Mucormycosis Causes: ಈ ಔಷಧಿಯ ಓವರ್ ಡೋಸ್ ಕೂಡ Black Fungus ಹರಡುವಿಕೆಗೆ ಕಾರಣವಂತೆ? ನೀವೂ ತೆಗೆದುಕೊಳ್ಳುತ್ತಿಲ್ಲ ತಾನೇ?

Mucormycosis Causes: ಜಿಂಕ್ ಸಪ್ಲಿಮೆಂಟ್ ಹಾಗೂ ಐರನ್ ಸಪ್ಲಿಮೆಂಟ್ ಗಳ ಹೆಚ್ಚಿನ ಬಳಕೆ ಕೂಡ ಬ್ಲಾಕ್ ಫಂಗಸ್ ಹರಡುವಿಕೆಯ ಒಂದು ಕಾರಣ ಎಂದು ತಜ್ನರು ಹೇಳುತ್ತಿದ್ದಾರೆ. ಇದರ ಜೊತೆಗೆ ಈ ಕುರಿತು ಹೆಚ್ಚಿನ ಸಂಶೋಧನೆ ನಡೆಸುವ ಅಗತ್ಯತೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

Written by - Nitin Tabib | Last Updated : May 25, 2021, 04:30 PM IST
  • ಬ್ಲಾಕ್ ಫಂಗಸ್ ಹಿಂದೆ ಕೇವಲ ಸ್ಟೆರಾಯಿಡ್ ಗಳು ಮಾತ್ರ ಕಾರಣವಲ್ಲ
  • ಜಿಂಕ್-ಐರನ್ ಗಳೂ ಕೂಡ ಕಾರಣವಿರಬಹುದು
  • ಏಕೆಂದರೆ ಜಿಂಕ್ ಇಲ್ಲದೆ ಈ ಫಂಗಸ್ ಬದುಕಲು ಸಾಧ್ಯವಿಲ್ಲ ಎನ್ನುತ್ತದೆ ಸಂಶೋಧನೆ.
Mucormycosis Causes: ಈ ಔಷಧಿಯ ಓವರ್ ಡೋಸ್ ಕೂಡ Black Fungus ಹರಡುವಿಕೆಗೆ ಕಾರಣವಂತೆ? ನೀವೂ ತೆಗೆದುಕೊಳ್ಳುತ್ತಿಲ್ಲ ತಾನೇ? title=
Mucormycosis Causes(File Photo)

ನವದೆಹಲಿ: Mucormycosis Causes - ಕಳೆದ ಕೆಲ ದಿನಗಳಿಂದ ಅಪಾಯಕಾರಿ ಸಾಬೀತಾಗುತ್ತಿರುವ ಬ್ಲಾಕ್ ಫಂಗಸ್ ಅಥವಾ ಮ್ಯೂಕರ್ ಮೈಕೊಸಿಸ್ ಸೋಂಕಿನ ಕುರಿತು ಹೊಸ ಸಂಗತಿಯೊಂದು ಬೆಳಕಿಗೆ ಬಂದಿದೆ. ಇದುವರೆಗೆ ಡಯಾಬಿಟಿಸ್ ಇರುವ ರೋಗಿಗಳಲ್ಲಿ ಈ ಸೋಂಕು ಹೆಚ್ಚಿಗೆ ಕಾಣಿಸಿಕೊಳ್ಳುತ್ತಿದೆ ಹಾಗೂ ದೀರ್ಘಾವಧಿಯವರೆಗೆ ಸ್ಟೆರಾಯಿಡ್ ಬಳಸುವವರಲ್ಲಿಯೂ ಕೂಡ ಇದು ಹೆಚ್ಚಿಗೆ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಇದೀಗ ವೈದ್ಯರು ಇದರ ಹಿಂದೆ ಇಮ್ಯೂನಿಟಿ ಹೆಚ್ಚಿಸುವ ಜಿಂಕ್ ಸುಪ್ಪ್ಲಿಮೆಂಟ್ಸ್ ಹಾಗೂ ಐರನ್ ಮಾತ್ರೆಗಳು ಕೂಡ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇಮ್ಯೂನಿಟಿ ಬೂಸ್ಟರ್ ಗಳಿಗೆ ಸಂಬಂಧಿಸದಂತೆ ಸಂಶೋಧನೆ ಮುಂದುವರೆದಿದೆ 
ಬ್ಲಾಕ್ ಫಂಗಸ್ ಹರಡುವಿಕೆಯಲ್ಲಿ ಇಮ್ಯುನಿಟಿ ಬೂಸ್ಟರ್ ಗಳ ಪಾತ್ರ ಎಷ್ಟು ಈ ಕುರಿತು ಬಾಂದ್ರಾನಲ್ಲಿರುವ ಲೀಲಾವತಿ ಆಸ್ಪತ್ರೆಯಲ್ಲಿನ ಹಿರಿಯ ಎಂಡೊಕ್ರೈನಾಲಾಜಿಸ್ಟ್ ಶಶಾಂಕ್ ಜೋಷಿ ಸಂಶೋಧನಾ ಪತ್ರ ಸಿದ್ಧಪಡಿಸುತ್ತಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವೆಬ್ ಸೈಟ್ ನಲ್ಲಿ ಪ್ರಕಟಗೊಂಡ  ಅವರ ಹೇಳಿಕೆಯ ಪ್ರಕಾರ 'ಈ ರೋಗದ ಹಿಂದೆ ಅತಿಯಾದ ಸ್ಟೆರಾಯಿಡ್ ಸೇವನೆ ಹಾಗೂ ಡಯಾಬಿಟಿಸ್ ಗಳೆ ಪ್ರಮುಖ ಕಾರಣಗಳಾಗಿವೆ. ಆದರೆ, ಕಳೆದ ಎರಡು ದಿನಗಳಿಂದ ಮೆಡಿಕಲ್ ಕಮ್ಯೂನಿಟಿಯಲ್ಲಿ ಭಾರತೀಯರ ಮೂಲಕ ಜಿಂಕ್ ಸಪ್ಲಿಮೆಂಟ್ಸ್ ಹಾಗೂ ಐರನ್ ಬ್ಯಾಬ್ಲೆಟ್ ಗಳ ಅತಿಯಾದ ಬಳಕೆಯ ಮೇಲೆ ಹೆಚ್ಚು ಚರ್ಚೆ ನಡೆಯುತ್ತಿದೆ' ಎಂದಿದ್ದಾರೆ. 

