ಜಸ್ಟ್ ಈ 2 ಗಂಟೆ ಏನನ್ನೂ ತಿನ್ನಬೇಡಿ: ಒಂದೇ ತಿಂಗಳಲ್ಲಿ ಸ್ಲಿಮ್ ಅಂಡ್ ಸ್ಮಾರ್ಟ್ ಆಗ್ತೀರಿ!
Belly Fat: ಬೊಜ್ಜು ಬಾರದಂತೆ ತಡೆಯಲು, ಬಂದಿರುವ ಬೊಜ್ಜನ್ನು ಕರಗಿಸಲು ನಾನಾ ರೀತಿಯ ಕಸರತ್ತು ಮಾಡಲಾಗುತ್ತಿದೆ. ಆದರೂ ಸಾಧ್ಯವಾಗುತ್ತಿಲ್ಲ. ವೈದ್ಯರು, ನ್ಯೂಟ್ರಿಷಿಯನ್ ಬಳಿ ಹೋಗಿ ಸಲಹೆ ಪಡೆದು ಬಂದವರಿಗೂ ಪ್ರಯೋಜನ ಆಗಿಲ್ಲ. ಆದ್ರೆ...
Weight Loss Tips: ಇತ್ತೀಚಿಗೆ ಜನರ ಅರೋಗ್ಯ ಸಮಸ್ಯೆ ರಾಕೆಟ್ ವೇಗದಲ್ಲಿ ಹೆಚ್ಚಾಗುತ್ತಿದೆ. ಹುಡುಕುತ್ತಾ ಹೋದ್ರೆ ಮೊದಲು ಸಿಗುವ ಕಾರಣವೇ ಒಬೆಸಿಟಿ (Obesity), ಅಂದ್ರೆ ಬೊಜ್ಜು ಅಥವಾ ಅಧಿಕ ತೂಕ. ಜಗತ್ತಿನ ಜಂಘಾಬಲವನ್ನೇ ಅಲುಗಾಡಿಸಿ ನಲುಗಿಸಿಟ್ಟಿರುವ ಬೊಜ್ಜನ್ನು ಕರಗಿಸುವುದು ಬಹಳ ದೊಡ್ಡ ಸವಾಲು. ಕೆಲವೊಮ್ಮೆ ಬಹಳ ದೊಡ್ಡ ಸಮಸ್ಯೆಗಳಿಗೂ ಕೆಲವೊಂದು ಸರಳ ಪರಿಹಾರ ಇರುತ್ತವೆ. ಇದು ಅಂಥದೇ ವಿಷಯ.
ಜಗತ್ತಿನಾದ್ಯಂತ ಪ್ರಸ್ತುತ ನೂರಕ್ಕೆ ಕನಿಷ್ಠ 70-80 ಜನರ ಅನಾರೋಗ್ಯಕ್ಕೆ ಕಾರಣವಾಗಿರುವ ಏಕೈಕ ಸಂಗತಿ ಬೊಜ್ಜು. ಬೊಜ್ಜು ಬಾರದಂತೆ ತಡೆಯಲು, ಬಂದಿರುವ ಬೊಜ್ಜನ್ನು ಕರಗಿಸಲು ನಾನಾ ರೀತಿಯ ಕಸರತ್ತು ಮಾಡಲಾಗುತ್ತಿದೆ. ಆದರೂ ಸಾಧ್ಯವಾಗುತ್ತಿಲ್ಲ. ವೈದ್ಯರು, ನ್ಯೂಟ್ರಿಷಿಯನ್ ಬಳಿ ಹೋಗಿ ಸಲಹೆ ಪಡೆದು ಬಂದವರಿಗೂ ಪ್ರಯೋಜನ ಆಗಿಲ್ಲ. ಆದ್ರೆ ಇಲ್ಲೊಂದು ಸಿಂಪಲ್ ತಂತ್ರ ಇದೆ. ಇದನ್ನು ಅಳವಡಿಸಿಕೊಂಡರೆ ಬೊಜ್ಜು ಕರಗಿ, ತೂಕ ಕಮ್ಮಿಯಾಗಿ, ಸ್ಲಿಮ್ ಆಗಿ, ಸ್ಮಾರ್ಟ್ ಆಗಿಯೂ ಕಾಣಬಹುದು.
