ಬೆಂಗಳೂರು : ಬೇಸಿಗೆ ಆರಂಭವಾಗುತ್ತಿದ್ದಂತೆ ಮಾವಿನ ಸೀಸನ್ ಕೂಡಾ ಶುರುವಾಗಿದೆ. ಮಾವಿನ ಹಣ್ಣಿನಲ್ಲಿ ಹಲವು ವಿಧಗಳಿವೆ. ರಸಪುರಿ, ಅಲ್ಫಾನ್ಸೊ, ಮಲ್ಲಿಕಾ, ತೋತಾಪುರಿ, ಬೈಗನಪಲ್ಲಿ, ಪೈರಿ, ನೀಲಂ, ಮಲ್ಗೋವಾ ಹೀಗೆ ನೂರಾರು ತಳಿಗಳಿವೆ. ಈ ಹಣ್ಣಿನ ರುಚಿಯಿಂದಾಗಿ ಮಾವನ್ನು ಇಷ್ಟಪಡದವರು ಬಹಳ ಕಡಿಮೆ. ಮಾವಿನ ಹಣ್ಣು ಮಾತ್ರವಲ್ಲ ಮಾವಿನ ಕಾಯಿಯನ್ನು ಕೂಡಾ ಬಾಯಿ ಚಪ್ಪರಿಸಿಕೊಂಡು ತಿನ್ನುವವರಿದ್ದಾರೆ. ಮಾವಿನ ಕಾಯಿಗೆ ಉಪ್ಪು ಮೆಣಸು ಹಾಕಿಕೊಂಡು ತಿಂದರೆ ಆ ರುಚಿಗೆ ಸಾಟಿಯೇ ಇಲ್ಲ. ಇದೇ ಕಾರಣಕ್ಕೆ ಬೇಸಿಗೆ ಬಂತೆಂದರೆ ಬಹಳಷ್ಟು ಮಂದಿಗೆ ಮಾವಿನಕಾಯಿಗೆ  ಉಪ್ಪು, ಮೆಣಸು ಹಾಕಿ ತಿನ್ನುವ ಅಭ್ಯಾಸವಿರುತ್ತದೆ. 


COMMERCIAL BREAK
SCROLL TO CONTINUE READING

ಬಾಯಿ ರುಚಿ ಜೊತೆ ಆರೋಗ್ಯಕ್ಕೂ ಒಳ್ಳೆಯದು : 
ಮಾವಿನಕಾಯಿಗೆ  ಉಪ್ಪು, ಮೆಣಸು ಹಾಕಿ ತಿನ್ನುವುದರಿಂದ ಅದರ ರುಚಿ ಹೆಚ್ಚುತ್ತದೆ. ಹೀಗೆ ತಿನ್ನುವುದು ಬಾಯಿ ರುಚಿ ಹೆಚ್ಚಿಸುವುದು ಮಾತ್ರವಲ್ಲ ಕೆಲವೊಂದು ಆರೋಗ್ಯ ಲಾಭಗಳನ್ನು ಕೂಡಾ ನೀಡುತ್ತದೆ. ಹಾಗಾದರೆ ಮಾವಿನ ಕಾಯಿ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ. 


ಇದನ್ನೂ ಓದಿ : ಮಕ್ಕಳ ಉತ್ತಮ ಆರೋಗ್ಯಕ್ಕೆ ಈ ಸೂಪರ್‌ಫುಡ್‌ಗಳನ್ನು ತಪ್ಪದೇ ನೀಡಿ


1. ಸಕ್ಕರೆ ಮತ್ತ ಏರಲು ಬಿಡುವುದಿಲ್ಲ   :
ಇತರ ಹಣ್ಣುಗಳಿಗೆ ಹೋಲಿಸಿದರೆ ಮಾವಿನ ಕಾಯಿಯಲ್ಲಿ ಸಕ್ಕರೆಯ ಪ್ರಮಾಣ ಬಹಳ ಕಡಿಮೆ ಇರುತ್ತದೆ. ಹೀಗಾಗಿ ಸಕ್ಕರೆ ಕಾಯಿಲೆ ಇರುವವರು ನಿರ್ಭಯವಾಗಿ ಮಾವಿನ ಕಾಯಿಯನ್ನು ತಿನ್ನಬಹುದು.  ಮಾವಿನ ಕಾಯಿ ಸೇವನೆ ದೇಹದ ರಕ್ತ ಪರಿಚಲನೆಯನ್ನು ಕೂಡಾ  ಸುಧಾರಿಸುತ್ತದೆ.