ಜಿಂಕ್ ಇಲ್ಲದೆ ಫಂಗಸ್ ಬದುಕಲು ಸಾಧ್ಯವಿಲ್ಲ
ಜಿಂಕ್ ಹಾಗೂ ಫಂಗಸ್ ನ ಸಂಬಂಧದ ಕುರಿತು ಹಲವು ವರ್ಷಗಳಿಂದ ಸಂಶೋಧನೆ ನಡೆಯುತ್ತಿವೆ. ಈ ಸಂಶೋಧನೆಗಳು ಜಿಂಕ್ ಇಲ್ಲದೆ ಫಂಗಸ್ ಬದುಕಲು ಸಾಧ್ಯವಿಲ್ಲ ಎನ್ನುತ್ತವೆ. ಇದಲ್ಲದೆ ಜಿಂಕ್ ದೇಹದಲ್ಲಿ ಫಂಗಸ್ ಬೆಳವಣಿಗೆಗೂ ಕೂಡ ಕಾರಣ ಎನ್ನಲಾಗುತ್ತಿದೆ. ಏಕೆಂದರೆ, ಕಳೆದ ವರ್ಷದಿಂದ ಮಹಾಮಾರಿ ಆರಂಭವಾದಾಗಿನಿಂದಲೇ ಭಾರತೀಯ ಜನರು ಅತಿಯಾದ ಪ್ರಮಾಣದಲ್ಲಿ ಜಿಂಕ್ ಸೇವಿಸುತ್ತಿದ್ದಾರೆ. ಹೀಗಾಗಿ ಹಳೆ ಸಂಶೋಧನೆಗಳ ಕಾರಣ ನೀಡಿ ವೈದ್ಯರು, ಈ ಕುರಿತು ಹೆಚ್ಚಿನ ಸಂಶೋಧನೆ ನಡೆಸುವ ಅಗತ್ಯತೆಯನ್ನು ಒತ್ತಿ ಹೇಳುತ್ತಿದ್ದಾರೆ. ಇದಲ್ಲದೆ ಅವರು ಮ್ಯೂಕರ್ ಮೈಕೊಸಿಸ್ ಸ್ಫೋಟದ ಹಿಂದಿನ ಕಾರಣಗಳನ್ನು ಅಧ್ಯಯನ ನಡೆಸುವಂತೆ ಅವರು ICMR ಅನ್ನು ಕೋರಿದ್ದಾರೆ. ಇದೊಂದು ಗಂಭೀರ ಸೋಂಕಿನ ಇನ್ಫೆಕ್ಷನ್ ಆಗಿದ್ದು, ಇದು ಮ್ಯೂಕರ್ ಮಾಯಿಸಿಟ್ಸ್ ಮಾಡೆಲ್ ಗಳ ಕಾರಣ ಆಗುತ್ತಿದೆ. 

ಇದನ್ನೂ ಓದಿ-ಹಲ್ಲುಜ್ಜುವುದು ಗೊತ್ತು.! ಸರಿಯಾಗಿ ಹಲ್ಲುಜ್ಜುವುದು ಹೇಗೆ ಗೊತ್ತಾ?