ಬೊಜ್ಜು ಬರುವುದೇಕೆ?
ಬೊಜ್ಜನ್ನು ಕರಗಿಸುವ ಮುನ್ನ ನಮ್ಮ ದೇಹದಲ್ಲಿ ಬೊಜ್ಜು ಹೆಚ್ಚಾಗಲು ಕಾರಣಗಳೇನು ಎನ್ನುವುದನ್ನು ಪತ್ತೆ ಹಚ್ಚಬೇಕು. ಸಮಸ್ಯೆ ಗೊತ್ತಿಲ್ಲದೆ ಪರಿಹಾರ ಹುಡುಕಲು ಸಾಧ್ಯವಿಲ್ಲ. ಹಾಗಾಗಿ ಬೊಜ್ಜು ಹೆಚ್ಚಾಗಲು ಇರುವ ನಾನಾ ಕಾರಣಗಳನ್ನು ತಿಳಿದುಕೊಳ್ಳಬೇಕು. ಅವು ಈ ಕೆಳಗಿನಂತಿವೆ.
ಇದನ್ನೂ ಓದಿ- ಜಿಡ್ಡುಗಟ್ಟಿದ ಕೊಬ್ಬನ್ನೂ ಬೆಣ್ಣೆಯಂತೆ ಕರಗಿಸುವ 'ಲೋ ಕ್ಯಾಲೋರಿ ಡ್ರಿಂಕ್ಸ್'! ಒಮ್ಮೆ ಟ್ರೈ ಮಾಡಿ...!
1) ಅತಿಯಾದ ಆಹಾರ ಸೇವನೆ: ನಾವು ನಮ್ಮ ದೇಹದ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವನೆ ಮಾಡುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪರಿಣಾಮವಾಗಿ ದೇಹದ ತೂಕವೂ ವರ್ಧಿಸುತ್ತದೆ. ಬೊಜ್ಜು ಶೇಖರಣೆಯಾಗುತ್ತದೆ.
2) ಅನಗತ್ಯವಾದ ಆಹಾರಗಳ ಸೇವನೆ: ನಮಗೆ ಯಾವ ಕಾಲಕ್ಕೆ ಏನನ್ನು ಕೊಡಬೇಕು ಎಷ್ಟು ಕೊಡಬೇಕು? ಯಾವ ಪ್ರದೇಶಕ್ಕೆ ಯಾವ ರೀತಿಯ ಆಹಾರ ಕೊಡಬೇಕು ಎಂಬೆಲ್ಲಾ ವಿಷಯಗಳು ಪ್ರಕೃತಿಗೆ ಚೆನ್ನಾಗಿ ಗೊತ್ತು. ಅದೇ ರೀತಿ ಆಯಾ ಕಾಲಕ್ಕೆ ತಕ್ಕಂತೆ ಕೊಡುತ್ತದೆ. ನಾವು ಅವುಗಳನ್ನಷ್ಟೇ ತಿನ್ನಬೇಕು. ಅದು ಬಿಟ್ಟು, ಯಾವಾಗಲೋ ಯಾವುದೋ ಆಹಾರವನ್ನು ಸೇವಿಸಿದರೆ, ದೇಹಕ್ಕೆ ಅನಗತ್ಯವಾಗಿರುವ ಎಣ್ಣೆ, ಕೊಬ್ಬು, ಕಲರ್, ಪೇಯ ಮತ್ತಿತರ ಆಹಾರ ಪದಾರ್ಥ ಸೇವನೆ ಮಾಡಿದರೆ ಬೊಜ್ಜು ಬರುವುದನ್ನು ತಡೆಯಲು ಸಾಧ್ಯವೇ ಇಲ್ಲ.
