ಹಲ್ಲುಜ್ಜುವುದು ಗೊತ್ತು.! ಸರಿಯಾಗಿ ಹಲ್ಲುಜ್ಜುವುದು ಹೇಗೆ ಗೊತ್ತಾ?

ಬ್ಲ್ಯಾಕ್ ಫಂಗಸ್ ದಾಂಗುಡಿ ಇಡುತ್ತಿರುವ ಈ ದಿನಗಳಲ್ಲಿ ಬಾಯಿಯ ಸ್ವಚ್ಛತೆಗೆ ಅತ್ಯಂತ ಮಹತ್ವ ಬಂದಿದೆ. ಹಲ್ಲು, ವಸಡು, ನಾಲಗೆಯ ಸ್ವಚ್ಛತೆಗೆ ಅತ್ಯಂತ ಮಹತ್ವ ಬಂದಿದೆ. ಹೀಗಿರುವಾಗ ಒಟ್ಟಾರೆ ಹಲ್ಲುಜ್ಜಿದರೆ ಏನೆಲ್ಲಾ ಆಗಬಹುದು ಗೊತ್ತಾ..?

Written by - Ranjitha R K | Last Updated : May 25, 2021, 04:20 PM IST
  • ಬಹಳಷ್ಟು ಜನರಿಗೆ ಸರಿಯಾಗಿ ಹಲ್ಲುಜ್ಜುವುದು ಗೊತ್ತೇ ಇಲ್ಲ
  • ಸರಿಯಾಗಿ ಹಲ್ಲುಜ್ಜದ ಕಾರಣ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
  • ಸರಿಯಾಗಿ ಹಲ್ಲುಜ್ಜುವುದು ಹೇಗೆ ಎನ್ನುವುದು ಇಲ್ಲಿ ಹೇಳಲಾಗಿದೆ.
ಹಲ್ಲುಜ್ಜುವುದು ಗೊತ್ತು.! ಸರಿಯಾಗಿ ಹಲ್ಲುಜ್ಜುವುದು ಹೇಗೆ ಗೊತ್ತಾ? title=
ಸರಿಯಾಗಿ ಹಲ್ಲುಜ್ಜದ ಕಾರಣ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. (file photo zeenews)

ಬೆಂಗಳೂರು : ಹಲ್ಲುವುದು ಹೇಗೆ..? ಇದು ಎಲ್ಲರಿಗೂ ಗೊತ್ತು.ಆದರೆ ಸರಿಯಾಗಿ ಹಲ್ಲುಜ್ಜುವುದು ಹೇಗೆ..? ಇದು ಮಾತ್ರ ಬಹಳಷ್ಟು ಜನರಿಗೆ ಗೊತ್ತಿಲ್ಲ. ಬಹಳಷ್ಟು ಜನ ಸರಿಯಾಗಿ ಹಲ್ಲುಜ್ಜುವುದು ಇಲ್ಲ. ಬ್ಲ್ಯಾಕ್ ಫಂಗಸ್ (Black fungus) ದಾಂಗುಡಿ ಇಡುತ್ತಿರುವ ಈ ದಿನಗಳಲ್ಲಿ ಬಾಯಿಯ ಸ್ವಚ್ಛತೆಗೆ ಅತ್ಯಂತ ಮಹತ್ವ ಬಂದಿದೆ. ಹಲ್ಲು, ವಸಡು, ನಾಲಗೆಯ ಸ್ವಚ್ಛತೆಗೆ ಅತ್ಯಂತ ಮಹತ್ವ ಬಂದಿದೆ. ಹೀಗಿರುವಾಗ ಒಟ್ಟಾರೆ ಹಲ್ಲುಜ್ಜಿದರೆ ಏನೆಲ್ಲಾ ಆಗಬಹುದು ಗೊತ್ತಾ..?

