ನವದೆಹಲಿ: ತುಪ್ಪವನ್ನ ರೊಟ್ಟಿ, ಪರಾಟ ಅಥವಾ ಬಿಸಿ ಬಿಸಿ ಸಾಂಬಾರ್ ಅಥವಾ ಖಿಚ್ಡಿ ಜೊತೆ ತಿನ್ನಲು ನಾವು ಇಷ್ಟಪಡುತ್ತೇವೆ. ಹೆಚ್ಚಿನ ಜನರು ಅರಿಶಿನ ಹಾಕಿದ ಹಾಲುನ್ನು ಕುಡಿಯುತ್ತಾರೆ. ಆದರೆ ಹಾಲಿನಲ್ಲಿ ತುಪ್ಪ ಹಾಕಿಕೊಂಡು ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಆಗುವ ಪ್ರಯೋಜನ ಕುರಿತು ಇಂದು ನಾವು ನಿಮಗೆ ತಿಳಿಸಲಿದ್ದೇವೆ. 


COMMERCIAL BREAK
SCROLL TO CONTINUE READING

ತುಪ್ಪ-ಹಾಲು ಮಕ್ಕಳಿಗೆ ಮತ್ತು ವೃದ್ಧರಿಗೆ ತುಂಬಾ ಪ್ರಯೋಜನಕಾರಿ: 
ಆಯುರ್ವೇದದಲ್ಲಿ ಹಾಲಿನಲ್ಲಿ ತುಪ್ಪ ಬೆರೆಸಿ ಕುಡಿಯುವುದರ ಕುರಿತು ಹೇಳಲಾಗಿದೆ. ಇದನ್ನು ಕುಡಿಯುವುದರಿಂದ ಅನೇಕ ರೀತಿಯ ಕಾಯಿಲೆಗಳನ್ನು ಸಹ ದೂರವಿಡಬಹುದು. ಹಸುವಿನ ಶುದ್ಧ ತುಪ್ಪ(Cow Ghee)ದಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ಸಮೃದ್ಧವಾಗಿರುವ ಕಾರಣ ಸೂಪರ್ಫುಡ್ ಎಂದು ಪರಿಗಣಿಸಲಾಗುತ್ತದೆ. ಹಾಲು ದೇಹಕ್ಕೆ ತುಂಬಾ  ಪ್ರಯೋಜನಕಾರಿಯಾಗಿದೆ. ಆದ್ದರಿಂದ ನೀವು ಇಂದಿನಿಂದ ಬಿಸಿ ಹಾಲಿನಲ್ಲಿ ತುಪ್ಪ ಬೆರೆಸಿ ಕುಡಿಯಲು ಪ್ರಾರಂಭಿಸಿ. ಇದು ಮಕ್ಕಳಿಗೆ ವಯಸ್ಸಾದವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.


1. ಆಯಾಸ ತಡೆಗಟ್ಟಲು - ನೀವು ಸಣ್ಣ ಸಣ್ಣ ಕೆಲಸ ಮಾಡುವುದರಿಂದ ತುಂಬಾ ಆಯಾಸ(Weakness and Fatigue) ಅನುಭವಿಸುತ್ತಿದ್ದಾರಾ? ಅದ್ದಕೆ ನೀವು ಪ್ರತಿ ದಿನ ಹಾಲಿನಲ್ಲಿ ತುಪ್ಪ ಬೆರಸಿ ಕುಡಿಯುವುದರಿಂದ ದೇಹದ ದೌರ್ಬಲ್ಯವನ್ನು ನಿವಾರಿಸುತ್ತದೆ ಮತ್ತು ದೈಹಿಕ ಚಟುವಟಿಕೆಯನ್ನು ನಿರ್ವಹಿಸಲು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ.


ಇದನ್ನೂ ಓದಿ : ಬಾಳೆಹಣ್ಣಿನ ಟೀ ಕುಡಿಯಿರಿ.! ನಿದ್ದೆ ಚೆನ್ನಾಗಿ ಬರುತ್ತೆ


2. ಮೂಳೆಗಳು ಮತ್ತು ಕೀಲುಗಳಿಗೆ ಪ್ರಯೋಜನಕಾರಿ- ನಿಮಗೆ ಮೂಳೆಗಳು ಅಥವಾ ಕೀಲುಗಳ ನೋವಿನ(Bone and joints pain) ಸಮಸ್ಯೆಯಿಂದ ಬಳಲುತ್ತಿದ್ದರೆ. ನೀವು ಪ್ರತಿದಿನ ತುಪ್ಪ ಬೆರೆಸಿದ ಹಾಲನ್ನು ಕುಡಿಯಬೇಕು. ತುಪ್ಪವು ಕೀಲುಗಳಲ್ಲಿ ನಯಗೊಳಿಸುವಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ಕೀಲು ನೋವಿನ ಕಿರಿಕಿರಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಹಾಲು ಮೂಳೆಗಳನ್ನು ಬಲಪಡಿಸುತ್ತದೆ.


