ಕರೋನಾದಿಂದ ಬಚಾವಾಗಲು ಈ ಐದು ವಸ್ತುಗಳನ್ನು ತಕ್ಷಣದಿಂದಲೇ ಬಳಸಲು ಆರಂಭಿಸಿ
ವೈದ್ಯರ ಪ್ರಕಾರ, ದೇಹದ ರೋಗನಿರೋಧಕ ಶಕ್ತಿಯನ್ನು ಕೇವಲ ಒಂದು ದಿನದಲ್ಲಿ ಬಲಪಡಿಸಲು ಸಾಧ್ಯವಿಲ್ಲ. ಇದಕ್ಕಾಗಿ ಜೀವನಶೈಲಿಯನ್ನು ಸುಧಾರಿಸಿಕೊಳ್ಳಬೇಕು.
ನವದೆಹಲಿ : Ayurvedic Tips Against Coronavirus: ಕೊರೊನಾವೈರಸ್‌ನ (Coronavirus) ಮೂರನೇ ಅಲೆಯು ದೇಶಾದ್ಯಂತ ಆತಂಕವನ್ನು ಸೃಷ್ಟಿ ಮಾಡಿದೆ. ಹಾಗಂತ ಮೂರನೇಯ ಅಲೆಗೆ ಎಲ್ಲವೂ ಕೊನೆಯಾಗುತ್ತದೆ ಎಂದು ನಿಟ್ಟುಸಿರು ಬಿಡುವ ಹಾಗೆಯೂ ಇಲ್ಲ. ಈ ಪರಿಸ್ಥಿತಿ ಎಲ್ಲಿಯವರೆಗೆ ಹೀಗೆ ಇರಲಿದೆ ಎನ್ನುವುದಕ್ಕೆ ಇನ್ನೂ ಉತ್ತರ ಅಸ್ಪಷ್ಟ. ಇಂಥಹ ಸನ್ನಿವೇಶದಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು (Immunity power) ಹೆಚ್ಚಿಸಿಕೊಳ್ಳುವುದೇ ರಕ್ಷಣೆಗೆ ಇರುವ ಮಾರ್ಗವಾಗಿದೆ.
ವೈದ್ಯರ ಪ್ರಕಾರ, ದೇಹದ ರೋಗನಿರೋಧಕ ಶಕ್ತಿಯನ್ನು (immunity power) ಕೇವಲ ಒಂದು ದಿನದಲ್ಲಿ ಬಲಪಡಿಸಲು ಸಾಧ್ಯವಿಲ್ಲ. ಇದಕ್ಕಾಗಿ ಜೀವನಶೈಲಿಯನ್ನು (lifestyle) ಸುಧಾರಿಸಿಕೊಳ್ಳಬೇಕು. ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಯೋಗ (Yoga) ಮತ್ತು ವ್ಯಾಯಾಮವನ್ನು ಅಳವಡಿಸಿಕೊಳ್ಳಬೇಕು.
ಇದನ್ನೂ ಓದಿ : ಪನೀರ್ ಅನ್ನು ಹೀಗೆ ತಿನ್ನುವುದರಿಂದ ಹೆಚ್ಚು ಪ್ರಯೋಜನ ಪಡೆಯುವಿರಿ
ಬಿಸಿನೀರಿನೊಂದಿಗೆ ಚ್ಯವನ್ ಪ್ರಾಶ್ ಸೇವಿಸಿ :
ಚ್ಯವನಪ್ರಾಶ್ ಸೇವನೆಯು ಯಾವಾಗಲೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ತಯಾರಿಸಲು ವಿವಿಧ ರೀತಿಯ ಗಿಡಮೂಲಿಕೆಗಳನ್ನು ಬಳಸಲಾಗುತ್ತದೆ. ರಾತ್ರಿ ಮಲಗುವ ಮುನ್ನ ಚ್ಯವನಪ್ರಾಶ್ ಅನ್ನು ಅರಿಶಿನದ ಹಾಲಿನೊಂದಿಗೆ (Turmeric milk) ಸೇವಿಸಬಹುದು. ಇದಲ್ಲದೆ, ಚ್ಯವನಪ್ರಾಶ್ ಅನ್ನು ಬಿಸಿನೀರಿನೊಂದಿಗೆ ಬೆರೆಸಿ ಕುಡಿಯಬಹುದು. ದಿನಕ್ಕೆ ಎರಡರಿಂದ ಮೂರು ಬಾರಿ ಈ ರೀತಿ ಚ್ಯವನಪ್ರಾಶವನ್ನು ಸೇವಿಸಿದರೆ, ಬಹಳಷ್ಟು ಪ್ರಯೋಜನವಾಗಲಿದೆ.
ಹರ್ಬಲ್ ಚಹಾ :
ಇತ್ತೀಚಿನ ದಿನಗಳಲ್ಲಿ ಚಹಾ ಕುಡಿಯುವುದು ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ. ಆದರೆ ಚಹಾ ಎಲೆಗಳು ಕೆಫೀನ್ ಅನ್ನು ಹೊಂದಿರುತ್ತವೆ. ಇದು ದೇಹಕ್ಕೆ ಹಾನಿ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಚಹಾದ ಬದಲಿಗೆ, herbal tea ಬಳಸಿ. ಹರ್ಬಲ್ ಟೀಯಲ್ಲಿ ವಿವಿಧ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಬಳಸಲಾಗುತ್ತದೆ. ಇದು ಶೀತ ಮತ್ತು ಜ್ವರದಿಂದ ಪರಿಹಾರವನ್ನು ನೀಡುತ್ತದೆ.
