ಬೆಂಗಳೂರು : Worst combination with mango : ಹಣ್ಣುಗಳ ರಾಜ ಮಾವು ಎಲ್ಲರಿಗೂ ಪ್ರಿಯವಾದದ್ದು.ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಈ ಹಣ್ಣನ್ನು ಇಷ್ಟಪಟ್ಟು ತಿನ್ನುತ್ತಾರೆ.ಮಾವಿನ ಹಣ್ಣಿನಿಂದ ಮ್ಯಾಂಗೋ ಶೇಕ್, ಲಸ್ಸಿ, ಸ್ಮೂಥಿ, ಐಸ್ ಕ್ರೀಂ ಮುಂತಾದ ಹಲವು ರುಚಿಕರ ತಿನಿಸುಗಳನ್ನು ತಯಾರಿಸಬಹುದು. ಅದೇ ವೇಳೆ ಮಾವಿನಹಣ್ಣನ್ನು ಹಾಗೆಯೇ ತಿನ್ನಲು ಇಷ್ಟಪಡುತ್ತಾರೆ.ಮಾವು ತಿನ್ನಲು ರುಚಿಕರ ಮಾತ್ರವಲ್ಲ,ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.


COMMERCIAL BREAK
SCROLL TO CONTINUE READING

ಮಾವಿನ ಹಣ್ಣಿನ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುವುದರೊಂದಿಗೆ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.ಅಷ್ಟೇ ಅಲ್ಲ ತ್ವಚೆಯ ಆರೋಗ್ಯಕ್ಕೂ ಇದು ತುಂಬಾ ಪ್ರಯೋಜನಕಾರಿ.ಆದರೆ, ಮಾವಿನಹಣ್ಣು ತಿಂದ ನಂತರ ಕೆಲವು ಪದಾರ್ಥಗಳನ್ನು ಸೇವಿಸಬಾರದು ಎನ್ನುವ ಮಾಹಿತಿ ಅನೇಕರಿಗೆ ಇಲ್ಲ.  ಮಾವಿನಹಣ್ಣು ತಿಂದ ತಕ್ಷಣ ಕೆಲವು ವಸ್ತುಗಳನ್ನು ಸೇವಿಸಿದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. 


ಇದನ್ನೂ ಓದಿ : ಈ ಸೊಪ್ಪನ್ನು ಬರೀ ಮೂಸಿ ನೋಡುವುದರರಿಂದಲೇ ಶೀತ ಕೆಮ್ಮು ತಕ್ಷಣ ಪರಿಹಾರವಾಗುತ್ತದೆ ! ಕಫ, ತಲೆನೋವಿಗೂ ಇದೇ ಮದ್ದು


ಮೊಸರು : 
ಮಾವು ತಿಂದ ತಕ್ಷಣ ಮೊಸರು ಸೇವಿಸಬಾರದು.ಏಕೆಂದರೆ ಮಾವು ಮತ್ತು ಮೊಸರು ಒಟ್ಟಾಗಿ ಹೊಟ್ಟೆಯಲ್ಲಿ ಹೆಚ್ಚಿನ ಕಾರ್ಬನ್ ಡೈಆಕ್ಸೈಡ್ ಅನ್ನು ಸೃಷ್ಟಿಸುತ್ತದೆ. ಇದು ಹೊಟ್ಟೆ ನೋವಿನಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. 


ಮಸಾಲೆ ಆಹಾರ : 
ಮಾವಿನಹಣ್ಣು ತಿಂದ ನಂತರ ಕಟುವಾದ ಅಥವಾ ಮಸಾಲೆಯುಕ್ತ ಆಹಾರವನ್ನು ಸೇವಿಸಬಾರದು.ಇದು ಗ್ಯಾಸ್, ಮಲಬದ್ಧತೆ ಮತ್ತು  ಆಸಿಡಿಟಿ ಯಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡುತ್ತದೆ.  


ತಂಪು ಪಾನೀಯ : 
ಮಾವು ತಿಂದ ತಕ್ಷಣ ತಂಪು ಪಾನೀಯ ಸೇವನೆ ಆರೋಗ್ಯಕ್ಕೆ ಹಾನಿಕರ. ಇವೆರಡೂ ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ. ಇದರಿಂದಾಗಿ  ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಬಹುದು. ವಿಶೇಷವಾಗಿ,ಇದು ಮಧುಮೇಹ ರೋಗಿಗಳಿಗೆ ಅತ್ಯಂತ ಹಾನಿಕಾರಕವಾಗಿದೆ.


ಇದನ್ನೂ ಓದಿ : Diabetes Control: ಮಧುಮೇಹ ನಿಯಂತ್ರಣಕ್ಕೆ ಆಯುರ್ವೇದ ಪಾನೀಯಗಳು


ನೀರು : 
ಮಾವು ತಿಂದ ತಕ್ಷಣ ನೀರು ಕುಡಿಯಬಾರದು.ಹೀಗೆ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಇದು ಹೊಟ್ಟೆ ನೋವು,ಗ್ಯಾಸ್ ಮತ್ತು ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.ಮಾವು ತಿಂದ ಅರ್ಧ ಗಂಟೆಯ ನಂತರವೇ ನೀರು ಕುಡಿಯಬೇಕು.


ಹಾಗಲಕಾಯಿ : 
ಮಾವಿನಕಾಯಿ ತಿಂದ ನಂತರ ಹಾಗಲಕಾಯಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.ಮಾವು ರುಚಿಯಲ್ಲಿ ಸಿಹಿಯಾಗಿರುತ್ತದೆ ಮತ್ತು ಹಾಗಲಕಾಯಿ ಕಹಿಯಾಗಿದೆ.ಅಂತಹ ಪರಿಸ್ಥಿತಿಯಲ್ಲಿ,ಇವೆರಡೂ ಹೊಟ್ಟೆಯಲ್ಲಿ  ರಿಯಾಕ್ಟ್ ಮಾಡಬಹುದು. ವಾಂತಿ,ಅತಿಸಾರ ಮತ್ತು ಉಸಿರಾಟದ ತೊಂದರೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.