3) ದೈಹಿಕ ಚಟುವಟಿಗಳ ಕೊರತೆ: ಮನುಷ್ಯ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದಾ ಕ್ರಿಯಾಶೀಲವಾಗಿರಬೇಕು. ಆದರೆ ಇತ್ತೀಚಿಗೆ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಇದು ಕೂಡ ಬೊಜ್ಜು ಶೇಖರಣೆಗೆ ಪ್ರಮುಖ ಕಾರಣ.
ಬೊಜ್ಜು ಕರಗಿಸುವುದೇಗೆ?
ಮೇಲೆ ಬೊಜ್ಜು ಹೇಗೆ ವಕ್ಕರಿಸುತ್ತದೆ ಎಂದು ಹೇಳಿರುವುದರಲ್ಲೇ ಬೊಜ್ಜನ್ನು ಕರಗಿಸುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವಿದೆ. ಅಂಥ ಆಹಾರ ಪದ್ದತಿಯನ್ನು ಅವಳವಡಿಸಿಕೊಳ್ಳಬೇಕು ಅಷ್ಟೇ. ಅದಕ್ಕೂ ಮಿಗಿಲಾಗಿ ಮಾಡಬೇಕಾದ ಮತ್ತೊಂದು ಕೆಲಸ ಇದೆ. ಅದೇ ‘2 ಗಂಟೆಯ ವಿಷಯ’. ಆ ಎರಡು ಗಂಟೆ ನೀವು ಏನನ್ನೂ ತಿನ್ನದೇ ಇದ್ದರೆ ನಿಮ್ಮ ಮುಕ್ಕಾಲು ಪಾಲು ಅರೋಗ್ಯ ಸಮಸ್ಯೆ ಬಗೆಹರಿಯುತ್ತದೆ.
ಏನದು ‘2 ಗಂಟೆಯ ವಿಷಯ’?
ದಪ್ಪಾಗಿರುವವರ ಪೈಕಿ ಅಥವಾ ಬೊಜ್ಜಿನ ಸಮಸ್ಯೆ ಇರುವವರ ಪೈಕಿ ಬಹುತೇಕರು ಬೆಳಗ್ಗೆ ಏಳುತ್ತಾರೆ, ವಾಕಿಂಗ್, ಜಾಗಿಂಗ್ ಮಾಡುತ್ತಾರೆ. ನಂತರ ಕೆಲಸಕ್ಕೆ ಹೋಗುತ್ತಾರೆ. ಸಂಜೆ ಬಿಡುವಾಗುತ್ತಾರೆ. ಹಾಗೆ ಬಿಡುವಾದಾಗ ಸಂಜೆ 5 ರಿಂದ 7ರ ವೇಳೆಯಲ್ಲಿ ಹೆಚ್ಚು ತಿನ್ನುತ್ತಾರೆ. ಹೆಚ್ಚು ತಿನ್ನುತ್ತಾರೆ ಎನ್ನುವುದಕ್ಕಿಂತ ಏನನ್ನು ತಿನ್ನುತ್ತಾರೆ ಎನ್ನುವುದು ಇನ್ನೂ ಮುಖ್ಯ. ಸ್ನ್ಯಾಕ್ಸ್ ಹೆಸರಿನಲ್ಲಿ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನುತ್ತಾರೆ. ಫ್ರಿಡ್ಜ್ ನಲ್ಲಿ ಇಟ್ಟಿರುವ ಪದಾರ್ಥಗಳನ್ನು ತಿನ್ನುತ್ತಾರೆ. ಯಾವ್ಯಾವುದೋ ಕೆಮಿಕೆಲ್ಸ್ ಮತ್ತು ಪೇಸ್ಟ್ ಗಳನ್ನು ಹಾಕಿ ತಯಾರಿಸುವ ತಿಂಡಿಗಳನ್ನು ತಿನ್ನುತ್ತಾರೆ. ಬೇಕರಿ ಐಟಮ್ ಗಳನ್ನು, ವಿಷೇಶವಾಗಿ ಸಿಹಿ ಪದಾರ್ಥಗಳನ್ನು ತಿನ್ನುತ್ತಾರೆ. ಜೊತೆಗೆ ಕಾಫಿ, ಟಿ, ಜ್ಯುಸ್ ಗಳನ್ನು ಸೇವಿಸುತ್ತಾರೆ. ಅವುಗಳ ಮೂಲಕ ದೇಹದೊಳಕ್ಕೆ ‘ಸ್ವೀಟ್ ಕಂಟೆಂಟ್’ ಸೇರಿಕೊಳ್ಳುತ್ತದೆ. ಆದುದರಿಂದ ಈ 2 ಗಂಟೆ ಏನನ್ನೂ ತಿನ್ನುವುದಿಲ್ಲ ಎಂದು ಪಣತೊಡಬೇಕು.
