ಬೇಸಿಗೆಯಲ್ಲಿ ಕಲ್ಲಂಗಡಿ ಹೆಚ್ಚಾಗಿ ಸಿಗುತ್ತದೆ. ಮತ್ತೆ ಇದನ್ನ ತಿನ್ನುವಾಗ ಸಿಗುವ ಮಜವೇ ಬೇರೆ. ಯಾಕೆ ಅಂದ್ರೆ ಅದರ ಮೇಲೆ ಉಪ್ಪು ಉದುರಿಸಿಕೊಂಡು ತಿನ್ನುವಾಗ ಸ್ವರ್ಗವೇ ಧರೆಗೆ ಇಳಿದು ಬಂದ ಹಾಗೆ. ಆದರೆ ನಮಗೆ ಬಾಲ್ಯದಲ್ಲಿ ಕಲ್ಲಂಗಡಿ ತಿಂದ ನಂತ್ರ ನೀರು ಕುಡಿಯಬರಡು ಎಂದು ಹೇಳಲಾಗುತ್ತದೆ. ಒಂದು ವೇಳೆ ಕುಡಿದರೆ ನೀವು ಗಂಭೀರವಾಗಿ ಅನಾರೋಗ್ಯಕ್ಕೆ ಕಾರಣವಾಗಬಹುದು. ಕೆಲವರು ಹೇಳುವ ಪ್ರಕಾರ ಕಲ್ಲಂಗಡಿ ತಿಂದ ನಂತ್ರ ನೀರು ಕುಡಿಯುವುದರಿಂದ ಕಾಲರಾ ಬರುವ ಸಂಭವವಿದೆಎಂದು ಹೇಳಲಾಗುತ್ತಿದೆ. ಭಾರತದ ಪ್ರಾಚೀನ ಆಯುರ್ವೇದದಲ್ಲಿ, ಕಲ್ಲಂಗಡಿ ಸೀನೆಯ ನಂತ್ರ ನೀರು ಸೇವಿಸುವುದಿಲ್ಲ. ಕೆಲವು ತಜ್ಞರು ಸಹ ಇದನ್ನೂ ನಿರಾಕರಿಸುತ್ತಾರೆ. ಆದರೆ ಸತ್ಯ ಏನು? ಆಯುರ್ವೇದದಲ್ಲಿ ಕಲ್ಲಂಗಡಿ ಸೇವನೆ ನಂತರ ನೀರು ಕುಡಿಯಬಾರದು ಇದರ ಹಿಂದಿನ ವೈಜ್ಞಾನಿಕ ಕಾರಣಗಳೇನು ಇಲ್ಲಿದೆ ನೋಡಿ..


COMMERCIAL BREAK
SCROLL TO CONTINUE READING

ಆಯುರ್ವೇದ(Ayurvedic)ದ ಪ್ರಕಾರ, ಕಲ್ಲಂಗಡಿ ಸೇವೆನೆ ನಂತರ ನೀರು ಯಾಕೆ ಕುಡಿಯಬಾರದು ಎಂದು ಹೇಳಲಾಗುತ್ತದೆ. ಇದಕ್ಕೆ ಆಯುರ್ವೇದದಲ್ಲಿ ಉತ್ತರವಿದೆ, ಕೆಲವು ಆಹಾರಗಳ ಸೇವನೆಯ ನಂತ್ರ ನೀರು ಕುಡಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆಯುರ್ವೇದದ ಪ್ರಕಾರ, ಹಾಗೆ ಮಾಡುವುದರಿಂದ ದೇಹದಲ್ಲಿನ ದೋಶಗಳು ಮತ್ತು ಚಕ್ರಗಳ ಸ್ಥಿತಿ ಹದಗೆಡುತ್ತದೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆಯುರ್ವೇದ ತಜ್ಞರ ಪ್ರಕಾರ, ಕಲ್ಲಂಗಡಿ ಸೇವೆನೆ ನಂತರ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಹದಗೆಡುತ್ತದೆ. ಇದಲ್ಲದೆ, ಜೀರ್ಣಕಾರಿ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ, ಇದು ಅಜೀರ್ಣ, ವಾಯು, ಹೊಟ್ಟೆ ನೋವು ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ ಮತ್ತು ಹೊಟ್ಟೆಯ ಸೋಂಕಿಗೆ ಕಾರಣವಾಗಬಹುದು ಎಂದು ಹೇಳ್ಲಗುತ್ತಿದೆ.


ಇದನ್ನೂ ಓದಿ : Mucormycosis Causes: ಈ ಔಷಧಿಯ ಓವರ್ ಡೋಸ್ ಕೂಡ Black Fungus ಹರಡುವಿಕೆಗೆ ಕಾರಣವಂತೆ? ನೀವೂ ತೆಗೆದುಕೊಳ್ಳುತ್ತಿಲ್ಲ ತಾನೇ?


