Vitamin B6 Rich Foods: ವಿಟಮಿನ್ ಬಿ 6 ಅನ್ನು ಪಿರಿಡಾಕ್ಸಿನ್ ಎಂದೂ ಕರೆಯುತ್ತಾರೆ. ಇದು ನೀರಿನಲ್ಲಿ ಕರಗುವ ವಿಟಮಿನ್ ಆಗಿದೆ. ಬಿ 6 ಅನೇಕ ಆಹಾರಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ. ಈ ವಿಟಮಿನ್ ಸಹಾಯದಿಂದ, ಅನೇಕ ರೋಗಗಳ ಅಪಾಯವನ್ನು ತಪ್ಪಿಸಬಹುದು. ದೇಹದಲ್ಲಿ ಸಾಕಷ್ಟು ಪ್ರಮಾಣದ ರಕ್ತವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಟಮಿನ್ ಬಿ 6 ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ, ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.
ವಿಟಮಿನ್ B6 ಸಮೃದ್ಧವಾಗಿರುವ ಆಹಾರಗಳು :
1. ಹಾಲು
ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರ ಸೇವನೆ ಮೂಲಕ ದೇಹಕ್ಕೆ ವಿಟಮಿನ್ ಬಿ 6 ಪೂರೈಕೆಯಾಗುತ್ತದೆ. ಈ ಪೋಷಕಾಂಶದ ಕೊರತೆಯಿದ್ದರೆ, ನರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಎಲ್ಲಾ ವಯಸ್ಸಿನವರು ಹಾಲು ಕುಡಿಯಬೇಕು.
ಇದನ್ನೂ ಓದಿ : ಮಧುಮೇಹ ರೋಗಿಗಳಿಗೆ ಸಂಜೀವಿನಿ ಈ ಎಲೆ.! ನಿತ್ಯ ಸೇವಿಸಿದರೆ ನಿಯಂತ್ರಣದಲ್ಲಿರುತ್ತದೆ ರಕ್ತದ ಸಕ್ಕರೆ
2. ಸಾಲ್ಮನ್ ಮೀನು :
ಸಮುದ್ರಾಹಾರದಲ್ಲಿ, ಸಾಲ್ಮನ್ ಮೀನುಗಳನ್ನು ಆರೋಗ್ಯಕರ ಆಹಾರದ ವರ್ಗದಲ್ಲಿ ಇರಿಸಲಾಗುತ್ತದೆ. ಈ ಮೀನಿನಲ್ಲಿ ವಿಟಮಿನ್ ಬಿ 6 ಹೇರಳವಾಗಿ ಕಂಡುಬರುತ್ತದೆ. ಇದು ನಮ್ಮ ಮೂತ್ರಜನಕಾಂಗದ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಮೂತ್ರಜನಕಾಂಗದ ಗ್ರಂಥಿಗಳು ಕಾರ್ಟಿಸೋಲ್, ಅಡ್ರಿನಾಲಿನ್ ಮತ್ತು ಅಲ್ಡೋಸ್ಟೆರಾನ್ ಸೇರಿದಂತೆ ಹಲವಾರು ಪ್ರಮುಖ ಹಾರ್ಮೋನುಗಳನ್ನು ಉತ್ಪಾದಿಸುತ್ತವೆ. ಇದಲ್ಲದೆ, ಸಾಲ್ಮನ್ ಮೀನು ಕಡಿಮೆ ಕೊಬ್ಬಿನ ಆಹಾರವಾಗಿದೆ ಮತ್ತು ಇದನ್ನು ತಿನ್ನುವುದರಿಂದ ಸಾಕಷ್ಟು ಪ್ರೋಟೀನ್ ಕೂಡ ದೊರೆಯುತ್ತದೆ.
3. ಕ್ಯಾರೆಟ್ :
ಒಂದು ಮಧ್ಯಮ ಗಾತ್ರದ ಕ್ಯಾರೆಟ್‌ನಲ್ಲಿ ಸಿಗುವ ವಿಟಮಿನ್ ಬಿ 6 , ಒಂದು ಲೋಟ ಹಾಲಿನಲ್ಲಿ ಲಭ್ಯವಾಗುವ ವಿಟಮಿನ್ ಗೆ ಸಮವಾಗಿರುತ್ತದೆ. ಈ ತರಕಾರಿಯನ್ನು ಹಸಿಯಾಗಿಯೂ ಸೇವಿಸಬಹುದು.
ಇದನ್ನೂ ಓದಿ : Diabetes: ಅಡುಗೆಮನೆಯಲ್ಲಿರುವ ಈ ಮಸಾಲೆ ಮಧುಮೇಹಿಗಳ ಪಾಲಿನ ಸಂಜೀವಿನಿ.!
4. ಪಾಲಕ್ :
ಪಾಲಕ್ ಸೊಪ್ಪನ್ನು ಪೌಷ್ಟಿಕಾಂಶ-ಭರಿತ ಆಹಾರವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ವಿಟಮಿನ್ ಬಿ6, ವಿಟಮಿನ್ ಎ, ವಿಟಮಿನ್ ಸಿ ಮತ್ತು ಕಬ್ಬಿಣದ ಅಂಶವು ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದನ್ನು ಸಲಾಡ್ ಅಥವಾ ಜ್ಯೂಸ್ ರೂಪದಲ್ಲಿ ಸೇವಿಸುವುದರಿಂದ ದೇಹವು ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.