ಸೌತೆಕಾಯಿ ತಿನ್ನುವ ಮೊದಲು ಈ ವಿಷಯ ನಿಮಗೆ ತಿಳಿದಿರಲಿ
ಸೌತೆಕಾಯಿಯಲ್ಲಿ ಅತಿ ಕಡಿಮೆ ಪ್ರಮಾಣದ ಕ್ಯಾಲೊರಿ ಇರುತ್ತವೆ. ಕೆಲವರು ರಾತ್ರಿ ಹೊತ್ತು ಕಡಿಮೆ ಆಹಾರವನ್ನು ಸೇವಿಸುತ್ತಾರೆ. ಬದಲಾಗಿ ಹೆಚ್ಚು ಸೌತೆಕಾಯಿ ತಿನ್ನುತ್ತಾರೆ. ಹೀಗೆ ಮಾಡುವುದು ಸರಿಯಲ್ಲ.
ಬೆಂಗಳೂರು : ಬೇಸಿಗೆಯಲ್ಲಿ (Summer) ಸೌತೆಕಾಯಿ ತಿನ್ನುವುದನ್ನು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಸೌತೆಕಾಯಿ ಹೆಚ್ಚಿನ ಪ್ರಮಾಣದ ನೀರನ್ನು ಹೊಂದಿದ್ದು ಅದು ದೇಹ ಡಿಹೈಡ್ರೇಟ್ ಆಗದಂತೆ ತಡೆಯುತ್ತದೆ. ಸೌತೆಕಾಯಿ (Cucumber) ನಮ್ಮ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಸೌತೆಕಾಯಿಯಲ್ಲಿ ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿದೆ. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಗಳಿವೆ. ಸೌತೆಕಾಯಿ ತಿನ್ನುವುದರಿಂದ ನಮ್ಮ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ಆದರೆ ಈ ಪ್ರಯೋಜನಗಳು ನಮಗೆ ಸಿಗಬೇಕಾದರೆ ಸರಿಯಾದ ಸಮಯಕ್ಕೆ ಸೇವನೆ ಅಗತ್ಯ. ಯಾವ ಸಮಯದಲ್ಲಿ ಸೌತೆಕಾಯಿ ತಿನ್ನಬೇಕು, ತಿನ್ನಬಾರದು ಎಂಬ ಮಾಹಿತಿ ನಮಗೆ ತಿಳಿದಿರಬೇಕು.
ಸೌತೆಕಾಯಿ ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಹಾನಿಕಾರಕ :
ಸೌತೆಕಾಯಿಯಲ್ಲಿ (Cucumber) ಅತಿ ಕಡಿಮೆ ಪ್ರಮಾಣದ ಕ್ಯಾಲೊರಿ ಇರುತ್ತವೆ. ಕೆಲವರು ರಾತ್ರಿ ಹೊತ್ತು ಕಡಿಮೆ ಆಹಾರವನ್ನು (Food) ಸೇವಿಸುತ್ತಾರೆ. ಬದಲಾಗಿ ಹೆಚ್ಚು ಸೌತೆಕಾಯಿ ತಿನ್ನುತ್ತಾರೆ. ಹೀಗೆ ಮಾಡುವುದು ಸರಿಯಲ್ಲ. ರಾತ್ರಿ ಹೊತ್ತಿನಲ್ಲಿ ಸೌತೆಕಾಯಿ ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ನಿದ್ರಾಹೀನತೆ ಎದುರಾಗುತ್ತದೆ . ಅಲ್ಲದೆ, ನಿದ್ರೆಯ ಕೊರತೆಯಿಂದ, ಜೀರ್ಣಕ್ರಿಯೆಗೆ (Digestion) ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಇದನ್ನೂ ಓದಿ : Dry Grapes Benefits: ಒಣದ್ರಾಕ್ಷಿ ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಎಷ್ಟು ಗೊತ್ತಾ?
ನೀವು ಈ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು:
ರಾತ್ರಿ ವೇಳೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೌತೆಕಾಯಿ ಸೇವಿಸಿದರೆ, ಹೊಟ್ಟೆ ಉಬ್ಬರಿಸುವ ಸಮಸ್ಯೆ ಎದುರಾಗಬಹುದು. ಸೌತೆಕಾಯಿ ತಿನ್ನುವುದರಿಂದ ಗ್ಯಾಸ್ ಸಮಸ್ಯೆ (Acidity), ಅಜೀರ್ಣ ಸಮಸ್ಯೆಗಳೂ ಉಂಟಾಗಬಹುದು. ನಿಮಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ರಾತ್ರಿ ವೇಳೆ, ಸೌತೆಕಾಯಿ ತಿನ್ನಬೇಡಿ.
ಸೌತೆಕಾಯಿ ತಿನ್ನುವ ವಿಧಾನ ತಿಳಿಯಿರಿ :
ಸೌತೆಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು (Water) ಇರುತ್ತದೆ. ಆದ್ದರಿಂದ ಸೌತೆಕಾಯಿಯನ್ನು ಸೇವಿಸಿದ ಕೂಡಲೇ ಹೆಚ್ಚು ನೀರು ಕುಡಿಯಬೇಡಿ. ಸೌತೆಕಾಯಿಯನ್ನು ಚೆನ್ನಾಗಿ ತೊಳೆದು, ಸಿಪ್ಪೆ ಸುಲಿದು ಅದರ ಎರಡೂ ತುದಿಯನ್ನು ತೆಗೆದುಹಾಕಿ. ನಂತರ ತಿನ್ನಿ.
ಇದನ್ನೂ ಓದಿ : ಒಣಕೆಮ್ಮು ಟೆನ್ಶನ್ ಬಿಡಿ. ಟ್ರೈ ಮಾಡಿ ನೋಡಿ ಈ ಐದು ಮನೆಮದ್ದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.