1. ಬಾಯಿ ದುರ್ನಾತ ಬೀರುತ್ತದೆ.
2. ಹಲ್ಲು ಹಳದಿ ಬಣ್ಣಕ್ಕೆ ತಿರುಗುತ್ತದೆ.
3. ಹಲ್ಲು ಹುಳುಕು ಹಿಡಿಯುತ್ತದೆ.
4. ಒಸಡು ದುರ್ಬಲವಾಗುತ್ತದೆ
5. ಹಲ್ಲುಗಳ ಎನಾಮಲ್ ಸವೆದು, ಹಲ್ಲು ದುರ್ಬಲವಾಗುತ್ತದೆ.
6. ಮುಖ್ಯವಾಗಿ ಆಹಾರ (Food) ಹೊಟ್ಟೆ ಪ್ರವೇಶಿಸುವ ದ್ವಾರವೇ ಬಾಯಿ. ಹಲ್ಲು ಸ್ವಚ್ಛವಾಗಿದ್ದರೆ, ಆರೋಗ್ಯವೂ (Health) ಚೆನ್ನಾಗಿರುತ್ತದೆ.

ಇದನ್ನೂ ಓದಿ : Hair Care Tips: ಈ ತರಕಾರಿಯ ಸಿಪ್ಪೆಯಿಂದ ದೂರವಾಗುತ್ತೆ ನಿಮ್ಮ ಬಿಳಿಕೂದಲಿನ ಸಮಸ್ಯೆ

ಹಾಗಾದರೆ, ಸರಿಯಾಗಿ ಹಲ್ಲುಜ್ಜುವುದು ಹೇಗೆ..?
ಸರಿಯಾಗಿ ಹಲ್ಲುಜ್ಜಿದರೆ ಆರೋಗ್ಯವೂ ಚೆನ್ನಾಗಿರುತ್ತದೆ. ತುಂಬಾ ಜನರಿಗೆ ಸರಿಯಾಗಿ ಹಲ್ಲುಜ್ಜಲು ಬರುವುದಿಲ್ಲ. ಹಾಗಾದಾರೆ ಸರಿಯಾಗಿ ಹಲ್ಲುಜ್ಜುವ ಕ್ರಮ ತಿಳಿಯಿರಿ.
1. ಹಲ್ಲುಜ್ಜುವ ಮೊದಲು ಬ್ರಶ್ ನ್ನು (tooth brush)  ಚೆನ್ನಾಗಿ ತೊಳೆಯಿರಿ. ಹಲ್ಲುಜ್ಜಲು ಬ್ರಶ್ ಬೇಕೆಂದೇನೂ ಇಲ್ಲ. ಬೇವಿನ ದಂಟಿನ ತುದಿಯನ್ನು ಜಜ್ಜಿ ಅದನ್ನು ಬ್ರಶ್ ತರಹ ಮಾಡಿ ಅದರಿಂದಲೂ ಹಲ್ಲುಜ್ಜಬಹುದು.
2. ಜಾಹೀರಾತಿನಲ್ಲಿ ತೋರಿಸುವಂತೆ ಬ್ರಶ್ ಪೂರ್ತಿ ಪೇಸ್ಟ್ ಹಾಕಬೇಕಾದ  ಅಗತ್ಯವೇನೂ ಇಲ್ಲ. ಒಂದು ಬಟಾಣಿ ಕಾಳಿನಷ್ಟು ಗಾತ್ರದ ಪೇಸ್ಟ್ (tooth paste) ನಮ್ಮೆಲ್ಲಾ ಹಲ್ಲುಗಳ ಸ್ವಚ್ಛತೆಗೆ ಸಾಕಾಗುತ್ತದೆ.
3. ಯಾವ ಗಾತ್ರದ ಬ್ರಶ್ ಬೇಕು ಎಂಬುದನ್ನೂ ನಿರ್ಧರಿಸಿ. ನಿಮ್ಮ ಬಾಯಿ ಸ್ವಲ್ಪ ದೊಡ್ಡದಿದ್ದರೆ ಸ್ವಲ್ಪ ದೊಡ್ಡ ಸೈಜಿನ ಬ್ರಶ್ ತೆಗೆದುಕೊಳ್ಳಿ. ಸಣ್ಣದಿದ್ದರೆ ಸಣ್ಣ ಬ್ರಶ್ ಬಳಸಬಹುದು.
4. ನೆನಪಿಟ್ಟುಕೊಳ್ಳಿ. ಪೇಸ್ಟ್ ನಿಮ್ಮ ಹಲ್ಲನ್ನು ಸ್ವಚ್ಚ ಮಾಡುವುದಿಲ್ಲ. ಹಲ್ಲನ್ನು ನೀವೇ  ಉಜ್ಜಿ ಸ್ವಚ್ಛಗೊಳಿಸಬೇಕಾಗುತ್ತದೆ. ಪೇಸ್ಟ್ ಬಾಯಿಗೆ ಫ್ರೆಶ್ನೆಸ್ ನೀಡುತ್ತದೆ, ಅಷ್ಟೇ.