ಇದನ್ನೂ ಓದಿ : Milk Powder Side Effects: ಆರೋಗ್ಯದ ಮೇಲೆ ಹಾಲಿನ ಪುಡಿ ಗಂಭೀರ ಹಾನಿ ಉಂಟುಮಾಡಬಹುದು, ಎಚ್ಚರ
ಸಂಜೆ ಅರಿಶಿನ ಹಾಲು :
ಅರಿಶಿನದಲ್ಲಿ ಅನೇಕ ಔಷಧೀಯ ಗುಣಗಳಿರುತ್ತವೆ (benefits of turmeric milk). ಯಾವುದೇ ರೀತಿಯ ಗಾಯದ ಸಂದರ್ಭದಲ್ಲಿ, ಹೆಚ್ಚಾಗಿ ಅರಿಶಿನ ಹಾಲು ಕುಡಿಯುವಂತೆ ಹಿರಿಯರು ಹೇಳುತ್ತಾರೆ. ಅರಶಿನ ಗಾಯವನ್ನು ಬೇಗನೆ ವಾಸಿ ಮಾಡುವ ಗುಣವನ್ನು ಹೊಂದಿರುತ್ತದೆ. ಅರಶಿನದಲ್ಲಿರುವ ಔಷಧೀಯ ಗುಣಗಳು, ದೇಹವನ್ನು ಪ್ರವೇಶಿಸಿದ ವೈರಸ್ (Virus) ಅನ್ನು ಕೊಲ್ಲಲು ಸಹಾಯ ಮಾಡುತ್ತವೆ. ಪ್ರತಿ ರಾತ್ರಿ ಒಂದು ಲೋಟ ಹಾಲಿಗೆ ಮತ್ತು ಒಂದು ಚಮಚ ಅರಿಶಿನವನ್ನು ಬೆರೆಸಿ ಕುಡಿದರೆ, ರೋಗನಿರೋಧಕ ಶಕ್ತಿ (immunity power) ಬಲಗೊಳ್ಳುತ್ತದೆ.
ಶ್ವಾಸಕೋಶವನ್ನು ಬಲಪಡಿಸಲು ಯೋಗಾಸನ :
ಯಾವುದೇ ವೈರಸ್ ಮೊದಲು ನಮ್ಮ ಶ್ವಾಸಕೋಶವನ್ನು ಆಕ್ರಮಿಸುತ್ತದೆ. ಇದು ದಾಳಿಗೊಳಗಾದ ತಕ್ಷಣ, ನಮ್ಮ ಉಸಿರಾಟದ ವ್ಯವಸ್ಥೆಯು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಆದುದರಿಂದ ಶ್ವಾಸಕೋಶವನ್ನು ಬಲಪಡಿಸಲು, ನಿಯಮಿತವಾಗಿ ಪ್ರಾಣಾಯಾಮ, ಕಪಾಲಭಾತಿ ಅಥವಾ ಭಸ್ತ್ರಿಕಾ ಪ್ರಾಣಾಯಾಮವನ್ನು ಮಾಡುವ ಅಭ್ಯಾಸವನ್ನು ಮಾಡಬೇಕು. ಈ ಯೋಗಾಸನಗಳಿಂದ ನಮ್ಮ ಶ್ವಾಸಕೋಶಗಳು ಸ್ವಚ್ಛವಾಗುತ್ತವೆ ಮತ್ತು ನಮ್ಮ ಉಸಿರಾಟದ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ : ಈ ಎಲೆಯನ್ನು ಬಳಸುವುದರಿಂದ ಪೂರ್ತಿಯಾಗಿ ಹೋಗಲಾಡಿಸಬಹುದು ಬಿಳಿ ಕೂದಲಿನ ಸಮಸ್ಯೆ
ಮೂಗಿಗೆ 2 ಹನಿ ಎಣ್ಣೆ ಅಥವಾ ತುಪ್ಪ :
ನಾಸ್ಯ ಚಿಕಿತ್ಸೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಒಂದು ಮಾರ್ಗವಾಗಿದೆ. ಇದರ ಮೂಲಕ, ತೆಂಗಿನ ಎಣ್ಣೆ(Coconut oil), ಎಳ್ಳು ಎಣ್ಣೆ ಅಥವಾ ತುಪ್ಪದ (ghee) ಕೆಲವು ಹನಿಗಳನ್ನು ಮೂಗಿಗೆ ಹಾಕಲಾಗುತ್ತದೆ. ಹೀಗೆ ಮಾಡುವುದರಿಂದ ಮೂಗಿನ ಮೂಲಕ ದೇಹವನ್ನು ಪ್ರವೇಶಿಸುವ ಕರೋನಾ ವೈರಸ್‌ಗಳನ್ನು (Coronavirus) ತಡೆಯಬಹುದು. ಮೂಗಿಗೆ 2 ಹನಿ ತುಪ್ಪ ಅಥವಾ ಎಣ್ಣೆ ಹಾಕಿದ ನಂತರ ಕೆಲವು ನಿಮಿಷಗಳ ಕಾಲ ಮಲಗಬೇಕು. ಸ್ನಾನ ಮಾಡುವ ಮೊದಲು ಅಥವಾ ಮನೆಯಿಂದ ಹೊರಡುವ ಮೊದಲು ಈ ಚಿಕಿತ್ಸೆಯನ್ನು ಮಾಡಬಹುದು. ಈ ಪರಿಹಾರವು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.