Weight Loss Mistakes In The Morning : ಕೊರೊನಾವೈರಸ್ ಸಾಂಕ್ರಾಮಿಕದ ಬಳಿಕ ವರ್ಕ್ ಫ್ರಮ್ ಹೋಂ ಸಂಸ್ಕೃತಿ ಹೆಚ್ಚಾಗಿದೆ. ಇದರಿಂದಾಗಿ ಕಳೆದ 2 ವರ್ಷಗಳಲ್ಲಿ ಉದ್ಯೋಗಿ ಯುವಕರಲ್ಲಿ ತೂಕ ಹೆಚ್ಚಳದ ಸಮಸ್ಯೆ ಕಾಣಿಸಿಕೊಂಡಿದೆ.  ಒಮ್ಮೆ ತೂಕ ಹೆಚ್ಚಳವಾದರೆ ಮತ್ತೆ ಅದನ್ನು ಕಳೆದುಕೊಳ್ಳುವುದು ಕಷ್ಟ.  ಅದು ಕೂಡಾ ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳುವುದು ಅಂದುಕೊಳ್ಳುವಷ್ಟು ಸುಲಭವಲ್ಲ. ವ್ಯಾಯಾಮ ಮತ್ತು ಕಟ್ಟುನಿಟ್ಟಾದ ಆಹಾರ ಪದ್ದತಿಯನ್ನು ಅನುಸರಿಸಬೇಕಾಗುತ್ತದೆ. ಅದರಲ್ಲೂ ತೂಕ ಕಳೆದುಕೊಳ್ಳುವ ಭರಾಟೆಯಲ್ಲಿ ಕೆಲವೊಮ್ಮೆ ತಪ್ಪುಗಳಾಗಿ ಬಿಡುತ್ತವೆ.  ಹೀಗಾದಾಗ ಕಡಿಮೆಯಾಗುವ ತೂಕ ಮತ್ತೆ ಹೆಚ್ಚಾಗಲು ಆರಂಭವಾಗುತ್ತದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ ಬೆಳಗಿನ ಸಮಯವು ನಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ಬೆಳಗ್ಗಿನ ಹೊತ್ತು ಏನಾದರೂ ತಪ್ಪಾದಲ್ಲಿ, ಇಡೀ ದಿನವೇ ಹಾಳಾಗುತ್ತದೆ. ಅದಕ್ಕಾಗಿಯೇ ದಿನದ ಮೊದಲಾರ್ಧದಲ್ಲಿ ಯಾವ ತಪ್ಪನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ಇಲ್ಲವಾದರೆ ಹೊಟ್ಟೆಯ ಕೊಬ್ಬು ಅನಗತ್ಯವಾಗಿ ಹೆಚ್ಚಾಗುತ್ತದೆ.


ಇದನ್ನೂ ಓದಿ : Clove for Diabetes: ಅಡುಗೆ ಮನೆಯಲ್ಲಿರುವ ಈ ಮಸಾಲೆಯಿಂದ ನಿಯಂತ್ರಣಕ್ಕೆ ಬರುತ್ತದೆ ಡಯಾಬಿಟೀಸ್


ಬೆಳಿಗ್ಗೆ ಈ ತಪ್ಪುಗಳನ್ನು ಮಾಡಬೇಡಿ :
ಬೆಳಿಗ್ಗೆ ಮನೆಕೆಲಸ ಮುಗಿಸಿ ಕಚೇರಿಗೆ ತೆರಳುವ ಭರದಲ್ಲಿ ಬೆಳಗ್ಗಿನ ಉಪಹಾರವನ್ನೇ ಮರೆತು ಬಿಡುತ್ತೇವೆ.  ಇದೇ ನಾವು ಮಾಡುವ ಅತಿ ದೊಡ್ಡ ತಪ್ಪು. ಯಾವುದೇ ಸಂದರ್ಭದಲ್ಲೂ  ಬೆಳಗ್ಗಿನ ಉಪಹಾರವನ್ನು ಕೈ ಬಿಡಬಾರದು. ಅದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.  ದೇಹಕ್ಕೆ ವಿಪರೀತ ದಣಿವಾಗುತ್ತದೆ.  ಹೀಗೆ ಮಾಡುವುದರಿಂದ ಒತ್ತಡವನ್ನು ಸಹ ಎದುರಿಸಬೇಕಾಗುತ್ತದೆ.


ಬೆಳಗಿನ ಉಪಹಾರ ಎಷ್ಟು ಮುಖ್ಯವೋ? ಉಪಹಾರದಲ್ಲಿ ಏನು ತಿನ್ನುತ್ತೇವೆ ಎನ್ನುವುದು ಕೂಡಾ ಅಷ್ಟೇ ಮುಖ್ಯ. ಬೆಳಗಿನ ಉಪಾಹಾರದಲ್ಲಿ ಬ್ರೆಡ್ ತಿಂದರೆ ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಆದ್ದರಿಂದ ನೀವು ಆಹಾರದಲ್ಲಿ ಹಣ್ಣುಗಳು, ಓಟ್ಸ್ ಅಥವಾ ಇತರ ಆರೋಗ್ಯಕರ ವಸ್ತುಗಳನ್ನು ಮಾತ್ರ ಸೇವಿಸಬೇಕು.


ಇದನ್ನೂ ಓದಿ : Benefits Of Ghee Coffee: ಬೆಳಗ್ಗೆ ಕಾಫಿಯಲ್ಲಿ ಈ ಕೊಲೆಸ್ಟ್ರಾಲ್ ಬೆರೆಸಿ ಸೇವಿಸುವುದರಿಂದ ಹಲವು ಲಾಭಗಳಿವೆ, ಇಲ್ಲಿದೆ ತಯಾರಿಸುವ ವಿಧಾನ


ಇತ್ತೀಚಿನ ದಿನಗಳಲ್ಲಿ ಲೇಟ್ ನೈಟ್ ಪಾರ್ಟಿ, ಮೊಬೈಲ್ ಮತ್ತು ಲ್ಯಾಪ್‌ಟಾಪ್‌ನಲ್ಲಿ ತಡರಾತ್ರಿಯವರೆಗೆ ವಿಡಿಯೋ ನೋಡುವ ಅಭ್ಯಾಸ ಬೆಳೆಸಿಕೊಂಡಿರುವುದರಿಂದ ಬೆಳಿಗ್ಗೆ ತಡವಾಗಿ ಎದ್ದೇಳುವ  ಪ್ರವೃತಿಯೂ ಬೆಳೆಯುತ್ತಿದೆ.  ಇದು ಅನಗತ್ಯ ತೂಕ ಹೆಚ್ಚಾಗಲು ಕಾರಣವಾಗುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.