ಇದನ್ನೂ ಓದಿ : Remdesivir Not Magic Bullet: ರೆಮ್ದೆಸಿವಿರ್ ಕೊರೊನಾ ಸೋಂಕಿಗೆ ಮ್ಯಾಜಿಕ್ ಚಿಕಿತ್ಸೆ ಅಲ್ಲ - AIIMS ನಿರ್ದೇಶಕ


3. ಪುರುಷರಿಗೆ ಪ್ರಯೋಜನಕಾರಿ ಹಾಲು ತುಪ್ಪ- ಅನೇಕ ಲೈಂಗಿಕ ತಜ್ಞರು(Sexologist) ಪುರುಷರಿಗೆ ಹಾಲಿನೊಂದಿಗೆ ಬೆರೆಸಿದ ತುಪ್ಪವನ್ನು ಕುಡಿಯಲು ಸಲಹೆ ನೀಡುತ್ತಾರೆ, ಏಕೆಂದರೆ ಇದು ಕಾಮಾಸಕ್ತಿ ಮತ್ತು ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಆಯಾಸ ಮತ್ತು ದೌರ್ಬಲ್ಯವನ್ನು ಸಹ ತಡೆಗಟ್ಟುತ್ತದೆ ಮತ್ತು ಲೈಂಗಿಕ ಜೀವನವು ಉತ್ತಮಗೊಳಿಸಲು ತುಂಬಾ ಸಹಾಯ ಮಾಡುತ್ತದೆ.


ಇದನ್ನೂ ಓದಿ : Oxygen Level: ಕರ್ಪೂರ, ಅಜ್ವಾಯಿನ್, ಲವಂಗ್ ಹಾಗೂ ನೀಲಗಿರಿ ಎಣ್ಣೆ ಆಕ್ಷಿಜನ್ ಮಟ್ಟ ಹೆಚ್ಚಿಸುತ್ತವೆಯೇ? ಇಲ್ಲಿದೆ ನಿಜಾಂಶ


4. ನಿದ್ರಾಹೀನತೆ ಸಮಸ್ಯೆಗೆ ರಾಮಬಾಣ - ಬಿಸಿ ಹಾಲು ನಿಮಗೆ ಉತ್ತಮ ನಿದ್ರೆ(Good sleep) ಪಡೆಯಲು ಸಹಾಯ ಮಾಡುತ್ತದೆ. ಆದರೆ ನೀವು ಅದಕ್ಕೆ ತುಪ್ಪವನ್ನು ಸೇರಿಸಿದಾಗ, ನಿದ್ರಾಹೀನತೆಯನ್ನು ಇದು ದೂರ ಮಾಡುತ್ತದೆ. ರಾತ್ರಿ ನಿದ್ದೆ ಬರದೇ ಜನರು ನಿದ್ದೆ ಮಾತ್ರೆಗಳನ್ನು ಸೇವಿಸುವ ಬದಲು ಹಾಲಿನಲ್ಲಿ ತುಪ್ಪವನ್ನು ಬೆರೆಸಿ ಸೇವಿಸಿ. 


ಇದನ್ನೂ ಓದಿ : ನಿಮ್ಮ ಲಿವರ್ ಹೆಲ್ತ್ ಕಾಪಾಡಿ.! ಈ 5 ಆಹಾರಗಳಿಂದ ದೂರ ಇರಿ


5. ಗರ್ಭಿಣಿ ಮಹಿಳೆಯರಿಗೆ- ಇದು ಗರ್ಭಿಣಿ ಮಹಿಳೆಯರಿ(Pregnant ladies)ಗೂ ತುಂಬಾ ಪ್ರಯೋಜನಕಾರಿಯಾಗಿದೆ. ಹಾಲಿನಲ್ಲಿ ತುಪ್ಪ ಬೆರಸಿ ಸೇವಿಸುವುದರಿಂದ ಗರ್ಭದಲ್ಲಿ ಬೆಳೆಯುವ ಮಗುವಿನ ಮೂಳೆಗಳು ಬಲಗೊಳ್ಳುತ್ತವೆ ಮತ್ತು ಮಗುವಿನ ಮೆದುಳು ಕೂಡ ತೀಕ್ಷ್ಣವಾಗಿರುತ್ತದೆ. ಅಲ್ಲದೆ, ಮಗುವಿಗೆ ಹಾಲುಣಿಸುವ ತಾಯಂದಿರು ಸಹ ಇದನ್ನು ಸೇವಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.