How To Prevent Heart Failure:ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹೃದಯದಲ್ಲಿ ಕೊಂಚ ಸಮಸ್ಯೆ ಎದುರಾದರೂ ಜೀವಕ್ಕೆ ಅಪಾಯ ಉಂಟಾಗುತ್ತದೆ. ಪರಿಧಮನಿಯ ಕಾಯಿಲೆಯು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಸಂಭವಿಸುತ್ತಿರುವ ಸಾವಿಗೆ ಪ್ರಮುಖ ಕಾರಣವಾಗಿದೆ. ಆದರೆ ನಮ್ಮಲ್ಲಿ ಹೆಚ್ಚಿನವರು ಗೊಂದಲಮಯ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳನ್ನು ತ್ಯಜಿಸಲು ಸಿದ್ಧರಿರುವುದಿಲ್ಲ. ಇದರಿಂದಾಗಿ ಹೃದಯ ವೈಫಲ್ಯ, ಹೃದಯಾಘಾತ, ಪಾರ್ಶ್ವವಾಯು ಮತ್ತು ಟ್ರಿಪಲ್ ವೆಸೆಲ್ ಡಿಸೀಸ್‌ನಂತಹ ಮಾರಣಾಂತಿಕ ಕಾಯಿಲೆಗಳ ಅಪಾಯ ಎದುರಾಗುತ್ತದೆ. ಹಾಗಿದ್ದರೆ,  ಹೃದಯಾಘಾತದಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಹೃದಯ ವೈಫಲ್ಯವನ್ನು ತಪ್ಪಿಸಲು ಏನು ಮಾಡಬೇಕು? 
1.ದೈನಂದಿನ ಆಹಾರ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಬದಲಾವಣೆಗಳನ್ನು ಮಾಡಬೇಕು. ಆಗ ಮಾತ್ರ ನಿಮ್ಮ ಹೃದಯವನ್ನು  ಆರೋಗ್ಯಕರವಾಗಿರಿಸಿಕೊಳ್ಳಬಹುದು.
2.ಹೃದಯಾಘಾತವನ್ನು ತಪ್ಪಿಸಲು, ಪ್ರತಿದಿನ ಸುಮಾರು 8 ಗಂಟೆಗಳ ಕಾಲ ನಿದ್ರೆ ಮಾಡುವುದು ಅವಶ್ಯಕ. ಏಕೆಂದರೆ ಉತ್ತಮ ನಿದ್ರೆಯಿಂದ ಮಾತ್ರ ಉತ್ತಮ ಆರೋಗ್ಯವನ್ನು ಪಡೆಯಬಹುದು.
3. ಮಾನಸಿಕ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿದರೆ ಮಾತ್ರ  ಹೃದಯವು ಆರೋಗ್ಯಕರವಾಗಿರುತ್ತದೆ. ಖಿನ್ನತೆ ಅಥವಾ ಒತ್ತಡವು ಮನಸ್ಸಿನ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಿ. 
4.ಇದಕ್ಕಾಗಿ, ತಾಜಾ ತರಕಾರಿಗಳು ಮತ್ತು ಹಣ್ಣುಗಳ ಸೇವನೆಯನ್ನು ಹೆಚ್ಚಿಸಬೇಕು. ಏಕೆಂದರೆ ದೇಹಕ್ಕೆ ಪೋಷಕಾಂಶಗಳು ಅಗತ್ಯವಿರುತ್ತದೆ. 
5. ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ವಸ್ತುಗಳು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಿಂದ ಹೆಚ್ಚು  ಅಂತರ ಇಟ್ಟುಕೊಳ್ಳುವುದು ಉತ್ತಮ.


ಇದನ್ನೂ ಓದಿ : Weight Loss Drink : ನಿಮ್ಮ Belly Fat ಸಮಸ್ಯೆಗೆ ಕುಡಿಯಿರಿ ಈ ಮಾಂತ್ರಿಕ ಪಾನಿ, ಶೀಘ್ರದಲ್ಲೇ ಕಡಿಮೆಯಾಗುತ್ತೆ!


6.ನಿಮ್ಮ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ. ಬೊಜ್ಜು ಅನೇಕ ರೋಗಗಳ ಮೂಲವಾಗಿದೆ.
7.ಸಂಸ್ಕರಿತ ಆಹಾರ, ಪ್ಯಾಕ್ ಮಾಡಿದ ಪದಾರ್ಥಗಳಿಂದ ದೂರವಿರಿ. 
8.ದಿನನಿತ್ಯದ ಯೋಗ ಮತ್ತು ಕಾರ್ಡಿಯೋ ವ್ಯಾಯಾಮಕ್ಕಾಗಿ ಸಮಯವನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ.  ಇದು ಹೃದಯವನ್ನು ಸರಿಯಾಗಿ ಪಂಪ್ ಮಾಡಲು ಅನುವು ಮಾಡಿಕೊಡುತ್ತದೆ.
9. ವಾಕಿಂಗ್, ಜಾಗಿಂಗ್, ಸೈಕ್ಲಿಂಗ್, ಮೆಟ್ಟಿಲುಗಳನ್ನು ಹತ್ತುವುದು,  ಈಜು ಇತ್ಯಾದಿಗಳನ್ನು ಮಾಡಬಹುದು.
10. ಆಲ್ಕೋಹಾಲ್ ಮತ್ತು ಸಿಗರೇಟ್ ಸೇವನೆಯ ಅಭ್ಯಾಸವಿದ್ದರೆ ಅದನ್ನು ತಕ್ಷಣ ತ್ಯಜಿಸಿ. ಇದು ಶ್ವಾಸಕೋಶ ಮತ್ತು ಯಕೃತ್ತಿಗೆ ಹಾನಿಯನ್ನುಂಟುಮಾಡುತ್ತದೆ. ಮಾತ್ರವಲ್ಲ, ಹೃದಯದ ಆರೋಗ್ಯಕ್ಕೂ ಒಳ್ಳೆಯದಲ್ಲ. 


ಇದನ್ನೂ ಓದಿ :  Hair Care Tips : ತಲೆ ಕೂದಲು ರಕ್ಷಣೆಗೆ ಶಾಂಪೂ ಬದಲು ಮೊಸರು ಬಳಸಿ! ಹೇಗೆ ಇಲ್ಲಿದೆ ನೋಡಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.