ಕರೋನಾ ಕಾಲದಲ್ಲಿ ದೇಸಿ ತುಪ್ಪ ಯಾಕೆ ತಿನ್ನಬೇಕು.? ಇಲ್ಲಿದೆ ಉತ್ತರ
ಬೇಸಿಗೆಯಲ್ಲಿ ತುಪ್ಪ ತಿಂದರೆ ಇಮ್ಯೂನಿಟಿ ಹೆಚ್ಚುತ್ತದೆ. ದೇಹದ ಇಮ್ಯೂನಿಟಿ ಹೆಚ್ಚಿಸುವ ಅನೇಕ ಪೋಷಕಾಂಶಗಳು ತುಪ್ಪದಲ್ಲಿವೆ. ತುಪ್ಪ ತಿಂದರೆ ವೀಕ್ನೆಸ್ ಕಡಿಮೆಯಾಗುತ್ತದೆ.
ಬೆಂಗಳೂರು : ಕರೋನಾ (Coronavirus) ಕಾಲದಲ್ಲಿ ಆರೋಗ್ಯ ಚೆನ್ನಾಗಿಟ್ಟುಕೊಳ್ಳುವುದು ತುಂಬಾ ಅನಿವಾರ್ಯ. ಸಣ್ಣ ಒಂದು ತಪ್ಪು ದೊಡ್ಡ ಅನಾಹುತಕ್ಕೆ ಕಾರಣವಾಗಬಲ್ಲದು. ಈ ಹೊತ್ತಿನಲ್ಲಿ ಇಮ್ಯೂನಿಟಿ (Immunity) ಹೆಚ್ಚಿಸಿಕೊಳ್ಳುವುದು ತೀರಾ ಮುಖ್ಯ. ನಮ್ಮ ದೇಹದ ಇಮ್ಯೂನಿಟಿ ಹೆಚ್ಚಿಸಲು ನಾವು ತಿನ್ನಲೇ ಬೇಕು ದೇಸಿ ತುಪ್ಪ. ಕರೋನಾ ಕಾಲದಲ್ಲಿ ತುಪ್ಪ (Ghee)ತಿಂದರೆ ಏನು ಪ್ರಯೋಜನ ತಿಳಿದುಕೊಳ್ಳೋಣ
1. ಇಮ್ಯೂನಿಟಿ ಹೆಚ್ಚುತ್ತದೆ:
ಬೇಸಿಗೆಯಲ್ಲಿ (Summer) ತುಪ್ಪ ತಿಂದರೆ ಇಮ್ಯೂನಿಟಿ ಹೆಚ್ಚುತ್ತದೆ. ದೇಹದ ಇಮ್ಯೂನಿಟಿ (Immunity) ಹೆಚ್ಚಿಸುವ ಅನೇಕ ಪೋಷಕಾಂಶಗಳು ತುಪ್ಪದಲ್ಲಿವೆ. ತುಪ್ಪ ತಿಂದರೆ ವೀಕ್ನೆಸ್ ಕಡಿಮೆಯಾಗುತ್ತದೆ. ಮೂಳೆ ಬಲಿಷ್ಠವಾಗುತ್ತದೆ. ತುಪ್ಪವನ್ನು (Ghee) ಹಾಗೆ ತಿನ್ನಬಹುದು ಅಥವಾ ಬೇರೆ ಆಹಾರ ವಸ್ತುಗಳೊಂದಿಗೆ ಸೇರಿಸಿ ತಿನ್ನಬಹುದು
2. ಜೀರ್ಣಕ್ರಿಯೆ ಸರಾಗವಾಗುತ್ತದೆ:
ತುಪ್ಪ ತಿಂದರೆ ಜೀರ್ಣ ಕ್ರಿಯೆ (Digestion) ಸರಾಗವಾಗುತ್ತದೆ. ತುಪ್ಪ ದಲ್ಲಿ ಆಂಟಿ ಫಂಗಲ್ ಪೋಷಕಾಂಶಗಳಿರುತ್ತವೆ. ಇದು ಅನೇಕ ರೋಗಗಳಿಗೆ ರಾಮಬಾಣವಾಗಿ ಕೆಲಸಮಾಡುತ್ತದೆ.
ಇದನ್ನೂ ಓದಿ : Health Tips: ರಾತ್ರಿ ಮಲಗುವ ಮುನ್ನ ಹಾಲಿನಲ್ಲಿ 5 ಮಖಾನಾ ಸೇವಿಸಿ
3. ಡಯಾಬಿಟಿಸ್ ರೋಗಿಗಳು ತಿನ್ನಬೇಕು:
ತುಪ್ಪ ಮಧುಮೇಹ (Diabetes) ನಿಯಂತ್ರಿಸುವಲ್ಲಿ ಕೆಲಸ ಮಾಡುತ್ತದೆ. ಡಯಾಬಿಟಿಸ್ ಅಪಾಯವೂ ದೇಹದಲ್ಲಿ ಕಡಿಮೆಯಾಗುತ್ತದೆ. ತುಪ್ಪ ತಿಂದರೆ ದಪ್ಪ ಆಗುವ ಸಮಸ್ಯೆ ಇರುವುದಿಲ್ಲ.
4. ಕೊಲೆಸ್ಟ್ರಾಲ್ ಲೆವೆಲ್ ನಿಯಂತ್ರಣ :
ತುಪ್ಪ ದೇಹದಲ್ಲಿಕೊಲೆಸ್ಟ್ರಾಲ್ (Cholesterol) ಮಟ್ಟ ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ಸಮಸ್ಯೆ ಇರುವವರಿಗೆ ತುಪ್ಪ ಒಳ್ಳೆಯದು
ಇದನ್ನೂ ಓದಿ : Anger Management Therapy: ಸಣ್ಣ-ಪುಟ್ಟ ವಿಷಯಕ್ಕೂ ಕೋಪ ಬರುತ್ತಿದೆಯೇ? ಈ ಟಿಪ್ಸ್ ಅನುಸರಿಸಿ ನೋಡಿ
5. ವೀಕ್ನೆಸ್ ದೂರ ಮಾಡುತ್ತದೆ :
ತುಂಬಾ ಶಾರೀರಿಕ ಶ್ರಮ ಮಾಡುವವರು ತುಪ್ಪ ತಿಂದರೆ ಒಳ್ಳೆಯದು. ಇದರಿಂದ ವಿಕ್ನೆಸ್ ಕಡಿಮೆಯಾಗುತ್ತದೆ. ಇದರಿಂದ ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆ ತುಂಬಾ ಚೆನ್ನಾಗಿ ಆಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.