Remdesivir Not Magic Bullet: ರೆಮ್ದೆಸಿವಿರ್ ಕೊರೊನಾ ಸೋಂಕಿಗೆ ಮ್ಯಾಜಿಕ್ ಚಿಕಿತ್ಸೆ ಅಲ್ಲ - AIIMS ನಿರ್ದೇಶಕ

Remdesivir Not Magic Bullet - ದೇಶದ ಉನ್ನತ ವೈದ್ಯಕೀಯ ತಜ್ಞರ ಪ್ರಕಾರ, ರೆಮಿಡಿವಿರ್ ಕೋವಿಡ್ -19 ರೋಗಿಗಳ ಮರಣವನ್ನು ಕಡಿಮೆ ಮಾಡುವುದಿಲ್ಲ, ಸರಿಯಾದ ಸಮಯದಲ್ಲಿ ಅದನ್ನು ಬಳಸದಿದ್ದರೆ, ಲಾಭಕ್ಕಿಂತ ಅದರಿಂದ ನಷ್ಟ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.  

Written by - Nitin Tabib | Last Updated : Apr 19, 2021, 09:44 PM IST
  • ಕೊರೊನಾ ಮೃತ್ಯುದರ ಇಳಿಕೆಯಲ್ಲಿ ರೆಮ್ದೆಸಿವಿರ್ ಪಾತ್ರ ಸೀಮಿತ
  • ಅಷ್ಟೇ ಯಾಕೆ Fevipiravir ಪಾತ್ರ ಕೂಡ ಸೀಮಿತ
  • ಸರಿಯಾದ ಸಮಯಕ್ಕೆ ಬಳಸದಿದ್ದರೆ ಲಾಭಕ್ಕಿಂತ ಹಾನಿಯ ಅಪಾಯ ಜಾಸ್ತಿ.
Remdesivir Not Magic Bullet: ರೆಮ್ದೆಸಿವಿರ್ ಕೊರೊನಾ ಸೋಂಕಿಗೆ ಮ್ಯಾಜಿಕ್ ಚಿಕಿತ್ಸೆ ಅಲ್ಲ - AIIMS ನಿರ್ದೇಶಕ title=
Remdesivir Not Magic Bullet (File Photo)

ನವದೆಹಲಿ: Remdesivir Not Magic Bullet - ದೇಶಾದ್ಯಂತ ಕೊರೊನಾ ಮಹಾಮಾರಿಯ (Corona Pandemic) ಹೆಚ್ಚಾಗುತ್ತಿರುವ ಪ್ರಕರಣಗಳ ನಡುವೆ ಮತ್ತು ಅದರಿಂದ ಉದ್ಭವಿರಿಸುವ ಭೀತಿಯ ವಾತಾವರಣದ ನಡುವೆ ಅತಿ ಹೆಚ್ಚು ಚರ್ಚೆಗೆ ಒಳಗಾಗಿರುವ ಔಷಧಿ ಎಂದರೆ ಅದು ರೆಮ್ದೆಸಿವಿರ್ (Remesivir). ದೇಶಾದ್ಯಂತ ಆಕಸ್ಮಿಕವಾಗಿ ಈ ಔಷಧಿಯ ಬೇಡಿಕೆ ವ್ಯಾಪಕ ಹೆಚ್ಚಾಗತೊಡಗಿದೆ. ಏತನ್ಮಧ್ಯೆ ಈ ಔಷಧಿಗೆ ಸಂಬಂಧಿಸಿದಂತೆ ದೇಶಾದ್ಯಂತ ಕಂಡುಬರುತ್ತಿರುವ ಅತಿ ಉತ್ಸಾಹದ ಕುರಿತು ದೇಶದ ಉನ್ನತ ಆರೋಗ್ಯ ತಜ್ಞರು ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ. ರೆಮೆಡೆಸಿವಿರ್ ಔಷದಿಯನ್ನು ಕರೋನದ ಮ್ಯಾಜಿಕ್ ಡಾಟ್ ಔಷಧಿ ಎಂದು ಪರಿಗಣಿಸಬಾರದು  ಎಂದು ತಜ್ಞರು ಹೇಳಿದ್ದಾರೆ. ಈ ಔಷಧಿಯ ಬಳಕೆಯಿಂದ ಕರೋನಾ ರೋಗಿಗಳ ಸಾವಿನ ಪ್ರಮಾಣ ಇಳಿಕೆಯಾಗಿರುವ ಕುರಿತು ಇದುವರೆಗೆ ಯಾವುದೇ ಅಧಿಕೃತ ಪುರಾವೆಗಳಿಲ್ಲ ಎಂದು ಅವರು ಹೇಳಿದ್ದಾರೆ. ಸೋಂಕಿನ ಆರಂಭಿಕ ಹಂತಗಳಲ್ಲಿ ಈ ಔಷಧಿಯನ್ನು ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.

ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವವರಿಗೆ ರೆಮ್ದೆಸಿವಿರ್ ನೀಡಬೇಡಿ: AIIMS  ನಿರ್ದೇಶಕ
ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿರುವ AIIMS ನಿರ್ದೇಶಕ ಡಾ. ರಂದೀಪ್ ಗುಲೆರಿಯಾ, (Dr. Ranadeep Guleria) ರೀಮೇಡೆಸಿವಿರ್ ಔಷಧಿಯನ್ನು ಕೇವಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಮಾತ್ರ ನೀಡಬೇಕು ಮತ್ತು ಅದೂ ಕೂಡ ಆ ರೋಗಿಯ ಲಕ್ಷಣ ಹಾಗೂ ಹಂತವನ್ನು ಆಧರಿಸಿ ನೀಡಬೇಕು ಎಂದಿದ್ದಾರೆ. ಆಕ್ಸಿಜನ್ ಸ್ಯಾಚ್ಯುರೇಶನ್ ಮಟ್ಟ ಕೆಳಗೆ ಜಾರುತ್ತಿರುವ  ಮತ್ತು ಪುಪ್ಪುಸದಲ್ಲಿ ಸೋಂಕಿನ ಅಂಶ ಇರುವ ಕುರಿತು ದೃಢಪಟ್ಟ ರೋಗಿಗಳಿಗೆ ಮಾತ್ರ ಈ ಔಷಧಿಯನ್ನು ನೀಡಬೇಕು ಎಂದಿದ್ದಾರೆ.

ಆರಂಭಿಕ ಹಂತದಲ್ಲಿ ರೆಮ್ದೆಸಿವಿರ್ ನೀಡುವುದು ಹಾನಿಕಾರಕ: ಗುಲೇರಿಯಾ
ಈ ಕುರಿತು ಜನರಿಗೆ ಎಚ್ಚರಿಕೆ ನೀಡಿರುವ ರಾ. ರಣದೀಪ್ ಗುಲೇರಿಯಾ, ಕಾಯಿಲೆಯ ಆರಂಭಿಕ ಹಂತದಲ್ಲಿ ಈ ಔಷಧಿಯನ್ನು ನೀಡುವುದರಿಂದ ಯಾವುದೇ ರೀತಿಯ ಲಾಭವಿಲ್ಲ. ಆದರೆ, ಇದರ ಅಡ್ಡಪರಿಣಾಮಗಳು ಶರೀರಕ್ಕೆ ಮತ್ತಷ್ಟು ಹಾನಿ ತಲುಪಿಸಲಿವೆ ಎಂದಿದ್ದಾರೆ. ಇನ್ನೊಂದೆಡೆ ರೋಗ ಅತಿ ಜಾಸ್ತಿಯಾದ ಸಂದರ್ಭದಲ್ಲಿಯೂ ಕೂಡ ಈ ಔಷದಿಯನ್ನು ನೀಡುವುದರಿಂದ ಯಾವುದೇ ಲಾಭವಿಲ್ಲ. ಹೀಗಾಗಿ ರೋಗ ಮಧ್ಯಾವಸ್ಥೆಯಲ್ಲಿರುವಾಗ ಮಾತ್ರ ಇದನ್ನು ಪ್ರಯೋಗಿಸಬೇಕು ಎಂದು ಹೇಳಿದ್ದಾರೆ. 

ರೆಮ್ದೆಸಿವಿರ್ ನಿಂದ ಸಾವಿನ ದರ ಇಳಿಕೆಯ ಯಾವುದೇ ಪುರಾವೆಗಳಿಲ್ಲ
ರೆಮ್ದೆಸಿವಿರ್ ಬಳಕೆಯಿಂದ ಕೊರೊನಾ ರೋಗಿಗಳ ಸಾವಿನ ದರ ಇಳಿಕೆಯಾದ ಕುರಿತು ಇದುವರೆಗೆ ಯಾವುದೇ ನಿಶ್ಚಿತ ಪುರಾವೆಗಳಿಲ್ಲ. ಈ ರೋಗಕ್ಕೆ ಇದುವರೆಗೆ ಯಾವುದೇ ಸ್ಪಷ್ಟ ಆಂಟಿಬಯೋಟಿಕ್ ಔಷಧಿ ಮಾರುಕಟ್ಟೆಯಲ್ಲಿ ಇಲ್ಲದಿರುವ ವಿಪರೀತ ಪರಿಸ್ಥಿತಿಯಲ್ಲಿ ಬಲವಂತವಾಗಿ ನಾವು ಈ ಔಷಧಿಯನ್ನು ಬಳಸುತ್ತಿದ್ದೇವೆ ಮತ್ತು ಇದನ್ನು ಸೀಮಿತ ಪ್ರಮಾಣದಲ್ಲಿಯೇ ಬಳಕೆಯಾಗಬೇಕು ಮತ್ತು ಅದೂ ಕೂಡ ತುಂಬಾ ಜಾಗ್ರತೆಯಿಂದ ಬಳಕೆಯಾಗಬೇಕು ಎಂದು ಡಾ. ಗುಲೇರಿಯಾ ಹೇಳಿದ್ದಾರೆ.

