ಮಕ್ಕಳ ಉತ್ತಮ ಆರೋಗ್ಯಕ್ಕೆ ಈ ಸೂಪರ್‌ಫುಡ್‌ಗಳನ್ನು ತಪ್ಪದೇ ನೀಡಿ

Diet For Kids: ಪೋಷಕರಿಗೆ ತಮ್ಮ ಮಕ್ಕಳಿಗೆ ಊಟ ಮಾಡಿಸುವುದೇ ದೊಡ್ಡ ಚಾಲೆಂಜ್. ಆರೋಗ್ಯ ತಜ್ಞರ ಪ್ರಕಾರ, ಮಕ್ಕಳಿಗೆ ನೀಡುವ ಆಹಾರ ಅವರ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ, ಅವರ ಮಾನಸಿಕ ಆರೋಗ್ಯದ ಮೇಲೂ ಕೂಡ ಮಹತ್ವದ ಪರಿಣಾಮವನ್ನು ಬೀರುತ್ತದೆ. ಹಾಗಾಗಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಅವರ ಪ್ರತಿ ನಿತ್ಯದ ಡಯಟ್ ನಲ್ಲಿ ಕೆಲವು ಸೂಪರ್‌ಫುಡ್‌ಗಳನ್ನು ಸೇರಿಸುವುದು ಬಹಳ ಮುಖ್ಯ. 

Written by - Yashaswini V | Last Updated : May 4, 2023, 10:02 AM IST
  • ಹಾಲು ಒಂದು ಸಂಪೂರ್ಣ ಆಹಾರ ಎಂದು ನಿಮಗೆ ತಿಳಿದೇ ಇದೆ.
  • ಆದರೆ, ಸುಖಾ ಸುಮ್ಮನೆ ಹಾಲಿಗೆ ಈ ಹೆಸರನ್ನು ನೀಡಲಾಗಿಲ್ಲ.
  • ಹಾಲಿನಲ್ಲಿ ವಿಟಮಿನ್ ಡಿ, ರಂಜಕ, ಕ್ಯಾಲ್ಸಿಯಂ ಸೇರಿದಂತೆ ಮಕ್ಕಳ ಆರೋಗ್ಯಕ್ಕೆ ಅವರ ಬೆಳವಣಿಗೆಗೆ ಪೂರಕವಾದ ಎಲ್ಲಾ ಪೋಷಕಾಂಶಗಳು ಕೂಡ ಕಂಡು ಬರುತ್ತವೆ.
ಮಕ್ಕಳ ಉತ್ತಮ ಆರೋಗ್ಯಕ್ಕೆ ಈ ಸೂಪರ್‌ಫುಡ್‌ಗಳನ್ನು ತಪ್ಪದೇ ನೀಡಿ  title=

Healthy Food For Kids: ತಮ್ಮ ಮಕ್ಕಳು ದೈಹಿಕವಾಗಿ ಫಿಟ್ ಆಗಿರುವುದರ ಜೊತೆಗೆ ಮಾನಸಿಕವಾಗಿಯೂ ಚುರುಕಾಗಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ, ಮಕ್ಕಳಿಗೆ ಏನನ್ನಾದರೂ ತಿನ್ನಿಸುವುದೆಂದರೆ ಅದಕ್ಕಿಂತ ದೊಡ್ಡ ಟಾಸ್ಕ್ ಮತ್ತೊಂದಿಲ್ಲ. ಕೆಲವು ಮಕ್ಕಳಿಗೆ ಕೇವಲ ಸಿಹಿ ಪದಾರ್ಥಗಳಷ್ಟೇ ಪ್ರಿಯವಾದರೆ, ಇನ್ನೂ ಕೆಲವು ಮಕ್ಕಳಿಗೆ ಮಸಾಲೆಯುಕ್ತ ಆಹಾರಗಳೇ ಬೇಕು. ಸದಾ ಹೊರಗಡೆ ಆಹಾರವೇ ಬೇಕು.  ಆದರೆ, ಹಣ್ಣು, ತರಕಾರಿಗಳಂತು ಬೇಡವೇ ಬೇಡ. ಆದರೆ, ಇವೆಲ್ಲವೂ ಅವರ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಬಹಳ ಪರಿಣಾಮಕಾರಿ ಪ್ರಭಾವ ಉಂಟು ಮಾಡುತ್ತವೆ. 
ಇದಕ್ಕಾಗಿ ಅವರ ಆಹಾರದ ಬಗ್ಗೆ ಕಾಳಜಿ ತುಂಬಾ ಅಗತ್ಯ. 