ಅದ್ಯಾಕೆ ಈ 2 ಗಂಟೆ ಮಾತ್ರ?
ಬೇರೆಲ್ಲಾ ಬಿಟ್ಟು ಅದ್ಯಾಕೆ ಈ 2 ಗಂಟೆ ಮಾತ್ರ ಮುಖ್ಯ? ಎಂದು ನೀವು ಕೇಳಬಹುದು. ಉತ್ತರ ಸರಳ; ಬೇರೆ ಸಂದರ್ಭದಲ್ಲಿ ಹೆಚ್ಚು ಸೇವಿಸುವುದು ಬೇಯಿಸಿದ ಪದಾರ್ಥಗಳನ್ನು. ಈ 2 ಗಂಟೆಗಳಲ್ಲಿ ಹೆಚ್ಚು ಇನ್ ಟೇಕ್ ಆಗುವುದು ಕರಿದ ಪದಾರ್ಥಗಳು. ಬೆಳಿಗ್ಗೆ ಅಥವಾ ಮಧ್ಯಾಹ್ನ ತಿಂದರೆ ಅವುಗಳನ್ನು ಕರಗಿಸಲು ಕ್ರಿಯಾಶೀಲವಾಗಿರಬಹುದು. ಸಂಜೆ ತಿಂದರೆ ಕರಗಿಸುವುದು ಯಾವಾಗ? ಜೊತೆಗೆ ಸಂಜೆ ಈ 2 ಗಂಟೆ ಅವಧಿಯ ಸೇವನೆ ರಾತ್ರಿ ಊಟದ ಮೇಲೆ ಪರಿಣಾಮ ಬೀರುತ್ತದೆ. ಮೊದಲನೆಯದಾಗಿ ರಾತ್ರಿ ಬೇಗ ಊಟ ಮಾಡಲು ಸಾಧ್ಯವಾಗುವುದಿಲ್ಲ. ತಡವಾಗಿ ಮಾಡಿದರೆ ಅದು ಸರಿಯಾಗಿ ಅರಗುವುದಿಲ್ಲ. ಆದುದರಿಂದ ‘ಈ 2 ಗಂಟೆ ಏನನ್ನು ತಿನ್ನಬೇಡಿ’. ನಿಜಕ್ಕೂ ಈ ಸಿಂಪಲ್ ಸೂತ್ರ ವರ್ಕ್ ಔಟ್ ಆಗುತ್ತೆ. ಹೀಗೆ ಮಾಡಿದ ಒಂದೇ ತಿಂಗಳಲ್ಲಿ ಸ್ಲಿಮ್ ಆದ ಸ್ಮಾರ್ಟ್ ಆದ ಅನುಭಾವವೂ ನಿಮ್ಮದಾಗುತ್ತದೆ. ಜೊತೆಗೆ ವೈದ್ಯರ ಸಲಹೆಯ ಮೇರೆಗೆ ನಿಮ್ಮದೆಯಾದ ಲೈಫ್ ಸ್ಟೈಲ್ ಅನ್ನೂ ಅಳವಡಿಸಿಕೊಳ್ಳಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