2. ಹೃದಯದ ಆರೋಗ್ಯಕ್ಕೆ ಬೆಸ್ಟ್ :
ಮಾವಿನಕಾಯಿಯಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅಂಶಗಳು ಸಮೃದ್ಧವಾಗಿದೆ. ಇದು ನಿಯಮಿತ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ರಕ್ತ ಪರಿಚಲನೆ ಸರಿಯಾಗಿ ಇದ್ದರೆ ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ, ಮಾವಿನಕಾಯಿಯಲ್ಲಿ  ಆರೋಗ್ಯಕರ ಉತ್ಕರ್ಷಣ ನಿರೋಧಕಗಳಾದ ಮ್ಯಾಂಜಿಫೆರಿನ್ ಕೂಡಾ ಸಮೃದ್ಧವಾಗಿದೆ. ಇದರಿಂದ ರಕ್ತದ ಒತ್ತಡವೂ ಕಡಿಮೆಯಾಗುತ್ತದೆ. ಹಾಗಾಗಿ ಮಾವಿನಕಾಯಿ ಸೇವನೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. 


ಇದನ್ನೂ ಓದಿ : Health Tips: ಬೆಲ್ಲದ ಅತಿಯಾದ ಸೇವನೆ ಈ ಕಾಯಿಲೆಗಳಿಗೆ ಕಾರಣ


3. ಜೀರ್ಣಕಾರಿ ಸಮಸ್ಯೆ ಸುಧಾರಿಸುತ್ತದೆ :
ಮಾವಿನಕಾಯಿಯಲ್ಲಿ ಜೀರ್ಣಕ್ರಿಯೆಗೆ ಅಗತ್ಯವಾಗಿರುವ ಅಮೈಲೇಸ್ ಎಂಬ ಜೀರ್ಣಕಾರಿ ಕಿಣ್ವಗಳಿರುತ್ತವೆ. ಅಮೈಲೇಸ್ ಕಿಣ್ವಗಳು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ಮಾಲ್ಟೋಸ್ ಮತ್ತು ಗ್ಲೂಕೋಸ್‌ನಂತಹ ಸಕ್ಕರೆಗಳಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಈ ಮೂಲಕ ಜೀರ್ಣಕ್ರಿಯೆಯನ್ನು ಮಾವಿನ ಕಾಯಿ ಸೇವನೆ ಮೂಲಕ ಸುಧಾರಿಸಿಕೊಲ್ಲಬಹುದು. 


4. ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿ : 
ಕೊಲೆಸ್ಟ್ರಾಲ್ ಇತ್ತೀಚಿಗೆ ಬಹುತೇಕರು ಎದುರಿಸುವ ಸಮಸ್ಯೆಯಾಗಿದೆ. ಮಾವಿನ ಕಾಯಿ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದು ಸುಲಭವಾಗುತ್ತದೆ. ಕೊಲೆಸ್ಟ್ರಾಲ್  ನಿಯಂತ್ರಣಕ್ಕೆ ಬಂದರೆ ಅನೇಕ ಕಾಯಿಲೆಗಳಿಂದಲೂ ಪರಿಹಾರ ನೀಡುತ್ತದೆ.  


ಇದನ್ನೂ ಓದಿ : Mango Benefits : ಮಾವಿನ ಗೊರಟದ ಲಾಭ ತಿಳಿದರೆ ತಪ್ಪಿಯೂ ಎಸೆಯಲ್ಲ.. ಈ ರೋಗಕ್ಕೆ ಇದೇ ರಾಮಬಾಣ!


5. ತೂಕ ನಷ್ಟಕ್ಕೆ ಸಹಾಯಕ : 
ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಮಾವಿನ ಕಾಯಿ ಬೆಸ್ಟ್ ಮೆಡಿಸಿನ್. ಮಾವಿನಕಾಯಿಯಲ್ಲಿರುವ ಎನೆನಿನ್  ಎನ್ನುವ ಅಂಶ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಕೆಲವು ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ . ಈ ಮೂಲಕ ಮಾವಿನಕಾಯಿ ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.