ಇದನ್ನೂ ಓದಿ : Desi Ghee: ಮಾರುಕಟ್ಟೆಯಲ್ಲಿ ಸಿಗುವ ದೇಸಿ ತುಪ್ಪ ಶುದ್ಧವಾಗಿದೆಯೇ? ಈ ರೀತಿ ಪರೀಕ್ಷಿಸಿ

5. ಮೊದಲು ಪೇಸ್ಟ್ ಹಾಕಿದ ಬ್ರಶ್ ಎಲ್ಲಾ ಹಲ್ಲುಗಳಿಗೂ ಪೇಸ್ಟ್ ಮಾಡಿ. 
6. ಹಲ್ಲನ್ನು ಮೇಲಿಂದ ಕೆಳಗೆ, ಕೆಳಗಿಂದ ಮೇಲೆ ವಿಧಾನದಿಂದ ಬ್ರಶ್ ಮಾಡಿ. ಅಂದರೆ ಅಡ್ಡ ಬ್ರಶ್ ಅಲ್ಲ, ನೇರ ಬ್ರಶ್ ಮಾಡಿ
7. ಹಲ್ಲಿನ ಮುಂಬಾಗ ಅಷ್ಟೇ ಅಲ್ಲ. ಹಲ್ಲಿನ ಒಳಭಾಗವನ್ನೂ ಕ್ಲೀನ್ ಮಾಡಿ. 
8. ಹಲ್ಲನ್ನು ಒಂದೇ ಭಾಗದಲ್ಲಿ ತಿಕ್ಕಿ ತಿಕ್ಕಿ ಉಜ್ಜುವುದು ಸರಿಯಲ್ಲ.  ಇದರಿಂದ ಹಲ್ಲಿನ  ಎನಾಮಲ್ ಸವೆಯುತ್ತದೆ.
9. 2-3 ನಿಮಿಷ ಹಲ್ಲುಜ್ಜಿದರೆ ಸಾಕು. ಎಲ್ಲಾ ಹಲ್ಲುಗಳನ್ನು ಚೆನ್ನಾಗಿ ಉಜ್ಜಿ. 
10. ಕನ್ನಡಿ (Mirror) ಮುಂದಿಟ್ಟುಕೊಂಡು ಉಜ್ಜಿದರೆ ಇನ್ನೂ ಒಳ್ಳೆಯದು. ಎಲ್ಲಾ ಹಲ್ಲುಗಳನ್ನು ಉಜ್ಜುವುದು ಬಹಳ ಸುಲಭವಾಗುತ್ತದೆ. 
11. ಹಲ್ಲುಜ್ಜಿದ ಮೇಲೆ ಒಂದು ಕಪ್ ನೀರು (water) ಬಾಯಲ್ಲಿ ಹಾಕಿಕೊಂಡು ಚೆನ್ನಾಗಿ ತಿರುಗಿಸಿ ಮುಕ್ಕಳಿಸಿ. ಹೀಗೆ ಮೂರು ನಾಲ್ಕು ಸಲ ಮಾಡಿ. ಬಾಯಲ್ಲಿ ಪೇಸ್ಟ್ ಅಂಶ ನಿವಾರಣೆಯಾಗುತ್ತದೆ. 

ಇದನ್ನೂ ಓದಿ : ಕರೋನಾ ಕಾಲದಲ್ಲಿ ತರಕಾರಿ ಖರೀದಿಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ.!

12. ಹಲ್ಲುಜ್ಜುವ ಜೊತೆಗೆ ನಾಲಗೆ ಕ್ಲೀನ್ (Tongue cleaning) ಮಾಡಿ. ನಾಲಗೆ ಉಜ್ಜಲು ಟಂಗ್ ಕ್ಲೀನರ್ ಬಳಕೆ ಮಾಡಿ. 
13. ದಿನಕ್ಕೆರಡು ಸಲ ಹಲ್ಲುಜ್ಜುವುದು ಉತ್ತಮ
14.  ಉಪ್ಪು ನೀರಿನಿಂದ (Salt water) ಬಾಯಿ ತೊಳೆದರೆ ಬಾಯಿ ಬೇಗ ಸ್ವಚ್ಛವಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News