Benefits Of Ghee Coffee: ಬೆಳಗ್ಗೆ ಕಾಫಿಯಲ್ಲಿ ಈ ಕೊಲೆಸ್ಟ್ರಾಲ್ ಬೆರೆಸಿ ಸೇವಿಸುವುದರಿಂದ ಹಲವು ಲಾಭಗಳಿವೆ, ಇಲ್ಲಿದೆ ತಯಾರಿಸುವ ವಿಧಾನ

Coffee With Ghee Health Benefits: ಬೆಳಗ್ಗೆ ಕಾಫಿಯಲ್ಲಿ ತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಹಲವು ಪ್ರಯೋಜನಗಳು ಸಿಗುತ್ತವೆ. ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಇದು ಪರಿಹಾರ ಒದಗಿಸುತ್ತದೆ.  

Written by - Nitin Tabib | Last Updated : Jul 6, 2022, 08:41 PM IST
  • ತೂಕ ಇಳಿಕೆಯಲ್ಲಿ ಇದರ ಸೇವನೆ ಲಾಭ ನೀಡುತ್ತದೆ.
  • ಉದರಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಇದು ಉತ್ತಮ
  • ಇದು ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಲು ಸಹಾಯ ಮಾಡುತ್ತದೆ
Benefits Of Ghee Coffee: ಬೆಳಗ್ಗೆ ಕಾಫಿಯಲ್ಲಿ ಈ ಕೊಲೆಸ್ಟ್ರಾಲ್ ಬೆರೆಸಿ ಸೇವಿಸುವುದರಿಂದ ಹಲವು ಲಾಭಗಳಿವೆ, ಇಲ್ಲಿದೆ ತಯಾರಿಸುವ ವಿಧಾನ title=
Ghee Coffee Benefits

Ghee Coffee Benefits: ಬೆಳಗ್ಗೆ ಕಾಫಿಯಲ್ಲಿ ಕೊಲೆಸ್ಟ್ರಾಲ್ ಅನ್ನು ಬೆರೆಸಿ ಕುಡಿಯುವುದರಿಂದ ಹಲವು ಪ್ರಯೋಜನಗಳು ಸಿಗುತ್ತವೆ. ಇದರಲ್ಲಿರುವ ಕ್ಯಾಲ್ಸಿಯಂ, ವಿಟಮಿನ್ಸ್, ಒಮೆಗಾ-3 ನಂತಹ ಪೋಷಕಾಂಶಗಳು ನಿಮಗೆ ಅನೇಕ ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತವೆ. ಆಯುರ್ವೇದದ ಪ್ರಕಾರ, ತುಪ್ಪದ ಸೇವನೆಯು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ, ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ಇದು ಪರಿಣಾಮಕಾರಿಯಾಗಿದೆ.

ತೂಕ ಇಳಿಕೆಗೆ ಸಹಕಾರಿ
ತುಪ್ಪವು ಒಮೆಗಾ -3, 6 ಮತ್ತು 9 ನಂತಹ ಉತ್ತಮ ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ನೀವು ಆರೋಗ್ಯಕರ ಕೊಬ್ಬಿನೊಂದಿಗೆ ದಿನವನ್ನು ಪ್ರಾರಂಭಿಸಿದರೆ, ನೀವು ಮತ್ತೆ ಮತ್ತೆ ಹಸಿವನ್ನು ಅನುಭವಿಸುವುದಿಲ್ಲ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಬೆಳಗ್ಗೆ ಒಂದು ಚಮಚ ತುಪ್ಪವನ್ನು ಸೇವಿಸುವುದು ಫಿಟ್ ಆಗಿರಲು ನೀವೂ ಸೇವಿಸುವ ಪೂರಕಗಳಿಗಿಂತ ಉತ್ತಮ ಆಯ್ಕೆಯಾಗಿದೆ.

ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಲಾಭಕಾರಿ
ತಜ್ಞರ ಪ್ರಕಾರ ಕಾಫಿಯಲ್ಲಿ ಒಂದು ಚಮಚ ತುಪ್ಪವನ್ನು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕರುಳಿನ ಆರೋಗ್ಯ ಸುಧಾರಿಸುತ್ತದೆ. ತುಪ್ಪವು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ, ಇದು ಜೀರ್ಣಕಾರಿ ತೊಂದರೆಗಳನ್ನು ಉಂಟುಮಾಡುವ ಆಮ್ಲವನ್ನು ತಟಸ್ಥಗೊಳಿಸುತ್ತದೆ. ಇದು ಬ್ಯುಟೈರೇಟ್ ಅನ್ನು ಸಹ ಒಳಗೊಂಡಿದೆ. ಇದು ಕೊಬ್ಬಿನಾಮ್ಲವಾಗಿದ್ದು ಉರಿಯೂತವನ್ನು ಕಡಿಮೆ ಮಾಡುತ್ತದೆ.

ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ
ಒಂದು ಅಧ್ಯಯನದ ಪ್ರಕಾರ, ತುಪ್ಪದಲ್ಲಿ ಸಮೃದ್ಧವಾಗಿರುವ ಆಹಾರ ಮತ್ತು ಕಡಿಮೆ ಕೊಲೆಸ್ಟ್ರಾಲ್ ಮಟ್ಟಗಳ ನಡುವೆ ಸಂಬಂಧವಿದೆ ಎಂದು ತಿಳಿದುಬಂದಿದೆ. ತುಪ್ಪವು ಬ್ಯುಟರಿಕ್ ಆಮ್ಲ ಮತ್ತು ಮಧ್ಯಮ ಸರಣಿ ಟ್ರೈಗ್ಲಿಸರೈಡ್‌ಗಳಿಂದ ಸಮೃದ್ಧವಾಗಿದೆ, ಇದು ಹಟಮಾರಿ ಕೊಬ್ಬನ್ನು ಕಡಿಮೆ ಮಾಡುವ ಮೂಲಕ ಉತ್ತಮ ಕೊಲೆಸ್ಟ್ರಾಲ್ ಅನ್ನು ಉತ್ತೇಜಿಸುತ್ತದೆ.

ಮನಸ್ಥಿತಿ ಸುಧಾರಣೆಗೆ ಉತ್ತಮ
ತುಪ್ಪದಲ್ಲಿರುವ ಕೊಬ್ಬಿನ ಪ್ರಮಾಣವು ನಿಮ್ಮ ಮೆದುಳಿಗೆ ಒಳ್ಳೆಯದು. ಇದರ ಸೇವನೆಯು ನರಗಳ ಸಂಪರ್ಕವನ್ನು ಉತ್ತೇಜಿಸುತ್ತದೆ. ಇದರೊಂದಿಗೆ, ಇದು ದೇಹದಲ್ಲಿ ಹಾರ್ಮೋನ್ ಉತ್ಪಾದನೆಯನ್ನು ಸುಧಾರಿಸುತ್ತದೆ. ಇದನ್ನು ಸೇವಿಸುವುದರಿಂದ ನಿಮ್ಮ ಮೂಡ್ ಚೆನ್ನಾಗಿರುತ್ತದೆ. ನೀವು ಬಟರ್ ಕಾಫಿ ಕೂಡ ಕುಡಿಯಬಹುದು.

ಇದನ್ನೂ ಓದಿ-ಮೊಟ್ಟೆಯನ್ನು ಈ ರೀತಿ ಬಳಸಿದರೆ ಕೆಲವೇ ದಿನಗಳಲ್ಲಿ ನಿಮ್ಮದಾಗಲಿದೆ ಉದ್ದನೆಯ ಕೇಶ ಕಾಂತಿ

ತಯಾರಿಸುವ ವಿಧಾನ 
ಮೊದಲು ಬಾಣಲೆಯಲ್ಲಿ ನೀರಿಗೆ ಕಾಫಿ ಬೆರೆಸಿ ಚೆನ್ನಾಗಿ ಕುದಿಸಿಕೊಳ್ಳಿ. ನಂತರ ಈ ಕುದಿಸಿದ ಕಾಫಿಗೆ ತುಪ್ಪ ಬೇರೆಸಿ, ಸ್ವಲ್ಪ ಹೊತ್ತು ಮತ್ತೆ ಕುದಿಸಿ. ಬಳಿಕ ಅದನ್ನು ಸೋಸಿ ಬಿಸಿಬಿಸಿ ಕಾಫಿ ಸೇವಿಸಿ

ಇದನ್ನೂ ಓದಿ-ಈ ಒಂದು ವಸ್ತುವನ್ನು ಸೇವಿಸಿದರೆ ಶುಗರ್ ಲೆವೆಲ್ ಕ್ಷಣ ಮಾತ್ರದಲ್ಲಿ ಕಡಿಮೆಯಾಗುತ್ತದೆ ..!

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ, ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News