ಮಕ್ಕಳ ತಜ್ಞರ ಪ್ರಕಾರ, ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಾಗಿ ಅವರಿಗೆ ಸಮತೋಳಿತ ಆಹಾರವನ್ನು ನೀಡುವುದು ತುಂಬಾ ಮುಖ್ಯ. ಆರೋಗ್ಯಕ್ಕೆ ಅತಿಯಾದ ಸಿಹಿಯಾದರೂ ಒಳ್ಳೆಯದಲ್ಲ, ಮಸಾಲೆಯೂ ಉತ್ತಮವಲ್ಲ. ಬದಲಿಗೆ ಮಕ್ಕಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆದ, ಅವರ ಮೆದುಳಿನ ಆರೋಗ್ಯವನ್ನು ಚುರುಕುಗೊಳಿಸಬಲ್ಲ ಸೂಪರ್‌ಫುಡ್‌ಗಳನ್ನು ನೀಡುವುದು ತುಜ್ಮ್ಬಾ ಪ್ರಯೋಜನಕಾರಿ ಆಗಿದೆ. 

ಮಕ್ಕಳ ತಜ್ಞರ ಪ್ರಕಾರ, ಪ್ರತಿ ದಿನ ಈ ನಾಲ್ಕು ಸೂಪರ್‌ಫುಡ್‌ಗಳು ಮಕ್ಕಳ ಆಹಾರದಲ್ಲಿದ್ದರೆ ಅವರ ಬ್ರೈನ್ ಕಂಪ್ಯೂಟರ್‌ಗಿಂತ ಫಾಸ್ಟ್ ಆಗಿ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆ ಸೂಪರ್‌ಫುಡ್‌ಗಳು ಯಾವುವು ಎಂದು ತಿಳಿಯೋಣ... 

ಇದನ್ನೂ ಓದಿ- ಉತ್ತಮ ಆರೋಗ್ಯಕ್ಕಾಗಿ ಕೋಲ್ಡ್ ಡ್ರಿಂಕ್ಸ್ ಬದಲಿಗೆ ಈ ನೈಸರ್ಗಿಕ ಪಾನೀಯಗಳನ್ನು ಸೇವಿಸಿ

ಮಕ್ಕಳಿಗೆ ದಿನ ಈ 4 ಸೂಪರ್‌ಫುಡ್‌ಗಳನ್ನು ತಿನ್ನಿಸಿದ್ರೆ ಅವರ ಬ್ರೈನ್ ಕಂಪ್ಯೂಟರ್‌ಗಿಂತ ಫಾಸ್ಟ್ ಆಗುತ್ತಂತೆ!
ಹಾಲು: 

ಹಾಲು ಒಂದು ಸಂಪೂರ್ಣ ಆಹಾರ ಎಂದು ನಿಮಗೆ ತಿಳಿದೇ ಇದೆ. ಆದರೆ, ಸುಖಾ ಸುಮ್ಮನೆ ಹಾಲಿಗೆ ಈ ಹೆಸರನ್ನು ನೀಡಲಾಗಿಲ್ಲ. ಹಾಲಿನಲ್ಲಿ ವಿಟಮಿನ್ ಡಿ, ರಂಜಕ, ಕ್ಯಾಲ್ಸಿಯಂ ಸೇರಿದಂತೆ ಮಕ್ಕಳ ಆರೋಗ್ಯಕ್ಕೆ ಅವರ ಬೆಳವಣಿಗೆಗೆ ಪೂರಕವಾದ ಎಲ್ಲಾ ಪೋಷಕಾಂಶಗಳು ಕೂಡ ಕಂಡು ಬರುತ್ತವೆ. ಹಾಗಾಗಿದೆ, ಮಕ್ಕಳಿಗೆ ನಿತ್ಯ ಬೆಳಿಗ್ಗೆ ಮತ್ತು ಸಂಜೆ ತಪ್ಪದೇ ಹಾಲು ನೀಡಿ. 

