ಬೆಂಗಳೂರು : ಇವತ್ತು ವಿಶ್ವ ಲಿವರ್ ಡೇ (Liver day). ಪ್ರತಿ ವರ್ಷ ಏಪ್ರಿಲ್ 19 ರಂದು ವಿಶ್ವ ಯಕೃತ್ತಿನ ದಿನ ಎಂದು ಆಚರಿಸಲಾಗುತ್ತದೆ. ಲಿವರ್ ನಮ್ಮ ದೇಹದ ಪ್ರಮುಖ ಭಾಗವಾಗಿದೆ. ಮತ್ತು ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಲಿವರ್ (Liver) ಸಾಕಷ್ಟು ಸಹಾಯ ಮಾಡುತ್ತದೆ. ಹಾಗಾಗಿ ಲಿವರ್ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಇಂದು, ವಿಶ್ವ ಲಿವರ್ ದಿನದಂದು ಲಿವರ್ ಆರೋಗ್ಯ (Liver Health) ಕಾಪಾಡುವುದು ಹೇಗೆ. ಲಿವರ್ ಹೇಗೆ ಹಾನಿಯಾಗುತ್ತದೆ ಎಂಬುದರ ಬಗ್ಗೆ ತಿಳಿಯೊಣ.
1.ರೆಡ್ ಮೀಟ್ : ರೆಡ್ ಮೀಟ್ (Red meat) ಸಾಕಷ್ಟು ಪ್ರೋಟೀನ್ ಅನ್ನು ಹೊಂದಿರುತ್ತದೆ. ಹಾಗಾಗಿ, ಅದನ್ನು ಜೀರ್ಣಿಸಿಕೊಳ್ಳುವುದು ತುಂಬಾ ಕಷ್ಟ. ರೆಡ್ ಮೀಟ್ ಸೇವನೆಯಿಂದ ಲಿವರ್ ನಲ್ಲಿ ಪ್ರೋಟೀನ್ (protein) ಸಂಗ್ರಹವಾಗುತ್ತದೆ. ಇದರಿಂದಾಗಿ ಲಿವರ್ ಹಾನಿಯಾಗುವ ಅಪಾಯವಿದೆ.
ಇದನ್ನೂ ಓದಿ : Watermelon Benefits: ಪುರುಷರು ಬೇಸಿಗೆಯಲ್ಲಿ 'ಕಲ್ಲಂಗಡಿ' ಸೇವಿಸುವುದರಿಂದ ಆರೋಗ್ಯಕ್ಕಿದೆ ಭಾರಿ ಲಾಭ!
2.ಫಾಸ್ಟ್ ಫುಡ್ : ಫ್ರೆಂಚ್ ಫ್ರೈಸ್, ಬರ್ಗರ್ (burger), ಪಿಜ್ಜಾ ಇತ್ಯಾದಿ ಫಾಸ್ಟ್ ಫುಡ್ ಗಳಲ್ಲಿ ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬು ಇರುತ್ತದೆ. ಈ ವಸ್ತುಗಳ ಅತಿಯಾದ ಸೇವನೆಯು ಲಿವರ್ (Liver) ಸಿರೋಸಿಸ್ ಕಾಯಿಲೆ ಉಂಟಾಗಬಹುದು.
3.ರೆಡಿಮೇಡ್ ಆಹಾರ : ರೆಡಿಮೇಡ್ ಆಹಾರದಲ್ಲಿ ಹೆಚ್ಚಿನ ಸೋಡಿಯಂ ಅಂಶವಿರುತ್ತದೆ. ಸೋಡಿಯಂ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹದೊಳಗಿನ ದ್ರವವು ಅಸಮತೋಲನಗೊಳ್ಳುತ್ತದೆ. ಈ ಕಾರಣದಿಂದಾಗಿ, ಪಿತ್ತಜನಕಾಂಗದ ಫಿಲ್ಟರ್ ಮಾಡುವ ಪ್ರಕ್ರಿಯೆಗೆ ಅಡಚಣೆ ಉಂಟಾಗುತ್ತದೆ.
ಇದನ್ನೂ ಓದಿ : Banana For Weight Loss: ಸುಲಭವಾಗಿ ತೂಕ ಇಳಿಸಲು ಈ ರೀತಿಯ ಬಾಳೆಹಣ್ಣು ಬಳಸಿ
4.ಕೋಲ್ಡ್ ಡ್ರಿಂಕ್ಸ್ : ಸೋಡಾ (Soda) ಮತ್ತು ತಂಪು ಪಾನೀಯಗಳನ್ನು ಸೇವಿಸುವುದು ನಿಮ್ಮ ಲಿವರ್ ಗೆ ಸಮಸ್ಯೆ ಉಂಟುಮಾಡಬಹುದು. ಈ ರೀತಿಯ ಡ್ರಿಂಕ್ಸ್ ಬೊಜ್ಜು ಉಂಟು ಮಾಡುತ್ತದೆ. ಇದರಿಂದ ಲಿವರ್ ನಲ್ಲಿ ಕೊಬ್ಬು ಬೆಳೆಯುತ್ತದೆ..
5.ಆಲ್ಕೊಹಾಲ್ : ಅತಿಯಾದ ಆಲ್ಕೊಹಾಲ್ (Alcohol) ಸೇವನೆಯಿಂದಾಗಿ, ಲಿವರ್ ಡ್ಯಾಮೇಜಾಗುತ್ತೆ. ಇದರಿಂದ ಲಿವರಿಗೆ ಸಂಬಂಧಿಸಿದ ಹಲವು ಕಾಯಿಲೆಗಳು ಉಂಟಾಗುತ್ತದೆ.
ಇದನ್ನೂ ಓದಿ : ಸೂಪ್, ಜ್ಯೂಸ್ ಬದಲಿಗೆ ಒಂದೇ ಒಂದು ಕಪ್ ತಿಳಿ ಸಾರು ಕುಡಿಯಿರಿ.! ಬದಲಾವಣೆ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.