ಕೆಮಿಸ್ಟ್ ಅಂಗಡಿಗಳಲ್ಲಿ ರೆಮ್ದೆಸಿವಿರ್ ಮಾರಾಟ ಉಚಿತವಲ್ಲ: ಡಾ.ಪಾಲ್ 
ಇನ್ನೊಂದೆಡೆ ನೀತಿ ಆಯೋಗದ ಸದಸ್ಯ (ಆರೋಗ್ಯ ವಿಭಾಗ )ರೂ ಆಗಿರುವ ಡಾ. ಪಾಲ್ (Dr. Paul) ಹೇಳುವ ಪ್ರಕಾರ, ರೆಮ್ದೆಸಿವಿರ್ ಔಷಧಿಯ ಪ್ರಯೋಗ ಮನೆಯಲ್ಲಿಯೇ ಇದ್ದುಕೊಂಡು ಚಿಕಿತ್ಸೆ ಪಡೆಯುವವರ ಮೇಲೆ ನಡೆಸುವುದು ಉಚಿತವಲ್ಲ. ಅಷ್ಟೇ ಅಲ್ಲ ಕೆಮಿಸ್ಟ್ ಅಂಗಡಿಗಳಲ್ಲಿಯೂ ಈ ಔಷಧಿಯ ಮಾರಾಟ ಉಚಿತವಲ್ಲ. ಕೊರೊನಾ ಮೃತ್ಯುದರ ಕಡಿಮೆ ಮಾಡುವಲ್ಲಿ ಈ ಔಷಧಿಯ ಯಾವುದೇ ನಿಖರ ಪುರಾವೆಗಳಿಲ್ಲ ಎಂಬ ಡಾ. ಗುಲೆರಿಯಾ ಅವರ ಹೇಳಿಕೆಗೆ ಡಾ. ಪಾಲ್ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಅತಿ ಸೀಮಿತ ಮತ್ತು ತುರ್ತುಪರಿಸ್ಥಿತಿಯಲ್ಲಿ ಈ ಔಷಧಿ ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಡಾ. ಪಾಲ್ ಹೇಳಿದ್ದಾರೆ.

ಕೊವಿಡ್-19 ಚಿಕಿತ್ಸೆಯಲ್ಲಿ ಪ್ಲಾಸ್ಮಾ ಥೆರಪಿ ಪಾತ್ರ ಸೀಮಿತವಾಗಿದೆ: ಗುಲೆರಿಯಾ
ಇದುವರೆಗೆ ನಡೆಸಲಾಗಿರುವ ಅಧ್ಯಯನ ಗಳು ಕೊವಿಡ್ -19 (Covid-19) ಚಿಕಿತ್ಸೆಯಲ್ಲಿ ಪ್ಲಾಸ್ಮಾ ಥೆರಪಿ ಪಾತ್ರ ತುಂಬಾ ಸೀಮಿತವಾಗಿದೆ ಎಂಬುದನ್ನು ಸಾರುತ್ತಿವೆ ಎಂದು ಗುಲೆರಿಯಾ ಹೇಳಿದ್ದಾರೆ. ಈ ಥೆರಪಿಯಿಂದ ಯಾವುದೇ ವಿಶೇಷ ಲಾಭ ಸಿಗುತ್ತದೆ ಎಂಬುದಕ್ಕೆ ಪುರಾವೆಗಳಿಲ್ಲ ಎಂದು ಅವರು ಹೇಳಿದ್ದಾರೆ. 

ಸ್ಟೆರಾಯಿಡ್ ಗಳಿಂದ ಲಾಭ ಆದರೆ, ರೋಗದ ಆರಂಭಿಕ ಹಂತದಲ್ಲಿ ಬಳಕೆ ಬೇಡ 
ಕೊವಿಡ್ 19 ಸೋಂಕಿಗೆ ಗುರಿಯಾದ ಕೆಲ ರೋಗಿಗಳಿಗೆ ಸ್ಟೆರಾಯಿಡ್ ಔಷಧಿಗಳನ್ನು ನೆಡುವುದರಿಂದ ಲಾಭವಾಗುತ್ತದೆ. ಆದರೆ, ಕಾಯಿಲೆಯ ಆರಂಭಿಕ ಹಂತದಲ್ಲಿ ಈ ಔಷಧಿಯ ಬಳಕೆ ಲಾಭಕ್ಕಿಂತ ಹಾನಿ ತಲುಪಿಸುವ ಅಪಾಯ ಹೆಚ್ಚು ಎಂದಿದ್ದಾರೆ. ಸ್ಟೆರಾಯಿಡ್ ಔಷಧಿಗಳನ್ನು ಕಾಯಿಲೆಯ ಯಾವ ಹಂತದಲ್ಲಿ ನೀಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳುವುದು ತುಂಬಾ ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ- Latest News On Corona Vaccination: May 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಕೂಡ ಲಸಿಕೆ, ಮಾರುಕಟ್ಟೆಯಲ್ಲಿಯೂ ಸಿಗಲಿದೆ ಲಸಿಕೆ