* ಮೊಟ್ಟೆ: 
ಮೊಟ್ಟೆಗಳು ಎಲ್ಲಾ ವಯಸ್ಸಿನವರಿಗೂ ಕೂಡ ಸೂಪರ್‌ಫುಡ್‌ ಆಗಿದೆ. ಮಕ್ಕಳಿಗೆ ಒಂದು ವರ್ಷ ತುಂಬಿದ ಬಲಿಕವಷ್ಟೆ ನೀವು ಮಗುವಿಗೆ ಮೊಟ್ಟೆಯನ್ನು ಆಹಾರವಾಗಿ ನೀಡಬಹುದು. ವಾಸ್ತವವಾಗಿ, ಮೊಟ್ಟೆಯಲ್ಲಿ ಪ್ರೊಟೀನ್, ವಿಟಮಿನ್-ಬಿ, ವಿಟಮಿನ್-ಡಿ, ಒಮೆಗಾ-3 ಕೊಬ್ಬಿನಾಮ್ಲ ಮತ್ತು ಫೋಲಿಕ್ ಆಮ್ಲ ಸಮೃದ್ಧವಾಗಿದ್ದು ಇದು ಮಕ್ಕಳ ಮಾನಸಿಕ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 

* ಡ್ರೈ ಫ್ರೂಟ್ಸ್: 
ದ್ರಾಕ್ಷಿ, ಇಲ್ಲವೇ ಗೋಡಂಬಿಯನ್ನು ಬಿಟ್ಟರೆ ಮಕ್ಕಳು ಹೆಚ್ಚಾಗಿ ಒಣ ಹಣ್ಣುಗಳನ್ನು ಇಷ್ಟ ಪಡುವುದಿಲ್ಲ. ಆದರೆ, ಕೇವಲ ದ್ರಾಕ್ಷಿ, ಗೋಡಂಬಿ ಮಾತ್ರವಲ್ಲದೆ, ಬಾದಾಮಿ, ಒಣ ಅಂಜೂರ ಮತ್ತು ವಾಲ್‌ನಟ್ ಕೂಡ ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದು ಮಕ್ಕಳ ಮಾನಸಿಕ ಆರೋಗ್ಯವನ್ನು ಚುರುಕುಗೊಳಿಸುವುದರ ಜೊತೆಗೆ ಅವರನ್ನು ದೈಹಿಕವಾಗಿಯೂ ಬಲಾಡ್ಯರನ್ನಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹಾಗಂತ, ಇವುಗಳನ್ನು ಅತಿಯಾಗಿ ಸೇವಿಸಬಾರದು ಎಂಬುದನ್ನೂ ನೆನಪಿಡಿ. 

ಇದನ್ನೂ ಓದಿ- Health Tips: ಬೆಲ್ಲದ ಅತಿಯಾದ ಸೇವನೆ ಈ ಕಾಯಿಲೆಗಳಿಗೆ ಕಾರಣ

* ಹಸಿರು ಸೊಪ್ಪು ತರಕಾರಿಗಳು: 
ನಿತ್ಯ ತಮ್ಮ ಆಹಾರದಲ್ಲಿ ಸೊಪ್ಪು ತರಕಾರಿಗಳನ್ನು ಸೇವಿಸುವವರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದು ದೈಹಿಕ ಆರೋಗ್ಯಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಹಾಗಾಗಿಯೇ, ಮಕ್ಕಳ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿತ್ಯ ಆವರ ಡಯಟ್ ನಲ್ಲಿ ಹಸಿರು ಸೊಪ್ಪು, ತರಕಾರಿಗಳು, ಹಣ್ಣುಗಳನ್ನು ನೀಡಲು ಮರೆಯದಿರಿ.  

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News