ವಿಶ್ವದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ಭಾರತದಲ್ಲಿವೆ
ವಿಶ್ವದಲ್ಲಿಯೇ ಮ್ಯೂಕರ್ ಮೈಕೊಸಿಸ್ ನ ಅತಿಯಾದ ಪ್ರಕರಣಗಳು ಭಾರತದಲ್ಲಿವೆ. ಕೊರೊನಾ ಪ್ರಕೋಪ ಉಂಟಾಗುವ ಮೊದಲೂ ಕೂಡ ವಿಶ್ವಾದ್ಯಂತ ಸುಮಾರು 70 ಪ್ರಕರಣಗಳಿದ್ದವು. ಆದರೆ, ಕಳೆದ ಒಂದೂವರೆ ತಿಂಗಳಿನಲ್ಲಿ ಸುಮಾರು 8000 ಪ್ರಕರಣಗಳು ಬೆಳಕಿಗೆ ಬಂದ ಕಾರಣ ಹಾಹಾಕಾರ ಸೃಷ್ಟಿಯಾಗಿದೆ. ಈ ಸೋಂಕು ತುಂಬಾ ಅಪಾಯಕಾರಿಯಾಗಿರುವ ಕಾರಣ ಇದರ ಮೇಲೆ ಹೆಚ್ಚುವರಿ ರೀಸರ್ಚ್ ನಡೆಸುವ ಅವಶ್ಯಕತೆ ಇದೆ. 

ಇದನ್ನೂ ಓದಿ-Hair Care Tips: ಈ ತರಕಾರಿಯ ಸಿಪ್ಪೆಯಿಂದ ದೂರವಾಗುತ್ತೆ ನಿಮ್ಮ ಬಿಳಿಕೂದಲಿನ ಸಮಸ್ಯೆ

ಹೆಚ್ಚು ಔಷಧಿ ಸೇವನೆ ಇದರ ಹಿಂದಿನ ಕಾರಣವೇನು?
ಪಶ್ಚಿಮದ ದೇಶಗಳಲ್ಲಿ ಕೊವಿಡ್ -19 ಸೋಂಕಿನ ರೋಗಿಗಳಲ್ಲಿ ಜ್ವರವನ್ನು ನಿಯಂತ್ರಿಸಲು ಸಾಮಾನ್ಯವಾಗಿ ಪ್ಯಾರಾಸಿಟಾಮಲ್ ಬಳಕೆಯಾಗುತ್ತದೆ. ಆದರೆ, ಭಾರತದಲ್ಲಿ ಮೃದು ಲಕ್ಷಣಗಳಿರುವ ಕೊವಿಡ್ -19 ರೋಗಿಗಳಿಗೂ ಕೂಡ 5 ರಿಂದ 7 ಔಷಧಿಗಳನ್ನು ನೀಡಲಾಗುತ್ತಿದೆ. ಇವುಗಳಲ್ಲಿ ವಿಟಮಿನ್ ಸಪ್ಲಿಮೆಂಟ್ ಹಾಗೂ ಆಂಟಿಬಯೋಟಿಕ್ ಗಳು ಶಾಮೀಲಾಗಿವೆ. ಈ ಕುರಿತು ಮಾತನಾಡುವ ಕೊಚ್ಚಿ ವೈದ್ಯ ರಾಜೀವ್ ಜಯದೇವನ್, ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ನಮಗೆ ವೈರಸ್ ಕುರಿತು ಹೆಚ್ಚಿನ ಮಾಹಿತಿ ಇರಲಿಲ್ಲ. ಹೀಗಾಗಿ ಔಷಧಿಗಳ ಹಲವು ರೀತಿಯ ಕಾಂಬಿನೇಶನ್ ಗಳನ್ನು ರೋಗಿಗಳಿಗೆ ನೀಡಲಾಗಿದೆ. ಆದರೆ, ಬ್ಲಾಕ್ ಫಂಗಸ್ ಸಮಸ್ಯೆ ಕೇವಲ ಭಾರತದಲ್ಲಿ ಮಾತ್ರ ಹೆಚ್ಚಾಗಿ ಕಾಣಿಸುತ್ತಿದೆ. ಹೀಗಾಗಿ ಇದರ ಹಿಂದೆ ಇಂತಹ ಹಲವು ಗುಪ್ತ ಕಾರಣಗಳು ಅಡಗಿದ್ದು, ಅವು ಸೋಂಕನ್ನು ಹೆಚ್ಚಿಸುತ್ತಿವೆ ಎಂದಿದ್ದಾರೆ.

ಇದನ್ನೂ ಓದಿ- Desi Ghee: ಮಾರುಕಟ್ಟೆಯಲ್ಲಿ ಸಿಗುವ ದೇಸಿ ತುಪ್ಪ ಶುದ್ಧವಾಗಿದೆಯೇ? ಈ ರೀತಿ ಪರೀಕ್ಷಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News