲೇತಿ ಆಯುರ್ವೇದ(Ayurveda) ಔಷಧವಾಗಿದ್ದು ಅದು ನಮ್ಮ ದೇಹದಲ್ಲಿ ಪವರ್ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಮುಲೇತಿಯಲ್ಲಿರುವ ಕಿಣ್ವಗಳು ದೇಹದಲ್ಲಿ ಲಿಂಫೋಸೈಟ್ಸ್ ಮತ್ತು ಮ್ಯಾಕ್ರೋಫೇಜ್‌ಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಲಿಂಫೋಸೈಟ್ಸ್ ಮತ್ತು ಮ್ಯಾಕ್ರೋಫೇಜ್‌ಗಳು ದೇಹದಲ್ಲಿ ರೋಗಾಣುಗಳು, ಮಾಲಿನ್ಯಕಾರಕಗಳು, ಅಲರ್ಜಿನ್ ಮತ್ತು ಹಾನಿಕಾರಕ ಕೋಶಗಳು ಬೆಳೆಯದಂತೆ ತಡೆಯುತ್ತವೆ.ಇದಲ್ಲದೆ, ಮುಲೇತಿ ಆಂಟಿವೈರಲ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಕಡಿಮೆ ಮಾಡುವ ಗುಣ ಸಹ ಹೊಂದಿದೆ, ಇದರಿಂದಾಗಿ ಇದು ಕೆಮ್ಮು, ಉಸಿರಾಟದ ತೊಂದರೆ ಮತ್ತು ಎದೆಯ ಬಿಗಿತದ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : Cloves Benefits : ಪುರುಷರು ಪ್ರತಿದಿನ 2 ಲವಂಗ ಸೇವಿಸಿ : ಮುಂದೆ ನೋಡಿ ಅದರ ಪ್ರಯೋಜನ!
ಲವಂಗದ ಪ್ರಯೋಜನಗಳು :
ನಮ್ಮ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಮಸಾಲೆಗಳಲ್ಲಿ ಒಂದಾದ ಲವಂಗ ಔಷಧ ಗುಣಗಳಿಂದ ಕೂಡಿದೆ. ಅನೇಕ ಔಷಧಗಳನ್ನು ತಯಾರಿಸಲು ಲವಂಗ(Clove)ವನ್ನು ಆಯುರ್ವೇದದಲ್ಲಿ ಬಳಸಲಾಗುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಲವಂಗವನ್ನು ಸೇವಿಸಿದರೆ ನೀವು ಅನೇಕ ರೀತಿಯ ರೋಗಗಳಿಂದ ದೂರವಿರಬಹುದು. ಲವಂಗವು ಶೀತ ಮತ್ತು ಕೆಮ್ಮಿನಂತಹ ಕಾಯಿಲೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಲವಂಗವು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಪ್ರತಿನಿತ್ಯ ಈ ರೀತಿ ಸೇವಿಸಿದರೆ ಅರಿಶಿನ ನಿಯಂತ್ರಣದಲ್ಲಿರುತ್ತದೆ ಶುಗರ್ ಲೆವೆಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.