Pain killer ತೆಗೆದುಕೊಳ್ಳುವ ಮುನ್ನಹುಷಾರು..ಒಂದು ಸಮಸ್ಯೆಯ ಬದಲು ಹತ್ತು ಸಮಸ್ಯೆ ಎದುರಾಗಬಹುದು
Pain Killer ತಕ್ಷಣಕ್ಕೆ ನೋವಿನಿಂದ ಪರಿಹಾರ ನೀಡಬಹುದು. ಆದರೆ , ಅದು ದೇಹದ ಇತರ ಅಂಗಾಂಗಗಳ ಮೇಲೆ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ.
ನವದೆಹಲಿ: ದೇಹದಲ್ಲಿ ಕಾಣಿಸಿಕೊಳ್ಳುವ ಸಣ್ಣಪುಟ್ಟ ನೋವಿಗೂ ನೋವುನಿವಾರಕ ಮಾತ್ರೆಗಳನ್ನು( Pain Killer) ತೆಗೆದುಕೊಳ್ಳುವುದು ಕೆಲವರಿಗೆ ರೂಢಿಯಾಗಿರುತ್ತದೆ. ಆದರೆ ಇದು ಎಷ್ಟು ಅಪಾಯಕಾರಿ ಎನ್ನುವುದು ನಿಮಗೆ ಗೊತ್ತಿದೆಯಾ ? ಈ ಮಾತ್ರೆಗಳು ತಕ್ಷಣಕ್ಕೆ ನೋವಿನಿಂದ ಪರಿಹಾರ ನೀಡಬಹುದು. ಆದರೆ , ಅದು ದೇಹದ ಇತರ ಅಂಗಾಂಗಗಳ ಮೇಲೆ ಅಡ್ಡ ಪರಿಣಾಮಗಳನ್ನು (Side Effects) ಉಂಟು ಮಾಡುತ್ತದೆ. ಬೇರೆ ಕಾಯಿಲೆಗಳಿಗೂ ಇದು ಎಡೆ ಮಾಡಿಕೊಡಬಹುದು. ಸಂಶೋಧನೆಯ ಪ್ರಕಾರ ಈ ಮಾತ್ರೆಗಳು ದೇಹದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ.
Pain Killer ಮಾತ್ರೆಗಳು ದೇಹದ ಇತರ ಅಂಗಗಳ ಮೇಲೆ ಅಡ್ಡ ಪರಿಣಾಮವನ್ನು ಉಂಟುಮಾಡುತ್ತದೆ. Pain Killer ಅಂದರೆ ಅದು ಕೇವಲ ಮಾತ್ರೆ ಮಾತ್ರ ಅಲ್ಲ, ಇಂಜೆಕ್ಷನ್, ಸಿರಪ್ ಕೂಡಾ ಆಗಿರಬಹುದು. ಇದು ಹೃದಯ (Heart) ಸಂಬಂಧ ಕಾಯಿಲೆಗಳು, ಕಿಡ್ನಿ,(Kidney) ಲಿವರ್ ವೈಫಲ್ಯದಂಥಹ ಸಮಸ್ಯೆಗಳಿಗೂ ಇದು ಕಾರಣವಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ Pain Killer ಬಳಸುವುದರಿಂದ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ.
ಪ್ಯಾರಸಿಟಮೊಲ್ (Paracetamol) :
ಇದು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಲಭ್ಯವಿರುತ್ತದೆ. ಅತಿ ಹೆಚ್ಚು ಬಳಕೆಯಾಗುವ ಔಷಧಿಯಲ್ಲಿ ಇದು ಒಂದು. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡರೆ ಅಲರ್ಜಿಯ (Allergy) ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ಲಿವರ್ ಗೆ ಸಂಬಂಧಿಸಿದ ಸಮಸ್ಯೆಗಳೂ ತಲೆದೋರಬಹುದು. ಹಾಗಾಗಿ ಯಾವುದೇ ಕಾರಣಕ್ಕೂ ಈ ಮಾತ್ರೆಯನ್ನು ವೈದ್ಯರ ಸಲಹೆ ಇಲ್ಲದೆ ಬಳಸುವುದು ಸೂಕ್ತವಲ್ಲ.
ಓಪಿಯಾಡ್ಸ್ (Opioids ) :
ಇದನ್ನು ಕ್ಯಾನ್ಸರ್ (Cancer) ಪೀಡಿತರಿಗೆ ನೀಡಲಾಗುತ್ತದೆ. ಕ್ಯಾನ್ಸರ್ ರೋಗಿಗಳ ನೋವನ್ನು ಕಡಿಮೆ ಮಾಡುವ ಸಲುವಾಗಿ ಈ ಔಷಧಿಯನ್ನು ನೀಡಲಾಗುತ್ತದೆ. ಇದನ್ನು ಲಾಂಗ್ ರನ್ Pain reliever ಆಗಿ ಬಳಸಲಾಗುತ್ತದೆ. ಈ ಔಷಧಿಯನ್ನು ಹೆಚ್ಚು ಸೇವಿಸುವುದರಿಂದ ಡಿಪ್ರೆಶನ್, ಯುರಿನ್ಇನ್ಫೆಕ್ಷನ್, ವಾಂತಿ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇನ್ನು Ibuprofenನಿಂದಲೂ ಹೊಟ್ಟೆಯ ಸಮಸ್ಯೆ, ಕಿಡ್ನಿ ಸಮಸ್ಯೆ , ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
NSAID:
ಬಹುತೇಕ ನೋವು ನಿವಾರಕ ಔಷಧಿಗಳಲ್ಲಿ Non-Steroidal Anti Inflammatory Drugs ಇರುತ್ತದೆ. ಇದನ್ನು ಜ್ವರ, ನೋವು ಇದ್ದಲ್ಲಿ ತೆಗೆದುಕೊಳ್ಳಲಾಗುತ್ತದೆ. ನೀವು ಔಷಧಿ ತೆಗೆದುಕೊಳ್ಳುವಾಗ ನೀವು ತೆಗೆದುಕೊಳ್ಳುವ ಔಷಧಿಯಲ್ಲಿ NSAID ಇದೆಯೋ, ಇಲ್ಲವೋ ಅನ್ನುವುದನ್ನು ಖಚಿತಪಡಿಸಿಕೊಳ್ಳಿ. ಇದರ ಸೇವನೆಯಿಂದ ಕಿಡ್ನಿ, ಹೃದಯ,ರಕ್ತ, ಲಿವರ್ ಇಂಫೆಕ್ಷನ್ ಕಾಣಿಸಿಕೊಳ್ಳಬಹುದು.
ಯಾವುದೇ ಔಷಧಿಯನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆಪಡೆದುಕೊಳ್ಳುವುದು ಉತ್ತಮ. ವೈದ್ಯರ ಸಲಹೆಯಿಲ್ಲದೆ ಔಷಧಿಗಳನ್ನು ಸೇವಿಸುವುದು ಯಾವತ್ತಿದ್ದರೂ ಅಪಾಯಕಾರಿ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.