ಆಂಟಿ-ವೈರಲ್ ಔಷಧಿಯಾಗಿರುವ Favipiravir ನಿಂದ ಮೃತ್ಯುದರ ಇಳಿಕೆಯಾಗುವ ಯಾವುದೇ ಪುರಾವೆಗಳಿಲ್ಲ
ಕೊವಿಡ್ 19 ಚಿಕಿತ್ಸೆಗೆ ಬಳಕೆಯಾಗುವ Favipiravir ಆಂಟಿ ವೈರಲ್ ಔಷಧಿಯ ಡೇಟಾ ಕೂಡ ಅಷ್ಟೊಂದು ಸಮಾಧಾನಕರವಾಗಿಲ್ಲ ಎಂದು ಡಾ. ಗುಲೇರಿಯಾ ಹೇಳಿದ್ದಾರೆ. ಅಷ್ಟೇ ಯಾಕೆ ಕೊವಿಡ್ 19ನ ನ್ಯಾಷನಲ್ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಪ್ರೋಟೋಕಾಲ್ ಗಳಲ್ಲಿಯೂ ಕೂಡ ಈ ಔಷಧಿಯನ್ನು ಶಾಮೀಲುಗೊಳಿಸಲಾಗಿಲ್ಲ. ಹೀಗಾಗಿ ಇಂತಹ ಔಷಧಿಗಳನ್ನು ನೀಡುವುದರಿಂದ ಲಾಭಕ್ಕಿಂತ ಹೆಚ್ಚು ಹಾನಿಯಾಗುವ ಅಪಾಯ ಹೆಚ್ಚಾಗಿದೆ ಎಂದು ಡಾ. ಗುಲೆರಿಯಾ ಹೇಳಿದ್ದಾರೆ.

ಇದನ್ನೂ ಓದಿ- ಕರ್ಪೂರ, ಅಜ್ವಾಯಿನ್, ಲವಂಗ್ ಹಾಗೂ ನೀಲಗಿರಿ ಎಣ್ಣೆ ಆಕ್ಷಿಜನ್ ಮಟ್ಟ ಹೆಚ್ಚಿಸುತ್ತವೆಯೇ?

ಗಾಳಿಯಿಂದ ಕೊರೊನಾ ಹರಡುತ್ತದೆ ಎಂಬುದು ಹೊಸ ಮಾಹಿತಿಯಾಗಿದೆ: ಡಾ. ಪಾಲ್ 
ಗಾಳಿಯಿಂದ ಕೊರೊನಾ ಹರಡುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಡಾ. ಪಾಲ್, ಇದರಿಂದ ಹೊಸ ಸಂಗತಿಗಳು ಕಲಿಯಲು ಸಿಗುವ ಸಾಧ್ಯತೆ ಇದೆ. ಈ ಹೊಸ ಸಂಗತಿ ಬಹಿರಂಗಗೊಂಡ ಬಳಿಕವೂ ಕೂಡ, ಈ ಮಾರಕ ವೈರಸ್ ನಿಂದ ಪಾರಾಗಲು ಮಾಸ್ಕ್ ತುಂಬಾ ಪ್ರಭಾವಶಾಲಿ ಅಸ್ತ್ರವಾಗಿದೆ  ಎಂಬುದು ಮತ್ತೊಮ್ಮೆ ಸಿದ್ಧವಾಗಿದೆ. ಇದರ ಜೊತೆಗೆ ಸಾಮಾಜಿಕ ಅಂತರ ಕಾಯುವುದು ಹಾಗೂ ಉತ್ತಮ ವೆಂಟಿಲೆಶನ್ ಕಾಯ್ದುಕೊಳ್ಳುವುದು ತುಂಬಾ ಆವಶ್ಯಕವಾಗಿದೆ ಎಂದು ಡಾ. ಪಾಲ್ ಹೇಳಿದ್ದಾರೆ.

ಇದನ್ನೂ ಓದಿ- ಗಾಳಿಯ ಮೂಲಕ ಹರಡುತ್ತಿದೆ ಕೊರೊನಾ, ಮೊಟ್ಟಮೊದಲ ಬಾರಿಗೆ ಇದನ್ನು ಒಪ್ಪಿಕೊಂಡ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News