ಅನೇಕರು ಮೊಸರಿನೊಂದಿಗೆ ಎಲ್ಲಾ ಆಹಾರವನ್ನು ಬೆರೆಸಿ ತಿನ್ನುತ್ತಾರೆ. ಆದರೆ ಆ ರೀತಿಯ ಆಹಾರ ಪದ್ಧತಿ ಆರೋಗ್ಯಕ್ಕೆ ಹಾನಿ ಮಾಡಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆಹಾರದ ರುಚಿ ಹೆಚ್ಚುತ್ತದೆ ಎಂದು ಮೊಸರನ್ನು ಈ ರೀತಿ ತಿಂದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ.ಕೆಲವು ಪದಾರ್ಥಗಳನ್ನು ಮೊಸರಿನೊಂದಿಗೆ ಸೇವಿಸಲೇ ಬಾರದು. ಮೊಸರಿನೊಂದಿಗೆ ಸೇವಿಸಬಾರದ ಆಹಾರದ ಪಟ್ಟಿ ಇಂತಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಕಣ್ಣಿನ ಸುತ್ತ ಕಾಡುವ ಡಾರ್ಕ್ ಸರ್ಕಲ್‌ಗೆ ಇಲ್ಲಿದೆ ಸುಲಭ ಪರಿಹಾರ


ಮೊಸರಿನೊಂದಿಗೆ ಈರುಳ್ಳಿ ತಿನ್ನುವುದು ಹಾನಿಕಾರಕ :
ಮೊಸರಿಗೆ ಈರುಳ್ಳಿಯನ್ನು ಸೇರಿಸಿದರೆ ತಿನ್ನಲು ಬಹಳ ರುಚಿಯಾಗಿರುತ್ತದೆ. ಆದರೆ ಅದು  ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ.  ಮೊಸರು ಮತ್ತು ಈರುಳ್ಳಿ ಎರಡರ ಪ್ರವೃತಿ ವಿಭಿನ್ನವಾಗಿರುತ್ತದೆ.  ಈರುಳ್ಳಿ ಬಿಸಿ ಪ್ರವೃತಿಯದ್ದಾಗಿದ್ದರೆ, ಮೊಸರು ತಂಪು. ಹೀಗಾಗಿ ಇವೆರಡನ್ನು ಒಟ್ಟಿಗೆ ತಿನ್ನುವುದರಿಂದ ತುರಿಕೆ, ಎಸ್ಜಿಮಾ, ಸೋರಿಯಾಸಿಸ್, ಚರ್ಮ ಮತ್ತು ಹೊಟ್ಟೆಗೆ ಸಂಬಂಧಿಸಿದ ಅನೇಕ ರೋಗಗಳು ಕಾಣಿಸಿಕೊಳ್ಳಬಹುದು.


ಮೊಸರಿನ ಜೊತೆ ಇವುಗಳನ್ನು ತಿನ್ನಬೇಡಿ :
ಮಾವು ಮತ್ತು ಮೊಸರನ್ನು ಯಾವುದೇ ಕಾರಣಕ್ಕೂ ತಿನ್ನಬಾರದು. ಮೊಸರು ಮತ್ತು ಮಾವು ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ದೇಹದಲ್ಲಿ ವಿಷ ಪ್ರಮಾಣ ಸೃಷ್ಟಿಯಾಗಬಹುದು.  


ಉದ್ದಿನಬೇಳೆ ಮತ್ತು ಮೊಸರು : 
ಉದ್ದಿನಬೇಳೆ ಮತ್ತು ಮೊಸರನ್ನು ಜೊತೆಯಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇವೆರಡನ್ನು ಒಟ್ಟಿಗೆ ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ. 


ಇದನ್ನು ಓದಿ: Health Tips: ಆಹಾರ ಸೇವನೆ ಬಳಿಕ ಸ್ನಾನ, ಊಟದ ನಂತರ ಹಣ್ಣು ಆರೋಗ್ಯಕ್ಕೆ ಹಾನಿಕರ!


ಹಾಲು ಮತ್ತು ಮೊಸರು : 
ಹಾಲು ಮತ್ತು ಮೊಸರು ಎರಡನ್ನೂ ಒಟ್ಟಿಗೆ ಸೇವಿಸಬಾರದು. ಹೀಗೆ ಮಾಡುವುದರಿಂದ ಅಸಿಡಿಟಿ, ಗ್ಯಾಸ್, ವಾಂತಿ ಸಮಸ್ಯೆ ಶುರುವಾಗುತ್ತದೆ. ಅಲ್ಲದೆ, ಜೀರ್ಣಕ್ರಿಯೆಯ ಸಮಸ್ಯೆ ಕೂಡಾ ಕಾಡುತ್ತದೆ . 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.