ಬೆಂಗಳೂರು: ಈ ಫಾಸ್ಟ್ ಲೈಫ್‌ನಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ರೀತಿಯ ಒತ್ತಡ ಇದ್ದೇ ಇರುತ್ತದೆ. ಆದರೆ, ನಾವು ಒತ್ತಡವನ್ನು ಕಂಟ್ರೋಲ್ ಮಾಡದಿದ್ದರೆ ಅದು ನಮ್ಮ ಪ್ರಾಣಕ್ಕೆ ಅಪಾಯವನ್ನು ತಂದೊಡ್ಡಬಹುದು. ಒತ್ತಡವನ್ನು ಕಡಿಮೆ ಮಾಡಲು ಧ್ಯಾನ, ಯೋಗ, ಪ್ರಾಣಾಯಾಮ ಅತ್ಯುತ್ತಮ ಮಾರ್ಗಗಳು. ಇದಲ್ಲದೆ, ಆಯುರ್ವೇದದಲ್ಲಿಯೂ ಕೂಡ  ಒತ್ತಡದ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡಬಲ್ಲ ಕೆಲವು ಪರಿಹಾರಗಳನ್ನು ನೀಡಲಾಗಿದೆ. 


COMMERCIAL BREAK
SCROLL TO CONTINUE READING

ಆಯುರ್ವೇದ ತಜ್ಞರ ಪ್ರಕಾರ, ಆಯುರ್ವೇದ ಗಿಡಮೂಲಿಕೆಗಳು, ತೈಲಗಳು ಸಹ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆಯುರ್ವೇದದ ಈ ಪರಿಹಾರಗಳನ್ನು ಅಳವಡಿಸಿಕೊಳ್ಳುವುದರಿಂದ ಒತ್ತಡವನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದು ಎಂದು ಹೇಳಲಾಗುತ್ತದೆ. 


ಒತ್ತಡ ನಿರ್ವಹಣೆಗೆ ಬೆಸ್ಟ್ ಆಯುರ್ವೇದ ಪರಿಹಾರಗಳು: 
ಅಶ್ವಗಂಧ: 

ಆಯುರ್ವೇದ ತಜ್ಞರ ಪ್ರಕಾರ, ಅಶ್ವಗಂಧವು ಒತ್ತಡವನ್ನು ಕಡಿಮೆ ಮಾಡಬಲ್ಲ ಗಿಡ ಮೂಲಿಕೆ ಆಗಿದೆ. ಇದರ ಪುಡಿಯನ್ನು ಬಿಸಿನೀರಿನೊಂದಿಗೆ ಮಿಕ್ಸ್ ಮಾಡಿ ಕುಡಿಯುವುದು ತುಂಬಾ ಪ್ರಯೋಜನಕಾರಿ ಆಗಿದೆ. 


ಬ್ರಾಹ್ಮಿ:
ಬ್ರಾಹ್ಮಿ ಟೀ ಸೇವನೆಯೂ ಕೂಡ ಒತ್ತಡವನ್ನು ನಿರ್ವಹಿಸಲು ಅತ್ಯುತ್ತಮ ಮನೆಮದ್ದು. ವಾಸ್ತವವಾಗಿ, ಬ್ರಾಹ್ಮಿಯಲ್ಲಿ ಮಾನಸನ್ನು ಶಾಂತಗೊಳಿಸಬಲ್ಲ ಅಂಶಗಳು ಅಡಕವಾಗಿವೆ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- ಈ ಆರೋಗ್ಯ ಸಮಸ್ಯೆಗಳಿಗೆ ಅರಿಶಿನದ ಹಾಲೇ ಅತ್ಯುತ್ತಮ ಮನೆಮದ್ದು


ಜಟಾಮಾನ್ಸಿ: 
ಜಟಾಮಾನ್ಸಿ ಅನ್ನು ಪುಡಿ ಮಾಡಿ ಬಿಸಿನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಒತ್ತಡ ಕಡಿಮೆ ಆಗುತ್ತದೆ ಎನ್ನಲಾಗುವುದು. 


ಸಫೇದ್ ಮುಸ್ಲಿ/ ದ್ರವಂತಿ:
ಸಫೇದ್ ಮುಸ್ಲಿ ಅಥವಾ ದ್ರವಂತಿಯೂ ಸಹ ಒತ್ತಡವನ್ನು ಕಡಿಮೆ ಮಾಡಿ ದೈಹಿಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಪ್ರಯೋಜನಕಾರಿ ಆಗಿದೆ. 


ಇದನ್ನೂ ಓದಿ- Hing Water : ಚಿಟಿಕೆ ಇಂಗು ಬೆರೆಸಿ ನೀರು ಕುಡಿದರೆ ಈ ಮಾರಕ ಕಾಯಿಲೆ ಕೂಡ ಗುಣವಾಗುತ್ತೆ!


ತುಳಸಿ: 
ತುಳಸಿ ಉತ್ತಮ ಆಯುರ್ವೇದ ಸಸ್ಯ ಎಂದು ನಿಮಗೆ ತಿಳಿದೇ ಇದೆ. ತುಳಸಿ ಚಹಾ ಕುಡಿಯುವುದರಿಂದ ಒತ್ತಡ ಕಡಿಮೆ ಆಗಿ, ಮಾನಸಿಕ ಶಾಂತಿ ಲಭಿಸುತ್ತದೆ ಎಂದು ಹೇಳಲಾಗುತ್ತದೆ.


ಸಾಸಿವೆ ಎಣ್ಣೆ: 
ಸಾಸಿವೆ ಎಣ್ಣೆ ಬಳಕೆಯಿಂದಲೂ ಒತ್ತಡವನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದು ಎಂದು ಸಲಹೆ ನೀಡಲಾಗುತ್ತದೆ. 
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.