ಆಯುರ್ವೇದಕ್ಕೆ ಹೋಲುವ ವೈಜ್ಞಾನಿಕ ಕಾರಣವಿದೆಯೇ? ಕಾಲರಾ ಬಬ್ರುವುದು ನಿಜವೋ ಅಥವಾ ಸುಳ್ಳೋ? 


ಕೆಲವು ವಿಜ್ಞಾನಿಗಳ ಪ್ರಕಾರ, ಯಾವುದೇ ಹಣ್ಣು ತಿಂದ ಕೂಡಲೇ ನೀರು ಕುಡಿಯುವುದರಿಂದ ದೇಹಕ್ಕೆ ಹಾನಿಕಾರಕವಿದೆ. ಇದು ಹೊಟ್ಟೆಯ ಸಮಸ್ಯೆಯನ್ನ ಉಂಟು ಮಾಡುತ್ತದೆ. ಕಲ್ಲಂಗಡಿ(Watermelon)ಯಲ್ಲಿ ಬಹಳಷ್ಟು ನೀರಿನ ಅಂಶ ಹೊಂದಿರುತ್ತದೆ ಎಂದು ತಜ್ಞರು ಹೇಳುತ್ತಾರೆ, ನೈಸರ್ಗಿಕ ಸಕ್ಕರೆ ಫ್ರಕ್ಟೋಸ್ ಮತ್ತು ಫೈಬರ್ ನಿಂದ ಆಗಿರುತ್ತದೆ. ತಿಂದ ನಂತರ ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿ ಅಸಮತೋಲಿತ ದ್ರವ ಮಟ್ಟವನ್ನು ಉಂಟುಮಾಡುತ್ತದೆ ಮತ್ತು ಜೀರ್ಣಕಾರಿ ರಸವನ್ನು ದುರ್ಬಲಗೊಳಿಸುತ್ತದೆ. ಈ ಕಾರಣದಿಂದಾಗಿ, ಸೇವಿಸಿದ ಆಹಾರ ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಲ್ಲಂಗಡಿಯಲ್ಲಿರುವ ಅಂಶಗಳು ದೇಹದ ಕರುಳಿನಲ್ಲಿರುವ ಸೂಕ್ಷ್ಮಜೀವಿಗಳನ್ನು ಹರಡಲು ಸಹಾಯ ಮಾಡುತ್ತದೆ ಮತ್ತು ಜಠರ, ಕಳ್ಳು ಪ್ರದೇಶದ ಮೇಲೆ ಪರಿಣಾಮ ಬೀರುತ್ತವೆ.


ಇದನ್ನೂ ಓದಿ : ಹಲ್ಲುಜ್ಜುವುದು ಗೊತ್ತು.! ಸರಿಯಾಗಿ ಹಲ್ಲುಜ್ಜುವುದು ಹೇಗೆ ಗೊತ್ತಾ? 


ತಜ್ಞರ ಪ್ರಕಾರ, ಕಲುಷಿತ ಮತ್ತು ಸೋಂಕಿ(Virus)ಗೆ ಒಳಗಾದ ಯಾವುದೇ ಹಣ್ಣುಗಳನ್ನು ಸೇವಿಸುವುದರಿಂದ ಕಾಲರಾ ಉಂಟಾಗುತ್ತದೆ. ಆದರೆ ಕಲ್ಲಂಗಡಿ ಸೇವನೆ ನಂತರ ನೀರು ಕುಡಿಯುವುದರಿಂದ ಕಾಲರಾ ಅಥವಾ ಹೊಟ್ಟೆಯ ತೊಂದರೆಗಳ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಆದ್ರೆ, ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದರೆ, ಅತಿಸಾರ ಮತ್ತು ವಾಂತಿಯಂತಹ ಲಕ್ಷಣಗಳನ್ನು ಕಾಣಬಹುದು. ಆದ್ದರಿಂದ, ಯಾವುದೇ ಹಣ್ಣುಗಳನ್ನು ಸೇವಿಸಿದ ನಂತರವೇ ಸ್ವಲ್ಪ ಸಮಯದ ನಂತರ ನೀರನ್ನು ಸೇವಿಸುವುದು ಒಳ್ಳೆಯದು.


ಇದನ್ನೂ ಓದಿ : Hair Care Tips: ಈ ತರಕಾರಿಯ ಸಿಪ್ಪೆಯಿಂದ ದೂರವಾಗುತ್ತೆ ನಿಮ್ಮ ಬಿಳಿಕೂದಲಿನ ಸಮಸ್ಯೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.