Be Careful: ಈ 2 ವಿಷಯಗಳನ್ನು ನಿರ್ಲಕ್ಷಿಸುವುದು ಹೃದಯಾಘಾತಕ್ಕೆ ಕಾರಣವಾಗಬಹುದು..!

ಹೃದಯಾಘಾತವು ಈಗ ತುಂಬಾ ಸಾಮಾನ್ಯವಾಗಿದೆ. ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಲು ಪ್ರಾರಂಭಿಸಿದ ತಕ್ಷಣವೇ ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವು ಹೆಚ್ಚಾಗತೊಡಗುತ್ತದೆ. ಹೃದಯಾಘಾತ ತಪ್ಪಿಸಲು ಕೆಲವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳುತ್ತಾರೆ.

Written by - Puttaraj K Alur | Last Updated : Jul 5, 2022, 04:47 PM IST
  • ಇಂದಿನ ಬ್ಯುಸಿ ಲೈಫ್‍ನಲ್ಲಿ ಅನೇಕರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ
  • ಬದಲಾದ ಜೀವನಶೈಲಿ & ಜಂಕ್‍ಫುಂಡ್ ಸೇವನೆ ಹೃದಯಾಘಾತಕ್ಕೆ ಕಾರಣವಾಗುತ್ತದೆ
  • ಪ್ರತಿದಿನ ವ್ಯಾಯಾಮ ಮತ್ತು ಉತ್ತಮ ಆಹಾರ ಸೇವನೆಯಿಂದ ಅಪಾಯ ತಪ್ಪಿಸಬಹುದು
Be Careful: ಈ 2 ವಿಷಯಗಳನ್ನು ನಿರ್ಲಕ್ಷಿಸುವುದು ಹೃದಯಾಘಾತಕ್ಕೆ ಕಾರಣವಾಗಬಹುದು..! title=
ಹೃದಯಾಘಾತಕ್ಕೆ ಕಾರಣಗಳೇನು..?

ನವದೆಹಲಿ: ಹೃದಯಾಘಾತವು ಈಗ ತುಂಬಾ ಸಾಮಾನ್ಯವಾಗಿದೆ. ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಲು ಪ್ರಾರಂಭಿಸಿದ ತಕ್ಷಣವೇ ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವು ಹೆಚ್ಚಾಗತೊಡಗುತ್ತದೆ. ಹೃದಯಾಘಾತ ತಪ್ಪಿಸಲು ಕೆಲವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳುತ್ತಾರೆ.

ಆದರೆ ಕೆಲವರು ತಮ್ಮ ಬ್ಯುಸಿ ಲೈಫ್‌ನಲ್ಲಿ ಆರೋಗ್ಯದ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸಲ್ಲ. ಇದರಿಂದಾಗಿ ಹೆಚ್ಚಿನವರಿಗೆ ಹೃದಯಾಘಾತವಾಗುತ್ತದೆ. 2 ವಿಷಯಗಳ ಬಗ್ಗೆ ನಿರ್ಲಕ್ಷ್ಯವಹಿಸುವುದರಿಂದ ಹಾರ್ಟ್ ಅಟ್ಯಾಕ್‍ನ ಅಪಾಯ ಹೆಚ್ಚಾಗುತ್ತದೆ.  ಹೀಗಾಗಿ ನೀವು ಈ 2 ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇದರಿಂದ ನೀವು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು.  

ಇದನ್ನೂ ಓದಿ: Ginger: ಮಧುಮೇಹಿಗಳಿಗೆ ವರದಾನಕ್ಕಿಂತ ಕಡಿಮೆಯಿಲ್ಲ ಶುಂಠಿ

ನಿಮ್ಮ ಜೀವನಶೈಲಿ ಬದಲಾಗಬೇಕು

ಮೊದಲನೆಯದಾಗಿ ನೀವು ನಿಮ್ಮ ಜೀವನಶೈಲಿಯನ್ನು ಬದಲಾಯಿಸಬೇಕಾಗಿದೆ. ಇದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ನೀವು ನಿಮ್ಮ ಲೈಫ್‍ಸ್ಟೈಲ್‍ ಬದಲಾಯಿಸಿಕೊಳ್ಳದಿದ್ದರೆ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ.  ನೀವು ಸರಿಯಾದ ಸಮಯಕ್ಕೆ ಊಟ ಮಾಡದೇ ಇದ್ದಾಗ ಮತ್ತು ಸರಿಯಾದ ಸಮಯಕ್ಕೆ ವಾಕಿಂಗ್ ಹೋಗದೇ ಇದ್ದಾಗ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ಕೆಲವರು ಕೆಲಸದಲ್ಲಿ ಬ್ಯುಸಿಯಾಗಿ, ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದೇ ಇರುವುದರಿಂದ ಇಂತಹ ಸಮಸ್ಯೆಗಳು ಎದುರಾಗುತ್ತವೆ.

ವ್ಯಾಯಾಮ ಅತ್ಯಗತ್ಯ

ಕೆಲವರು ತುಂಬಾ ಬ್ಯುಸಿಯಾಗುವ ಮೂಲಕ ತಮ್ಮ ದೇಹವನ್ನು ಫಿಟ್ ಆಗಿರಿಸಿಕೊಳ್ಳಲು 10 ನಿಮಿಷ ಸಹ ಸಮಯ ನೀಡುವುದಿಲ್ಲ. ಇದರಿಂದ ಅವರಿಗೆ ಹಲವಾರು ರೀತಿಯ ಕಾಯಿಲೆಗಳು ಬರಲು ಪ್ರಾರಂಭಿಸುತ್ತವೆ. ಈ ಪೈಕಿ ಹೃದಯಾಘಾತ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಹೀಗಾಗಿ ನೀವು ಪ್ರತಿದಿನವೂ ವ್ಯಾಯಾಮವನ್ನು ಮಾಡಬೇಕು. ಪ್ರತಿದಿನ ಕೇವಲ 10 ನಿಮಿಷ ವ್ಯಾಯಾಮ ಮಾಡಿದರೂ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಈ ಬದಲಾವಣೆಗಳನ್ನು ಮಾಡಿಕೊಂಡರೆ ನೀವು ಹೃದಯಾಘಾತದ ಅಪಾಯದಿಂದ ಪಾರಾಗಬಹುದು.

ಇದನ್ನೂ ಓದಿ: Amla Juice Benefits: ಈ ಸಮಸ್ಯೆಗಳಿಗೆ ರಾಮಬಾಣ ನೆಲ್ಲಿ ಕಾಯಿ ಜ್ಯೂಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News